ತೃತೀಯ ಲಿಂಗಿಯಂತೆ 'ಅಶ್ಲೀಲ ವಿಡಿಯೋ'ದಲ್ಲಿ ವೈದ್ಯ ಪತಿ: FIR ದಾಖಲಿಸಿದ ಪತ್ನಿ; ಆರೋಪಿ ಹೇಳಿದ್ದೇನು?

ಸಂತ ಕಬೀರ್ ನಗರ ಜೈಲಿನಲ್ಲಿ ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಪತಿಯ ವಿರುದ್ಧ ಮಹಿಳೆ ಎಫ್ ಐಆರ್ ದಾಖಲಿಸಿದ್ದಾರೆ.
Casual Images
ಸಾಂದರ್ಭಿಕ ಚಿತ್ರ
Updated on

ಲಖನೌ: ಆನ್‌ಲೈನ್‌ನಲ್ಲಿ ವಯಸ್ಕರ ಕಂಟೆಂಟ್ ಬ್ರೌಸ್ ಮಾಡುತ್ತಾ, ಮಹಿಳೆಯಂತೆ ಡ್ರೆಸ್ ಹಾಕಿಕೊಂಡು ಮತ್ತೊಬ್ಬ ವ್ಯಕ್ತಿಯೊಂದಿಗೆ ಅಶ್ಲೀಲ ವೀಡಿಯೋ ಮಾಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿದ್ದಾರೆ. ಗೋರಖ್‌ಪುರ ಜಿಲ್ಲೆಗೆ ಹೊಂದಿಕೊಂಡಿರುವ ಸಂತ ಕಬೀರ್ ನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಂತ ಕಬೀರ್ ನಗರ ಜೈಲಿನಲ್ಲಿ ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಪತಿಯ ವಿರುದ್ಧ ಮಹಿಳೆ ಎಫ್ ಐಆರ್ ದಾಖಲಿಸಿದ್ದಾರೆ. ನಕಲಿ ಹೆಸರಿನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗಳನ್ನು ಹಣ ಪಾವತಿ ನೋಡುವ ವಯಸ್ಕರ paidAdult platforms ಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ವಿಗ್ ಮತ್ತು ಮಹಿಳೆಯರ ಬಟ್ಟೆಗಳನ್ನು ಧರಿಸಿ ಮತ್ತು ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿರುವ ವೀಡಿಯೊದಲ್ಲಿರುವ ವ್ಯಕ್ತಿ ತನ್ನ ಪತಿ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ವೀಡಿಯೊದಲ್ಲಿನ ಪೀಠೋಪಕರಣಗಳು ಈ ಹಿಂದೆ ಡಾಕ್ಟರ್ ವಾಸಿಸುತ್ತಿದ್ದ ಖಲೀಲಾಬಾದ್ (ಸಂತ ಕಬೀರ್ ನಗರ) ನಲ್ಲಿರುವ ಜಿಲ್ಲಾ ಜೈಲು ಸಂಕೀರ್ಣದಲ್ಲಿರುವ ಅವರ ಅಧಿಕೃತ ನಿವಾಸದವು ಎಂದು ದೂರುದಾರರು ಹೇಳಿದ್ದಾರೆ. ದೃಶ್ಯಗಳಲ್ಲಿ ಕಂಡುಬರುವ ವಾಲ್‌ಪೇಪರ್, ಪರದೆಗಳು ಮತ್ತು ಪೀಠೋಪಕರಣಗಳನ್ನು ನಾನೇ ಆಯ್ಕೆ ಮಾಡಿದ್ದೆ. ಇದು ಮನೆಯನ್ನು ತಾತ್ಕಾಲಿಕವಾಗಿ ಸ್ಟುಡಿಯೋ ಆಗಿ ಬಳಸಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೇ 18 ರಂದು ಈ ಕುರಿತು ಪತಿಯೊಂದಿಗೆ ಜಗಳವಾಡಿದ್ದೇನೆ. ಗೋರಖ್‌ಪುರದಲ್ಲಿರುವ ನನ್ನ ತಂದೆ ಮತ್ತು ಸಹೋದರನಿಗೆ ಆತನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಖಲೀಲಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಪತಿ ಜೊತೆಗಿನ ಜಗಳ ಸಿಸಿಟಿವಿಯಲ್ಲಿ ದಾಖಲಾಗಿದೆ. ಆತ ತೃತೀಯ ಲಿಂಗಿಗಳಂತೆ ವರ್ತಿಸುತ್ತಾ, ಅಶ್ಲಿಲ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ ಎಂದಿರುವ ಮಹಿಳೆ, ಅನೇಕ ವರ್ಷಗಳಿಂದ ಆತ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಗೋರಖ್ ಪುರದ ಪೊಲೀಸ್ ಠಾಣೆಯೊಂದರಲ್ಲಿ ಈ ಹಿಂದೆ ದೂರು ದಾಖಲಿಸಿದ್ದಾಗಿ ಮಹಿಳೆ ಹೇಳಿದ್ದಾರೆ.

ಜಿಲ್ಲಾ ಪೊಲೀಸರು ವೈದ್ಯರ ಸರ್ಕಾರಿ ವಸತಿ ಗೃಹವನ್ನು ಬಂದ್ ಮಾಡಿದ್ದು, ಈ ವಿಷಯವನ್ನು ಪರಿಶೀಲಿಸಲು ಆರೋಗ್ಯ ಇಲಾಖೆ ಮೂರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ವೈದ್ಯರ ವಿರುದ್ಧ ಅವರ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 115 (2) (ಶಿಕ್ಷಾರ್ಹ ಅಪರಾಧ ಪ್ರಯತ್ನ) ಮತ್ತು 294 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಂತ ಕಬೀರ್ ನಗರ ಎಸ್ಪಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.

Casual Images
Madhya Pradesh: ಸರ್ಕಾರದ ಹಣಕ್ಕಾಗಿ ಹಾವು ಕಡಿತವೆಂದು ಹೇಳಿ 58 ಬಾರಿ ಸತ್ತ ಇಬ್ಬರು ಚಾಲಾಕಿಗಳು!

ಈ ಮಧ್ಯೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ವೈದ್ಯ, ವೀಡಿಯೊಗಳು ತನ್ನ ವೃತ್ತಿ ಮತ್ತು ಮಾನಸಿಕ ಆರೋಗ್ಯವನ್ನು ಹಾಳುಮಾಡುವ ಸಂಚು ಆಗಿದ್ದು, ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆಕೆಯ ಸಹೋದರ ಮಾಡಿರುವ ಡೀಪ್‌ಫೇಕ್ ಎಂದು ಆರೋಪಿಸಿದ್ದಾರೆ. ಪತ್ನಿಯೊಂದಿಗೆ ದೀರ್ಘಕಾಲದಿಂದ ಕೌಟುಂಬಿಕ ಕಲಹವಿದ್ದು, ಆಕೆಯ ಕಿರುಕುಳದಿಂದ ತನ್ನ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪಿತ ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ, "ವಿಡಿಯೋಗಳ ಸತ್ಯಾಸತ್ಯತೆಯನ್ನು ನಿರ್ಧರಿಸುವ ನಿರೀಕ್ಷೆಯಿದೆ. ಪೊಲೀಸರು ಕೌಟುಂಬಿಕ ಹಿಂಸಾಚಾರ, AI ಕುಶಲತೆ ಮತ್ತು ಸೈಬರ್ ಕ್ರೈಮ್ ಆರೋಪಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ಸಂತ ಕಬೀರ್ ನಗರದ ಮುಖ್ಯ ವೈದ್ಯಾಧಿಕಾರಿ ಡಾ ರಾಮ್ ಅನುಜ್ ಕನೌಜಿಯಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com