'AK-203 ಶಸ್ತ್ರಸಜ್ಜಿತ ಡ್ರೋನ್': ರಕ್ಷಣಾ ತಂತ್ರಜ್ಞಾನದಲ್ಲಿ AI ಬಳಕೆ; ಬೆಂಗಳೂರು ಸಂಸ್ಥೆ ಸಾಧನೆ; Video

ಬೆಂಗಳೂರು ಮೂಲದ ಸಂಸ್ಥೆಯೊಂದು ಕೃತಕ ಬುದ್ದಿಮತ್ತೆ (AI) ಸಹಿತ AK-203 ಶಸ್ತ್ರಸಜ್ಜಿತ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ.
Drone armed with AK-203
AI ಸಹಿತ AK-203 ಶಸ್ತ್ರಸಜ್ಜಿತ ಡ್ರೋನ್
Updated on

ಬೆಂಗಳೂರು: ಭಾರತೀಯ ಸೇನೆ ಆಧುನಿಕ ಯುದ್ಧ ಸಿದ್ಧತೆಗಳಲ್ಲಿ ತೊಡಗಿದ್ದು, ಇದೀಗ ಸೇನೆಗೆ ಆಧುನಿಕ ತಾಂತ್ರಿಕ ಟಚ್ ನೀಡಲಾಗುತ್ತಿದ್ದು, ಬೆಂಗಳೂರು ಮೂಲದ ಸಂಸ್ಥೆಯೊಂದು ಕೃತಕ ಬುದ್ದಿಮತ್ತೆ (AI) ಸಹಿತ AK-203 ಶಸ್ತ್ರಸಜ್ಜಿತ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ.

ವಾಯುಗಾಮಿ ಗುರಿಯನ್ನು ಸಾಧಿಸುವ ಸಾಮರ್ಥ್ಯವಿರುವ ಎಕೆ -203 ರೈಫಲ್ ಹೊಂದಿದ ಡ್ರೋನ್ ಅನ್ನು ಅನಾವರಣಗೊಳಿಸಲಾಗಿದ್ದು, ಬೆಂಗಳೂರಿನಲ್ಲಿ ದೂರಸ್ಥ ಯುದ್ಧದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ಬೆಂಗಳೂರು ಮೂಲದ ರಕ್ಷಣಾ ಕಂಪನಿ, BSS ಅಲೈಯನ್ಸ್ (ಭಾರತ್ ಸಪ್ಲೈ ಮತ್ತು ಸರ್ವಿಸ್), ಕಡಿಮೆ ಎತ್ತರದ ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಬಂದೂಕನ್ನು ಹೊಂದಿದ ಡ್ರೋನ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಆಗಸದಲ್ಲಿರುವಾಗಲೇ ಶತ್ರು ಪಾಳಯದ ಗುರಿಗಳ ಮೇಲೆ ಗುಂಡು ಹಾರಿಸಬಲ್ಲದಾಗಿದೆ.

ಈ ವಿಶೇಷ ಡ್ರೋನ್ ಅನ್ನು ಆಕ್ರಮಣಕಾರಿ ರೈಫಲ್‌ನೊಂದಿಗೆ ಸಂಯೋಜಿಸಲಾಗಿದ್ದು, ಇದು AK-203 ರೈಫಲ್ ಅನ್ನು ಹೊಂದಿದೆ. ಕಣ್ಗಾವಲು ಮತ್ತು ದೂರಸ್ಥ ಸಂಪರ್ಕಕ್ಕೆ ಸಮರ್ಥವಾಗಿದೆ. ಈ ಅತ್ಯಾಧುನಿಕ ವ್ಯವಸ್ಥೆಯನ್ನು ಇತ್ತೀಚೆಗೆ ಭಾರತೀಯ ಸೇನೆಯ ಸಹಯೋಗದೊಂದಿಗೆ ಪರೀಕ್ಷಿಸಲಾಯಿತು. ಆ ಮೂಲಕ ಭಾರತದ ಮೊದಲ AI ಸಹಿತ ಮಾರಕ ಶಸ್ತ್ರಾಸ್ತ್ರ ಪ್ರಯೋಗವನ್ನು ಜೂನ್ 2025 ರಲ್ಲಿ ನಡೆಸಲಾಯಿತು.

Drone armed with AK-203
Terror Camps: ಬುದ್ಧಿ ಕಲಿಯದ ಪಾಕಿಸ್ತಾನ; ಭಾರತ ಧ್ವಂಸಗೊಳಿಸಿದ ಉಗ್ರರ ಕ್ಯಾಂಪ್, ಲಾಂಚ್ ಪ್ಯಾಡ್ ಮರು ನಿರ್ಮಾಣ!

ಈ ವಾರದ ಆರಂಭದಲ್ಲಿ, BSS ಅಲೈಯನ್ಸ್ ಭಾರತೀಯ ಸೇನೆಯ ಸಹಭಾಗಿತ್ವದಲ್ಲಿ ಭಾರತದ ಮೊದಲ AI-ಚಾಲಿತ LMG ಶಸ್ತ್ರಾಸ್ತ್ರ ವ್ಯವಸ್ಥೆಯ ಪ್ರಯೋಗವನ್ನು ನಡೆಸಿತು. ಈ ವ್ಯವಸ್ಥೆಯು ಕಾರ್ಯಾಚರಣೆಗಾಗಿ 7.62×51 mm ಬ್ಯಾರೆಲ್‌ನೊಂದಿಗೆ ಇಸ್ರೇಲಿ ನೆಗೆವ್ ಲೈಟ್ ಮೆಷಿನ್ ಗನ್ ಅನ್ನು ಬಳಸಿತು. ಕೃತಕ ಬುದ್ಧಿಮತ್ತೆಯ ಮೂಲಕ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯು ರಿಮೋಟ್ ಇಂಟರ್ಫೇಸ್ ಬಳಸಿ ಗುರಿಗಳನ್ನು ಪತ್ತೆಹಚ್ಚಲು ಮತ್ತು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.

ಈ ಬಗ್ಗೆ ಮಾತನಾಡಿರುವ BSS ಅಲೈಯನ್ಸ್‌ನ ಸಹ-ಸಂಸ್ಥಾಪಕಿ ವಿಕ್ಕಿ ಚೌಧರಿ ದೂರದರ್ಶನದ ಸಂದರ್ಶನದಲ್ಲಿ ಮಾತನಾಡುತ್ತಾ, 'ಭಾರತದಲ್ಲಿ .50 ಕ್ಯಾಲಿಬರ್ ವರೆಗಿನ ಯಾವುದೇ ಬಂದೂಕಿನಿಂದ ಗುಂಡು ಹಾರಿಸಬಹುದಾದ ಮೊದಲ AI-ಚಾಲಿತ ಆಯುಧ ಇದಾಗಿದೆ. ವಿಶ್ವಾದ್ಯಂತ ಕೆಲವೇ ಕಂಪನಿಗಳು ಸ್ವಾಯತ್ತ ಮಾರಕ ಆಯುಧ ವ್ಯವಸ್ಥೆಗಳ ಯಶಸ್ವಿ ಪ್ರಯೋಗಗಳನ್ನು ನಡೆಸಿವೆ ಎಂದು ಅವರು ಹೇಳಿದರು.

ಅಂತೆಯೇ ಪ್ರಯೋಗಗಳ ಸಮಯದಲ್ಲಿ, AI-ಸಕ್ರಿಯಗೊಳಿಸಿದ ವೇದಿಕೆಯು 300 ಮೀಟರ್ ದೂರದಲ್ಲಿ ಗುರಿಗಳನ್ನು ಗುರುತಿಸಿತು ಮತ್ತು 600 ಮೀಟರ್ ವರೆಗೆ ಅವುಗಳನ್ನು ನಿಖರವಾಗಿ ಹೊಡೆದುರುಳಿಸಿತು. ಆಯುಧದ ಪರಿಣಾಮಕಾರಿ ವ್ಯಾಪ್ತಿಯನ್ನು 1,000 ಮೀಟರ್ ಎಂದು ರೇಟ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Drone armed with AK-203
'Operation Sindoor' ಪ್ರಮುಖ ಪಾತ್ರವಹಿಸಿದ್ದ IPS ಪರಾಗ್ ಜೈನ್ RAW ನೂತನ ಮುಖ್ಯಸ್ಥ!

ವೈಶಿಷ್ಟ್ಯ ಮತ್ತು ತಾಂತ್ರಿಕ ವಿವರ

AI-ಆಧಾರಿತ ಆಯುಧ ವ್ಯವಸ್ಥೆಯು ಉಷ್ಣ ಮತ್ತು ಆಪ್ಟಿಕಲ್ ಸಂವೇದಕಗಳನ್ನು ಹೊಂದಿದ್ದು ಇವು ಕಡಿಮೆ ಗೋಚರತೆಯಲ್ಲೂ ಗುರಿಗಳನ್ನು ಪತ್ತೆಹಚ್ಚುತ್ತವೆ. ಗಾಳಿ, ತಾಪಮಾನ ಮತ್ತು ದೂರವನ್ನು ಆಧರಿಸಿ ಬ್ಯಾಲಿಸ್ಟಿಕ್ ಮಾರ್ಗಗಳನ್ನು ಲೆಕ್ಕಾಚಾರ ಮಾಡಲು ಅನುವು ಮಾಡಿಕೊಡುತ್ತದೆ. ಆಯುಧವನ್ನು ಎನ್‌ಕ್ರಿಪ್ಟ್ ಮಾಡಿದ ರಿಮೋಟ್ ಸಂವಹನ ಜಾಲದ ಮೂಲಕ ನಿರ್ವಹಿಸಬಹುದಾಗಿದೆ.

BSS ಅಲೈಯನ್ಸ್ ಪ್ರಕಾರ, ಏಪ್ರಿಲ್ 5 ರಂದು ರೂರ್ಕಿಯಲ್ಲಿ ಆರಂಭಿಕ ಪರೀಕ್ಷೆಗಳು ಪ್ರಾರಂಭವಾದವು. 14,500 ಅಡಿ ಎತ್ತರದ ಪರಿಸ್ಥಿತಿಗಳಲ್ಲಿಯೂ ಈ ವ್ಯವಸ್ಥೆಯನ್ನು ಪರೀಕ್ಷಿಸಲಾಯಿತು. ಈ ಆಯುದವು ಬಂಕರ್ ಒಳಗೆ 21 ದಿನಗಳವರೆಗೆ ಸ್ವಾಯತ್ತವಾಗಿ ತನ್ನ ಕೃತಕ ಬುದ್ದಿಮತ್ತೆಯನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಹಿಸಬಲ್ಲದು. ಸ್ಥಿರವಾದ ಮೌಂಟ್ ಬಳಸಿ ವಾಹನಗಳು ಮತ್ತು ನೌಕಾ ಹಡಗುಗಳಲ್ಲಿಯೂ ಈ ಆಯುಧ ವ್ಯವಸ್ಥೆಯನ್ನು ಅಳವಡಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com