ಕೇರಳದಲ್ಲಿ ಮತ್ತೆ Nipah ಕೇಸ್ ಪತ್ತೆ, ತೀವ್ರ ಕಟ್ಟೆಚ್ಚರ!

ಗುರುವಾರ ಕೇರಳದ ಮಲಪ್ಪುರಂನಲ್ಲಿ ಮಾರಕ ನಿಫಾ ವೈರಸ್‌ನ ಮತ್ತೊಂದು ಸೋಂಕು ಪ್ರಕರಣ ವರದಿಯಾಗಿದ್ದು, 2018 ರಿಂದ ರಾಜ್ಯದಲ್ಲಿ ಏಳನೇ ಪ್ರಕರಣ ಇದಾಗಿದೆ.
Kerala Confirms Another Nipah Case
ಕೇರಳದಲ್ಲಿ ನಿಫಾ ವೈರಸ್ ಸೋಂಕು
Updated on

ತಿರುವನಂತಪುರ: ನೆರೆಯ ಕೇರಳದಲ್ಲಿ ಮತ್ತೆ ಮಾರಕ ನಿಫಾ (Nipah) ವೈರಾಣು ಭೀತಿ ಆರಂಭವಾಗಿದ್ದು, ಗುರುವಾರ ಮತ್ತೊಂದು ಪ್ರಕರಣ ವರದಿಯಾಗಿದೆ.

ಗುರುವಾರ ಕೇರಳದ ಮಲಪ್ಪುರಂನಲ್ಲಿ ಮಾರಕ ನಿಫಾ ವೈರಸ್‌ನ ಮತ್ತೊಂದು ಸೋಂಕು ಪ್ರಕರಣ ವರದಿಯಾಗಿದ್ದು, 2018 ರಿಂದ ರಾಜ್ಯದಲ್ಲಿ ಏಳನೇ ಪ್ರಕರಣ ಇದಾಗಿದೆ.

ಮಲಪ್ಪುರಂ ಜಿಲ್ಲೆಯ ವಲಂಚೇರಿಯ ನಿವಾಸಿ 42 ವರ್ಷದ ಮಹಿಳೆ ಸೋಂಕಿಗೆ ತುತ್ತಾಗಿದ್ದು, ಸೋಂಕಿತ ಮಹಿಳೆ ಪ್ರಸ್ತುತ ಪೆರಿಂಥಲ್ಮನ್ನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಅಧಿಕಾರಿಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೋಝಿಕ್ಕೋಡ್ ಮೈಕ್ರೋಬಯಾಲಜಿ ಲ್ಯಾಬ್ ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV)ಯಲ್ಲಿ ನಡೆಸಿದ ಪರೀಕ್ಷೆಗಳ ನಂತರ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಮಲಪ್ಪುರಂ ಜಿಲ್ಲೆಯಲ್ಲಿ ನಿಪಾ ವೈರಸ್ ಏಕಾಏಕಿ ಕಾಣಿಸಿಕೊಂಡಿರುವುದು ಇದು ಮೂರನೇ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಫಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಒಂದು ಪ್ರಾಣಿಜನ್ಯ ವೈರಸ್ ಆಗಿದೆ. 1998 ರಲ್ಲಿ ಮಲಯ ವಿಶ್ವವಿದ್ಯಾಲಯದ ಸಂಶೋಧಕರು ಮೊದಲು ಮಲೇಷ್ಯಾದಲ್ಲಿ ಗುರುತಿಸಿದ ಈ ರೋಗಕ್ಕೆ ಸುಂಗೈ ನಿಫಾ ಗ್ರಾಮದ ಹೆಸರನ್ನು ಇಡಲಾಯಿತು.

Kerala Confirms Another Nipah Case
ನಿಫಾ ವೈರಸ್ ಸೋಂಕು: ಲಕ್ಷಣಗಳು, ಚಿಕಿತ್ಸೆ (ಕುಶಲವೇ ಕ್ಷೇಮವೇ)

ಈ ವೈರಸ್ ಹೆಚ್ಚಿನ ಸಾವಿನ ಪ್ರಮಾಣಕ್ಕೆ ಕುಖ್ಯಾತಿ ಗಳಿಸಿದೆ. ಆಂದರೆ ಈ ಸೋಂಕು ತಗುಲಿದವರ ಪೈಕಿ ಶೇ. 75 ರಷ್ಟು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಅಲ್ಲದೆ ಈ ವೈರಸ್ ಸಾಂಕ್ರಾಮಿಕ ರೋಗವನ್ನು ಪ್ರಚೋದಿಸುವ ಸಾಮರ್ಥ್ಯ ಹೊಂದಿದೆ.

ಹರಡುವಿಕೆಯು ಮುಖ್ಯವಾಗಿ ಬಾವಲಿಗಳು, ಹಂದಿಗಳು, ಕಲುಷಿತ ಹಣ್ಣುಗಳು ಅಥವಾ ಮಾನವನಿಂದ ಮಾನವ ಸಂಪರ್ಕದ ಮೂಲಕ ಸಂಭವಿಸುತ್ತದೆ. ಮಾನವರಲ್ಲಿ ರೋಗಲಕ್ಷಣಗಳು ಲಕ್ಷಣರಹಿತ ಸೋಂಕಿನಿಂದ ಹಿಡಿದು ತೀವ್ರವಾದ ಉಸಿರಾಟದ ಕಾಯಿಲೆಯವರೆಗೆ ಇರಬಹುದು ಎಂದು ತಜ್ಞರು ಹೇಳಿದ್ದಾರೆ.

ಆರಂಭಿಕ ಲಕ್ಷಣಗಳಲ್ಲಿ ತಲೆನೋವು, ಸ್ನಾಯು ನೋವು, ವಾಂತಿ ಮತ್ತು ಗಂಟಲು ನೋವು ಇರುತ್ತವೆ. ಕೆಲವು ಸಂದರ್ಭಗಳಲ್ಲಿ ತೀವ್ರ ಉಸಿರಾಟದ ಸಮಸ್ಯೆಗಳು, ವಿಲಕ್ಷಣ ನ್ಯುಮೋನಿಯಾ ಮತ್ತು ಎನ್ಸೆಫಾಲಿಟಿಸ್‌ನಂತಹ ನರವೈಜ್ಞಾನಿಕ ತೊಡಕುಗಳಾಗಿ ಮುಂದುವರಿಯುತ್ತದೆ. ಇತರ ಲಕ್ಷಣಗಳಲ್ಲಿ ತಲೆತಿರುಗುವಿಕೆ, ಅರೆನಿದ್ರಾವಸ್ಥೆ ಮತ್ತು ಪ್ರಜ್ಞೆ ಇಲ್ಲದಿರುವಿಕೆಯಂತಹ ಲಕ್ಷಣಗಳು ಗೋಚರಿಸುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com