ಪಾಕ್ ಸಿನಿಮಾ, ಹಾಡು ಪ್ರಸಾರ ನಿಲ್ಲಿಸಿ: OTT, ಇತರ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳಿಗೆ ಕೇಂದ್ರ ಸೂಚನೆ

8 ಪ್ರಮುಖ ಪಾಸ್ಟ್ ಕಾಸ್ಟ್ ಪ್ಲಾಟ್ ಫಾರ್ಮ್ ಗಳಲ್ಲದೆ 60 OTT ಫ್ಲಾಟ್ ಫಾರ್ಮ್ ಗಳು, ಇಂಟರ್ನೆಟ್‌ನಲ್ಲಿ ಸ್ಟ್ರೀಮಿಂಗ್ ಮೀಡಿಯಾ ಅಥವಾ ವೀಡಿಯೊಗಳು ಭಾರತದಲ್ಲಿ ಲಭ್ಯವಿದೆ.
Casual Images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ತಕ್ಷಣದಿಂದ ಜಾರಿಗೆ ಬರುವಂತೆ ಪಾಕ್ ಮೂಲದ ಚಲನಚಿತ್ರಗಳು, ಹಾಡುಗಳು ಮತ್ತು ಪಾಡ್‌ಕಾಸ್ಟ್‌ಗಳು ಸೇರಿದಂತೆ ವಿಷಯವನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ OTT ಸೇವಾ ಪೂರೈಕೆದಾರರು ಮತ್ತು ಮಾಧ್ಯಮ ಸ್ಟ್ರೀಮಿಂಗ್ ಮಧ್ಯವರ್ತಿಗಳಿಗೆ ಗುರುವಾರ ಸೂಚಿಸಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ, ನೀತಿಸಂಹಿತೆ) ನಿಯಮಗಳು, 2021 ಅನ್ನು ಉಲ್ಲೇಖಿಸಿರುವ ಸಚಿವಾಲಯ, ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಲ್ಲಿ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳು, ಮಾಧ್ಯಮ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೂಡಲೇ ಜಾರಿಗೆ ಬರುವಂತೆ ಪಾಕ್ ಮೂಲದ ಚಲನಚಿತ್ರಗಳು, ಹಾಡುಗಳು, ಪಾಡ್‌ಕಾಸ್ಟ್ ಆಧಾರಿತ ಮಾದರಿ ಆಧಾರಿತ ಮಾಧ್ಯಮಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಹತ್ಯೆಯಾದ ಘಟನೆಯನ್ನು ಸಚಿವಾಲಯ ಉಲ್ಲೇಖಿಸಿದೆ.

Casual Images
'ಊಹಿಸಲಾಗದ ನಿಖರತೆ'ಯೊಂದಿಗೆ ಆಪರೇಷನ್ ಸಿಂಧೂರ್: ಭಾರತೀಯ ಸೇನೆಗೆ ರಾಜನಾಥ್ ಸಿಂಗ್ ಅಭಿನಂದನೆ

ಅಮೆಜಾನ್ ಮ್ಯೂಸಿಕ್, ಆ್ಯಪಲ್ ಮ್ಯೂಸಿಕ್, ಸೌಂಡ್ ಕ್ಲೌಡ್, Spotify, ಯೂ ಟ್ಯೂಬ್ ಮ್ಯೂಸಿಕ್ ನಂತಹ 8 ಪ್ರಮುಖ ಪಾಸ್ಟ್ ಕಾಸ್ಟ್ ಪ್ಲಾಟ್ ಫಾರ್ಮ್ ಗಳಲ್ಲದೆ 60 OTT ಫ್ಲಾಟ್ ಫಾರ್ಮ್ ಗಳು, ಇಂಟರ್ನೆಟ್‌ನಲ್ಲಿ ಸ್ಟ್ರೀಮಿಂಗ್ ಮೀಡಿಯಾ ಅಥವಾ ವೀಡಿಯೊಗಳು ಭಾರತದಲ್ಲಿ ಲಭ್ಯವಿದೆ.

ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ, ವಿದೇಶಿ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಮಾಹಿತಿಯನ್ನು ಪ್ರಸಾರ, ಅಪ್ ಲೋಡ್ ಮಾಡದಂತೆ ಅಥವಾ ಹಂಚಿಕೊಳ್ಳದಂತೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com