ಪರಮಾಣು ಅಸ್ತ್ರದ 'ಪೊಳ್ಳು' ಬೆದರಿಕೆ ಇನ್ನು ಮುಂದೆ ಪಾಕಿಸ್ತಾನವನ್ನು ಕಾಪಾಡುವುದಿಲ್ಲ: ಭಾರತ
ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತದ ಪ್ರತಿಕ್ರಿಯೆಯಲ್ಲಿ ಹೊಸ ಚೈತನ್ಯ ಸಿಕ್ಕಿದ್ದು, ಗಡಿ ನಿಯಂತ್ರಣ ರೇಖೆ (LOC) ಅಂತರರಾಷ್ಟ್ರೀಯ ಗಡಿ (IB) ಮತ್ತು ಪರಮಾಣು ಅಸ್ತ್ರದ ಬೆದರಿಕೆಯು ಇನ್ನು ಮುಂದೆ ಪಾಕಿಸ್ತಾನವನ್ನು ರಕ್ಷಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಡೆದ ಭಾರತದ ಪ್ರತೀಕಾರದ ನಂತರ ಪಾಕಿಸ್ತಾನದ ಪರಮಾಣು ಅಸ್ತ್ರದ ಬೆದರಿಕೆಯನ್ನು ಬ್ಲಫ್(FAKE) ಎಂದು ಕರೆದಿದ್ದೇವೆ ಎಂದು ಸರ್ಕಾರದ ಮೂಲಗಳು ಹೇಳಿಕೊಂಡಿವೆ.
ಭಾರತ ಪರಮಾಣು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೂ, 'ನಮ್ಮ ದೇಶದಲ್ಲಿ ಭಯೋತ್ಪಾದನೆ ಮಾಡಲು ಪಾಕಿಸ್ತಾನಕ್ಕೆ ಸುಮ್ಮನೆ ಬಿಡುವುದಿಲ್ಲ ಎಂದು ಉನ್ನತ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪಾಕಿಸ್ತಾನ ಉಧಮ್‌ಪುರದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಪ್ರಧಾನಿ ಮೋದಿ ನೀಡಿದ್ದ ಭರವಸೆಯಂತೆ ಪಾಕಿಸ್ತಾನದ ಎಂಟು ವಾಯುನೆಲೆಗಳನ್ನು ಭಾರತ ನೆಲಸಮಗೊಳಿಸಿದೆ. ನಾವು ಅವರ ವಾಯುನೆಲೆಗಳನ್ನು ಹೊಡೆದ ತಕ್ಷಣ ಪಾಕಿಸ್ತಾನವು ತನ್ನ ರಾಗವನ್ನು ಬದಲಾಯಿಸಿತು" ಎಂದು ಅವರು ಹೇಳಿದ್ದಾರೆ.
ಮರುದಿನ ಬೆಳಿಗ್ಗೆ US ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರೂಬಿಯೊ ಅವರು ಭಾರತದ ವಿದೇಶಾಂಗ ಸಚಿವರಿಗೆ ಕರೆ ಮಾಡಿ ಭಾರತದ ತಾಕತ್ತನ್ನು "ಪಾಕಿಸ್ತಾನ ಅರ್ಥಮಾಡಿಕೊಂಡಿದೆ" ಎಂದು ಹೇಳಿರುವುದಾಗಿ ಅಧಿಕಾರಿಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ