
ಕೊರ್ಬಾ: ಗೆಳತಿ ಮೇಲೆ ತನಗೆ ಎಷ್ಟೊಂದು ಪ್ರೀತಿಯಿದೆ ಎಂಬುದನ್ನು ಸಾಬೀತುಪಡಿಸಲು 20 ವರ್ಷದ ಯುವಕನೋರ್ವ ವಿಷ ಕುಡಿದು ಸಾವನ್ನಪ್ಪಿದ್ದಾನೆ. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸೆ. 25 ರಂದು ವಿಷ ಸೇವಿಸಿದ್ದ ಕೃಷ್ಣ ಕುಮಾರ್ ಪಾಂಡೋ ಎಂಬ ಯುವಕ ಅಕ್ಟೋಬರ್ 8 ರಂದು ಕೊರ್ಬಾದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಲೆಮ್ರು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಂಡೋ ಸೋನಾರಿಯಲ್ಲಿ ವಾಸಿಸುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆಕೆಯ ಕುಟುಂಬಕ್ಕೆಈ ವಿಚಾರ ತಿಳಿದಾಗ ತಮ್ಮ ಮನೆಗೆ ಭೇಟಿ ನೀಡುವಂತೆ ಪಾಂಡೋಗೆ ಕೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 25 ರಂದು ತನ್ನ ಗೆಳತಿ ಮನೆಗೆ ಹೋದಾಗ, ನಿಜವಾಗಿಯೂ ಆಕೆಯನ್ನು ಪ್ರೀತಿಸುತ್ತಿದ್ದರೆ ವಿಷ ಸೇವಿಸುವಂತೆ ಕುಟುಂದವರು ಹೇಳಿದ್ದಾರೆ. ಹಾಗೆಯೇ ಮಾಡಿದ್ದ ಯುವಕ ತದನಂತರ ಘಟನೆಯ ಬಗ್ಗೆ ತನ್ನ ಮನೆಯವರಿಗೆ ತಿಳಿಸಿದ್ದಾನೆ.
ಮೊದಲು ಆತನನ್ನು ಲೆಮ್ರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಕ್ಟೋಬರ್ 8 ರಂದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement