ಹೈದರಾಬಾದ್‌: ತೆಲುಗಿನ ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ

ಶುಕ್ರವಾರ ರಾತ್ರಿ ಸ್ವೇಚಾ ವಿ ಅವರ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Stop Suicide
ಸಾಂಕೇತಿಕ ಚಿತ್ರ
Updated on

ಹೈದರಾಬಾದ್: ಪ್ರಮುಖ ತೆಲುಗು ಚಾನೆಲ್‌ನ 40 ವರ್ಷದ ಪತ್ರಕರ್ತೆ ಮತ್ತು ಸುದ್ದಿ ನಿರೂಪಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಸ್ವೇಚಾ ವಿ ಅವರ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆಕೆಯ ತಂದೆ ನೀಡಿದ ದೂರಿನ ಮೇರೆಗೆ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ತಮ್ಮ ಮಗಳ ಸಾವಿಗೆ ಕಾರಣ ಎಂದು ಆರೋಪಿಸಿರುವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ನಿರೂಪಕಿಯ ನಿಧನಕ್ಕೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಸಂತಾಪ ಸೂಚಿಸಿದ್ದಾರೆ.

'ಉತ್ತಮ ಪತ್ರಕರ್ತೆ, ಬರಹಗಾರ್ತಿ ಮತ್ತು ಸಮರ್ಪಿತ ತೆಲಂಗಾಣಿಗರ ಸ್ವೇಚ್ಛಾ ವೋತಾರ್ಕರ್ ಅವರ ದುರದೃಷ್ಟಕರ ನಿಧನದ ಬಗ್ಗೆ ಕೇಳಿ ತೀವ್ರ ದುಃಖವಾಯಿತು. ನನಗೆ ಮಾತುಗಳೇ ಸಾಲುತ್ತಿಲ್ಲ' ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಇದನ್ನು ಓದುವ ಪ್ರತಿಯೊಬ್ಬರಿಗೂ - ಜೀವನವು ಕಠಿಣ ಎಂದು ನೀವು ಎಂದಾದರೂ ಭಾವಿಸಿದರೆ, ದಯವಿಟ್ಟು ವೃತ್ತಿಪರರನ್ನು ಸಂಪರ್ಕಿಸಲು ಹಿಂಜರಿಯಬೇಡಿ. ಜೀವನ ಇರುವುದು ಬದುಕುವುದಕ್ಕಾಗಿ ಮತ್ತು ಯಾವಾಗಲೂ ಬೆಂಬಲ ಲಭ್ಯವಿರುತ್ತದೆ' ಎಂದು ರಾಮರಾವ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com