
ಹೈದರಾಬಾದ್: ರೀಲ್ಸ್ ಹುಚ್ಚಾಟದಿಂದ ಮದ್ಯದ ಅಮಲಿನಿಂದ ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಇದರಿಂದಾಗಿ ಹೈದರಾಬಾದ್-ಬೆಂಗಳೂರು ನಡುವಿನ ಮಾರ್ಗದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ರೈಲು ಸೇವೆಯಲ್ಲಿ ವಿಳಂಬವಾಗಿದೆ. ಗುರುವಾರ ಬೆಳಗ್ಗೆ ವಿಕಾರಾಬಾದ್ ಜಿಲ್ಲೆಯ ಶಂಕರಪಲ್ಲಿ ಬಳಿ ಈ ಘಟನೆ ನಡೆದಿದೆ.
ಯುವತಿ ಶಂಕರ್‌ಪಲ್ಲಿಯಿಂದ ಹೈದರಾಬಾದ್ ಕಡೆಗೆ ನೇರವಾಗಿ ಹಳಿಗಳ ಮೇಲೆ ಕಾರನ್ನು ಚಲಾಯಿಸುತ್ತಿರುವುದು ಕಂಡುಬಂದಿದೆ. ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನೂ ವೇಗವಾಗಿ ಚಾಲನೆ ಮಾಡಿದ್ದಾಳೆ. ಸುದೀರ್ಘ ಬೆನ್ನಟ್ಟಿದ ಬಳಿಕ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ.
ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಇದೊಂದು ಗಂಭೀರ ಭದ್ರತಾ ಲೋಪ ಎಂದು ಬಣ್ಣಿಸಿದ್ದಾರೆ. ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆ ಹೇಗೆ ರೈಲ್ವೆ ಹಳಿ ಪ್ರವೇಶಿಸಿದಳು ಮತ್ತು ಆಕೆಯ ಅಜಾಗರೂಕ ಕೃತ್ಯಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಪರಿಣಾಮವಾಗಿ ಯಾವುದೇ ಗಾಯಗಳು ಅಥವಾ ಅಪಘಾತಗಳು ವರದಿಯಾಗಿಲ್ಲ.
Advertisement