Bihar Polls: ಮೋದಿ ನಾಟಕಕ್ಕೆ ಮಾರುಹೋಗಬೇಡಿ, ಮತಕ್ಕಾಗಿ ಅವರು ಡ್ಯಾನ್ಸ್ ಮಾಡಲು ರೆಡಿ ಇರುತ್ತಾರೆ; ರಾಹುಲ್ ಗಾಂಧಿ

ಲೋಕಸಭೆಯ ವಿರೋಧ ಪಕ್ಷದ ನಾಯಕ, ಮುಜಾಫರ್‌ಪುರ ಜಿಲ್ಲೆಯಲ್ಲಿ ತಮ್ಮ ಮೊದಲ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
Congress leader Rahul Gandhi addresses a public meeting in Muzaffarpur, Bihar.
ಬಿಹಾರದ ಮುಜಫರ್‌ಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಮಾಡಿದರು.Photo| PTI
Updated on

ಮುಜಾಫರ್‌ಪುರ್: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಖವನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ಬಿಹಾರದಲ್ಲಿ ಸರ್ಕಾರವನ್ನು 'ರಿಮೋಟ್ ಕಂಟ್ರೋಲ್ ಮೂಲಕ' ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ, ಮುಜಾಫರ್‌ಪುರ ಜಿಲ್ಲೆಯಲ್ಲಿ ತಮ್ಮ ಮೊದಲ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

'ಬಿಹಾರದಲ್ಲಿ ಸರ್ಕಾರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಡೆಸಲಾಗುತ್ತಿದೆ ಎಂಬ ತೇಜಸ್ವಿ ಯಾದವ್ ಅವರ ಹೇಳಿಕೆಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ಬಿಜೆಪಿಯು ನಿತೀಶ್ ಕುಮಾರ್ ಅವರ ಮುಖವನ್ನು ಬಳಸಿಕೊಳ್ಳುತ್ತಿದೆ. ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವು 'ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ' ಮತ್ತು ವಿರೋಧ ಪಕ್ಷದ ಒತ್ತಾಯದ ಮೇರೆಗೆ ನರೇಂದ್ರ ಮೋದಿ ಸರ್ಕಾರ ಜಾತಿ ಗಣತಿಗೆ ಒಪ್ಪಿಕೊಂಡಿತು' ಎಂದರು.

'ಎರಡು ಭಾರತಗಳು ಉದಯಿಸುತ್ತಿವೆ. ಒಂದು ಸಾಮಾನ್ಯ ಜನರಿಗೆ ಸೇರಿದ್ದು, ಇನ್ನೊಂದು ಐದು ಅಥವಾ ಹತ್ತು ಶತಕೋಟ್ಯಾಧಿಪತಿಗಳಿಗೆ ಸೇರಿದ್ದು. ಬಿಹಾರದಂತಹ ಸ್ಥಳಗಳು ಬಡತನದಲ್ಲಿ ಬಳಲುತ್ತಿರುವುದಕ್ಕೆ ಇದೇ ಕಾರಣ. ಅದರ ಅಗಾಧ ಸಾಮರ್ಥ್ಯ ಇನ್ನೂ ಬಳಕೆಯಾಗುತ್ತಿಲ್ಲ' ಎಂದು ರಾಹುಲ್ ಗಾಂಧಿ ಆರೋಪಿಸಿದರು.

Congress leader Rahul Gandhi addresses a public meeting in Muzaffarpur, Bihar.
ಲಾಲು ಪುತ್ರನನ್ನು ಬಿಹಾರ ಸಿಎಂ ಆಗಿ, ಸೋನಿಯಾ ಪುತ್ರನನ್ನು ಪ್ರಧಾನಿಯಾಗಿ ಮಾಡಲು ಬಯಸಿದ್ದಾರೆ, ಆದರೆ...: ಅಮಿತ್ ಶಾ

'ಛತ್ ಪೂಜೆಯ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ಸ್ನಾನ ಮಾಡುವುದಾಗಿ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಲು ಬಯಸಿದ ನಾಟಕವನ್ನು ನೀವೆಲ್ಲರೂ ನೋಡಿರಬೇಕು. ಅದು ಪೈಪ್ ನೀರಿನ ಮೂಲಕ ರಚಿಸಲಾದ ಜಲಮೂಲ ಎಂದು ಮುನ್ನೆಲೆಗೆ ಬಂದಾಗ, ಮೋದಿ ಬೆಚ್ಚಿಬಿದ್ದರು' ಎಂದರು.

'ಜನರಿಗೆ ಅಗ್ಗವಾಗಿ ಡೇಟಾ ಲಭ್ಯವಾಗುವಂತೆ ಮಾಡಿರುವುದಾಗಿ ಮೋದಿ ಹೆಮ್ಮೆಪಡುತ್ತಾರೆ. ಆದರೆ, ದೂರಸಂಪರ್ಕ ವಲಯದಲ್ಲಿ ಒಂದು ವ್ಯವಹಾರ ಸಂಸ್ಥೆಯ ಏಕಸ್ವಾಮ್ಯಕ್ಕೆ ಅವಕಾಶ ನೀಡಲಾಗಿದೆ ಎಂಬ ಅಂಶವನ್ನು ಅವರು ಮರೆಮಾಡುತ್ತಾರೆ. ನೋಟು ರದ್ದತಿಯಿಂದ ಆರ್ಥಿಕತೆಗೆ ಉಂಟಾದ ವಿನಾಶದ ಬಗ್ಗೆ ಅವರು ಮೌನವಾಗಿದ್ದರು' ಎಂದು ಅವರು ಹೇಳಿದರು.

ಕೆಲವು ತಿಂಗಳ ಹಿಂದೆ ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕ, 'ಅವರು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಚುನಾವಣೆಗಳನ್ನು ಕದ್ದಿದ್ದಾರೆ. ಬಿಹಾರದಲ್ಲೂ ಅದೇ ರೀತಿ ಮಾಡಲು ಪ್ರಯತ್ನಿಸುತ್ತಾರೆ' ಎಂದು ಆರೋಪಿಸಿದ್ದರು. ಇಂಡಿಯಾ ಬಣವು ಸರ್ಕಾರವನ್ನು ರಚಿಸಿದರೆ, ಜಾತಿ ಮತ್ತು ಧಾರ್ಮಿಕ ರೇಖೆಗಳನ್ನು ಮೀರಿ ಸಮಾಜದ ಎಲ್ಲ ವರ್ಗಗಳ ಹಿತಾಸಕ್ತಿಗಳನ್ನು ನೋಡಿಕೊಳ್ಳಲಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

Congress leader Rahul Gandhi addresses a public meeting in Muzaffarpur, Bihar.
Bihar Polls: ಬಿಹಾರ ಜನತೆ 'ಜಂಗಲ್ ರಾಜ್' ಆಡಳಿತ ದೂರವಿಟ್ಟು ಬಹುದೊಡ್ಡ ಜನಾದೇಶದಿಂದ NDA ಗೆಲ್ಲಿಸುತ್ತಾರೆ!

'ಮತ ಕಳ್ಳತನವು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲಿನ ದಾಳಿಯಾಗಿದೆ. ನಾವು ಸಂವಿಧಾನವನ್ನು ರಕ್ಷಿಸಲು ಬದ್ಧರಾಗಿದ್ದೇವೆ" ಎಂದು ಗಾಂಧಿ ಹೇಳಿದರು.

ನಳಂದ ವಿಶ್ವವಿದ್ಯಾಲಯವನ್ನು ಉಲ್ಲೇಖಿಸುತ್ತಾ, 'ನಿಮ್ಮ ಸಾಮರ್ಥ್ಯ ಇನ್ನೂ ಸ್ಪಷ್ಟವಾಗಿದೆ. ರಾಜ್ಯದ ಜನರು ದುಬೈ, ಮಾರಿಷಸ್, ಸೀಶೆಲ್ಸ್ ಮತ್ತು ಅಮೆರಿಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು. ಆಧುನಿಕ ನಳಂದ ವಿಶ್ವವಿದ್ಯಾಲಯವು ಕೇಂದ್ರದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕನಸಿನ ಕೂಸು. ಅಮೆರಿಕನ್ನರು ಉನ್ನತ ಶಿಕ್ಷಣಕ್ಕಾಗಿ ಬಿಹಾರಕ್ಕೆ ಬರುವ ಭವಿಷ್ಯವನ್ನು ನಾನು ಊಹಿಸುತ್ತೇನೆ' ಎಂದು ಅವರು ಹೇಳಿದರು.

'ರಾಜಕೀಯ ಜಟಿಲತೆಗಳನ್ನು ನೀವು ಕೆಲವೇ ಸೆಕೆಂಡುಗಳಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನರೇಂದ್ರ ಮೋದಿಯವರ ನಾಟಕಕ್ಕೆ ಮಾರುಹೋಗಬೇಡಿ ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ಮತಗಳು ಸಿಗುತ್ತವೆ ಎಂದಾದರೆ ಅವರು ವೇದಿಕೆಯ ಮೇಲೆ ನೃತ್ಯ ಮಾಡಲು ಸಹ ಸಿದ್ಧರಾಗಿರುತ್ತಾರೆ' ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com