ಎಲ್ಲರನ್ನೂ ಸಮಾನವಾಗಿ ನಡೆಸಿಕೊಂಡರೆ ಮುಸ್ಲಿಂ ವ್ಯಕ್ತಿ ಬಹುಪತ್ನಿಯರನ್ನು ಹೊಂದಬಹುದು: ನ್ಯಾಯಾಲಯ

ಅಲಹಾಬಾದ್ ಹೈಕೋರ್ಟ್ ತನ್ನ 18 ಪುಟಗಳ ತೀರ್ಪಿನಲ್ಲಿ, ಫರ್ಕಾನ್ ಅವರ ಇಬ್ಬರೂ ಪತ್ನಿಯರು ಮುಸ್ಲಿಮರಾಗಿರುವುದರಿಂದ ಅವರ ಎರಡನೇ ವಿವಾಹವು ಮಾನ್ಯವಾಗಿದೆ ಎಂದು ಹೇಳಿದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಎಲ್ಲ ಪತ್ನಿಯರನ್ನು ಸಮಾನವಾಗಿ ನಡೆಸಿಕೊಂಡರೆ ಬಹು ವಿವಾಹವಾಗುವ ಅರ್ಹತೆ ಹೊಂದಿರುತ್ತಾನೆ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಕುರಾನ್ ಅಡಿಯಲ್ಲಿ 'ಮಾನ್ಯ ಕಾರಣಕ್ಕಾಗಿ' ಷರತ್ತುಬದ್ಧವಾಗಿ ಬಹುಪತ್ನಿತ್ವಕ್ಕೆ ಅವಕಾಶ ನೀಡಲಾಗಿದೆ. ಆದರೆ, ಪುರುಷರು "ಸ್ವಾರ್ಥ ಕಾರಣಗಳಿಗಾಗಿ" ಅದನ್ನು "ದುರುಪಯೋಗಪಡಿಸಿಕೊಳ್ಳುತ್ತಾರೆ" ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಮೊರಾದಾಬಾದ್‌ನ ನ್ಯಾಯಾಲಯವು ಫರ್ಕಾನ್ ಎಂಬ ವ್ಯಕ್ತಿಯ ವಿರುದ್ಧ ಹೊರಡಿಸಿದ ಆರೋಪಪಟ್ಟಿ, ದೂರು ಮತ್ತು ಸಮನ್ಸ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರಿದ್ದ ಏಕಸದಸ್ಯ ಪೀಠವು ಈ ಹೇಳಿಕೆ ನೀಡಿದೆ.

2020ರಲ್ಲಿ ಮಹಿಳೆಯೊಬ್ಬರು ಫರ್ಕಾನ್ ವಿರುದ್ಧ ದೂರು ನೀಡಿದ್ದು, ಅವರು ಈಗಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆಂದು ತಿಳಿಸದೆ ತನ್ನನ್ನು ಮದುವೆಯಾಗಿದ್ದಾರೆ. ಫರ್ಕಾನ್ ತಮ್ಮ ಮದುವೆ ಸಮಯದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ, ಮೊರಾದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫರ್ಕಾನ್ ಸೇರಿದಂತೆ ಮೂವರು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಫರ್ಕಾನ್ ಪರ ವಕೀಲರು, ಮಹಿಳೆ ಫರ್ಕಾನ್ ಜೊತೆ ಸಂಬಂಧ ಹೊಂದಿದ ನಂತರವೇ ಆತನನ್ನು ಮದುವೆಯಾಗಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 494 ರ ಅಡಿಯಲ್ಲಿ ಈಗಾಗಲೇ ಇನ್ನೊಬ್ಬರನ್ನು ಮದುವೆಯಾಗಿರುವ ವ್ಯಕ್ತಿಯನ್ನು ಮದುವೆಯಾಗುವುದು ಅಮಾನ್ಯ ಎಂದು ವಾದಿಸಿದರು.

Representational image
ಮದುವೆಯಾದರೆ ಪತಿಗೆ ಪತ್ನಿ ಮೇಲೆ ಮಾಲೀಕತ್ವ ಅಥವಾ ನಿಯಂತ್ರಣ ಸಿಗುವುದಿಲ್ಲ: ಅಲಹಾಬಾದ್ ಹೈಕೋರ್ಟ್

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರ ವಾದ ಮಂಡಿಸಿದ ನ್ಯಾಯಮೂರ್ತಿ ದೇಸ್ವಾಲ್, ಮುಸ್ಲಿಂ ಪುರುಷನಿಗೆ ನಾಲ್ಕು ಬಾರಿ ಮದುವೆಯಾಗಲು ಅವಕಾಶವಿರುವುದರಿಂದ ಆ ವ್ಯಕ್ತಿ ಅಪರಾಧ ಎಸಗಿಲ್ಲ. ಬಹುಪತ್ನಿತ್ವಕ್ಕೆ ಅವಕಾಶ ನೀಡುವ ಕುರಾನ್‌ನ ಹಿಂದೆ ಒಂದು ಐತಿಹಾಸಿಕ ಕಾರಣವಿದೆ. ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು 1937ರ ಶರಿಯತ್ ಕಾಯ್ದೆಯ ಪ್ರಕಾರ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದರು.

ಅಲಹಾಬಾದ್ ಹೈಕೋರ್ಟ್ ತನ್ನ 18 ಪುಟಗಳ ತೀರ್ಪಿನಲ್ಲಿ, ಫರ್ಕಾನ್ ಅವರ ಇಬ್ಬರೂ ಪತ್ನಿಯರು ಮುಸ್ಲಿಮರಾಗಿರುವುದರಿಂದ ಅವರ ಎರಡನೇ ವಿವಾಹವು ಮಾನ್ಯವಾಗಿದೆ ಎಂದು ಹೇಳಿದೆ.

ಮುಂದಿನ ವಿಚಾರಣೆಗೆ ನ್ಯಾಯಾಲಯವು ಮೇ 26 ರಂದು ದಿನಾಂಕ ನಿಗದಿ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com