
ರೂರ್ಕಿ: ಭೀಕರ ಅಪಘಾತ ಪ್ರಕರಣವೊಂದರಲ್ಲಿ ಚಿಕ್ಕ ಗೊಂದಲದಿಂದಾಗಿ ಯುವತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉತ್ತರಾಖಂಡದ ರೂರ್ಕಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬರು SUV ಕಾರಿಗೆ ಸಿಲುಕಿ ಸಾವನ್ನಪ್ಪಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಸೋಮವಾರ ಬೆಳಿಗ್ಗೆ ರೂರ್ಕಿ ಕೊಟ್ವಾಲಿ ಪ್ರದೇಶದ ಜಾದುಗರ್ ರಸ್ತೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕೀರ್ತಿ ಎಂಬ ಯುವತಿ ರಸ್ತೆ ತಿರುವಿನಲ್ಲಿ ಮಳೆಯ ನಡುವೆಯೇ ಛತ್ರಿ ಹಿಡಿದು ರಸ್ತೆ ದಾಟುತ್ತಿದ್ದರು.
ಈ ವೇಳೆ ರೆನಾಲ್ಟ್ ಡಸ್ಟರ್ ಎಸ್ ಯುವಿ ಕಾರು ತಿರುವಿನಲ್ಲಿ ಬಂದಿದೆ. ಕಾರನ್ನು ಯುವತಿ ನೋಡಿದ್ದು, ಕಾರಿನ ಚಾಲಕ ಕೂಡ ಯುವತಿಯನ್ನು ನೋಡಿ ಬ್ರೇಕ್ ಹಾಕಿ ಸ್ಲೋ ಮಾಡಿದ್ದಾನೆ.
ಗೊಂದಲಕ್ಕೆ ಯುವತಿ ಸಾವು
ಆದರೆ ಕಾರು ನಿಲ್ಲುತದೆ ಎಂದು ಭಾವಿಸಿದ ಯುವತಿ ರಸ್ತೆ ದಾಟಲು ಮುಂದಾಗಿದೆ. ಇದೇ ವೇಳೆ ಕಾರಿನ ಚಾಲಕ ಕೂಡ ಕಾರನ್ನು ಕೊಂಚ ಮೂವ್ ಮಾಡಿದ್ದು ಈ ವೇಳೆ ಕಾರು ಯುವತಿಯ ಮೇಲೆ ಹರಿದಿದೆ. ಇದನ್ನು ಕಂಡ ಸ್ಥಳೀಯರು ಕಿರುಚಿಕೊಂಡಿದ್ದು, ಚಾಲಕ ಕೂಡಲೇ ಕಾರನ್ನು ನಿಲ್ಲಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಕಾರು ಯುವತಿ ಮೇಲೆ ಹರಿದಿದೆ. ದುರಾದೃಷ್ಟವಶಾತ್ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಏತನ್ಮಧ್ಯೆ, ಪೊಲೀಸರು ಅಪಘಾತದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Advertisement