'ಮಹಿಳೆ, ಮಕ್ಕಳು ಗುಹೆಯಲ್ಲಿ ವಾಸಿಸುತ್ತಿದ್ದಾಗ ನೀವೆಲ್ಲಿದ್ದಿರಿ..'; ನಾನೇ ತಂದೆ ಎಂದ ಇಸ್ರೇಲ್ ವ್ಯಕ್ತಿಗೆ 'ಸುಪ್ರೀಂ' ಚಾಟಿ

ಕರ್ನಾಟಕದ ಗೋಕರ್ಣ ಗುಹೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದ ಇಬ್ಬರು ಮಕ್ಕಳ ತಂದೆ ನಾನು ಎಂದು ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Supreme Court To Israeli Man
ಗೋಕರ್ಣ ಗುಹೆಯಲ್ಲಿ ವಾಸಿಸುತ್ತಿದ್ದ ರಷ್ಯಾನ್ ಮಹಿಳೆ ಮತ್ತು ಮಕ್ಕಳು
Updated on

ನವದೆಹಲಿ: ಕರ್ನಾಟಕದ ಗೋಕರ್ಣ ಅರಣ್ಯದ ಗುಹೆಯಲ್ಲಿ ತಂಗಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಎರಡು ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ 'ನಾನೇ ಆ ಮಕ್ಕಳ ತಂದೆ' ಎಂದು ಹೊಳಿಕೊಂಡಿದ್ದ ಇಸ್ರೇಲ್ ಮೂಲದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಕರ್ನಾಟಕದ ಗೋಕರ್ಣ ಗುಹೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದ ಇಬ್ಬರು ಮಕ್ಕಳ ತಂದೆ ನಾನು ಎಂದು ಹೇಳಿಕೊಳ್ಳುವ ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ತನ್ನ ಮಕ್ಕಳು ಗುಹೆಯಲ್ಲಿ ವಾಸಿಸುತ್ತಿದ್ದಾಗ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದೆ.

ಅಲ್ಲದೆ ಭಾರತ ದೇಶವು "ಸ್ವರ್ಗವಾಗಿದೆ" ಮತ್ತು "ಯಾರು ಬೇಕಾದರೂ ಬಂದು ಉಳಿಯುತ್ತಾರೆ" ಎಂದು ನ್ಯಾಯಾಲಯವು ಗಮನಿಸಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಹೈಕೋರ್ಟ್ ಆದೇಶಕ್ಕೆ ಗೋಲ್ಡ್‌ಸ್ಟೈನ್ ಸಲ್ಲಿಸಿದ ಸವಾಲನ್ನು ಆಲಿಸುತ್ತಿತ್ತು. "ನಿಮ್ಮ ಹಕ್ಕು ಏನು? ನೀವು ಯಾರು?" ಎಂದು ಪೀಠ ಕೇಳಿತು.

Supreme Court To Israeli Man
Gokarna Cave: ಗುಹೆಯಲ್ಲಿ ವಾಸವಾಗಿದ್ದ ರಷ್ಯಾ ಮಹಿಳೆ-ಮಕ್ಕಳ ಗಡಿಪಾರಿಗೆ ಹೈಕೋರ್ಟ್​​ ತಡೆ

ಈ ವೇಳೆ ಅರ್ಜಿದಾರರ ವಕೀಲರು ಆ ಮಕ್ಕಳ ತಂದೆ ಎಂದು ಉತ್ತರಿಸಿದಾಗ, ನ್ಯಾಯಮೂರ್ತಿ ಕಾಂತ್, "ದಯವಿಟ್ಟು ನಿಮ್ಮನ್ನು ಘೋಷಿತ ತಂದೆ ಎಂದು ಸಾಬೀತುಪಡಿಸುವ ಯಾವುದೇ ಅಧಿಕೃತ ದಾಖಲೆಯನ್ನು ನಮಗೆ ತೋರಿಸಿ... ನಾವು ನಿಮ್ಮ ಗಡೀಪಾರು ಮಾಡಲು ಏಕೆ ನಿರ್ದೇಶಿಸಬಾರದು?" ಎಂದು ಕೇಳಿದರು.

ಇದು "ಪ್ರಚಾರದ ಮೊಕದ್ದಮೆ" ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು ಮತ್ತು "ನಿಮ್ಮ ಮಕ್ಕಳು ಗುಹೆಯಲ್ಲಿ ವಾಸಿಸುತ್ತಿದ್ದಾಗ ನೀವು ಏನು ಮಾಡುತ್ತಿದ್ದೀರಿ?" ಎಂದು ಪೀಠ ಕೇಳಿತು. "ನೀವು ಗೋವಾದಲ್ಲಿ ಏನು ಮಾಡುತ್ತಿದ್ದೀರಿ?" ಎಂದು ನ್ಯಾಯಮೂರ್ತಿ ಕಾಂತ್ ಕೇಳಿದರು.

ಇದೇ ವೇಳೆ ಗೋಲ್ಡ್‌ಸ್ಟೈನ್‌ಗೆ ಅರ್ಜಿಯನ್ನು ಹಿಂಪಡೆಯಲು ಪೀಠ ಅನುಮತಿ ನೀಡಿತು. ನ್ಯಾಯಮೂರ್ತಿ ಕಾಂತ್, "ಈ ದೇಶವು ಸ್ವರ್ಗವಾಗಿದೆ... ಯಾರಾದರೂ ಬಂದು ಉಳಿಯುತ್ತಾರೆ" ಎಂದು ಟೀಕಿಸಿದರು.

ರಷ್ಯಾದ ಪ್ರಜೆ ನೀನಾ ಕುಟಿನಾ ಮತ್ತು ಅವರ ಇಬ್ಬರು ಮಕ್ಕಳು ಜುಲೈ 11 ರಂದು ಗೋಕರ್ಣ ಬಳಿಯ ರಾಮತೀರ್ಥ ಬೆಟ್ಟಗಳ ಗುಹೆಯಲ್ಲಿ ಪತ್ತೆಯಾಗಿದ್ದರು. ಅಧಿಕಾರಿಗಳ ಪ್ರಕಾರ, ಮೂವರು ಸುಮಾರು ಎರಡು ತಿಂಗಳಿನಿಂದ ಗುಹೆಯಲ್ಲಿ ವಾಸಿಸುತ್ತಿದ್ದರು. ಅವರ ಬಳಿ ಯಾವುದೇ ಮಾನ್ಯ ದಾಖಲೆಗಳಿರಲ್ಲ. ನಂತರ ರಷ್ಯಾದ ದೂತಾವಾಸವು ಕುಟಿನಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಿಗೆ ತುರ್ತು ಪ್ರಯಾಣ ದಾಖಲೆಗಳನ್ನು ನೀಡಿತು.

Supreme Court To Israeli Man
Watch | ಗೋಕರ್ಣ ಕಾಡಿನ ಗುಹೆಯಲ್ಲಿ ಮಕ್ಕಳೊಂದಿಗೆ ಇದ್ದ ರಷ್ಯಾ ಮಹಿಳೆ ರಕ್ಷಣೆ; BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆಯ ಮೃತದೇಹ ಪತ್ತೆ

ಇದೇ ಸಂದರ್ಭದಲ್ಲಿ ಇಸ್ರೇಲಿ ಪ್ರಜೆ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿ, ತಾನು ಆ ಇಬ್ಬರು ಮಕ್ಕಳ ತಂದೆ ಎಂದು ಹೇಳಿಕೊಂಡು, ಮಕ್ಕಳನ್ನು ತಕ್ಷಣ ಗಡೀಪಾರು ಮಾಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ಗೋಲ್ಡ್‌ಸ್ಟೈನ್ ತನ್ನ ಮಕ್ಕಳನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ ಕಳೆದ ವರ್ಷ ಗೋವಾದ ಪಣಜಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾಗಿ ಹೇಳಿಕೊಂಡಿದ್ದರು.

ಕರ್ನಾಟಕ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತು ಮತ್ತು ನೀನಾ ಕುಟಿನಾ ಮತ್ತು ಅವರ ಹೆಣ್ಣುಮಕ್ಕಳನ್ನು ರಷ್ಯಾಕ್ಕೆ ಹಿಂದಿರುಗಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿತು. ನೀನಾ ಕುಟಿನಾ ಅವರು ರಷ್ಯಾಕ್ಕೆ ಬೇಗನೆ ಮರಳಲು ಬಯಸುವುದಾಗಿ ರಷ್ಯಾದ ದೂತಾವಾಸಕ್ಕೆ ತಿಳಿಸಿದ್ದರು ಎಂದು ನ್ಯಾಯಾಲಯ ಗಮನಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com