ಪಾಕ್ ಹುಟ್ಟಡಗಿಸಿದ್ದ 'Game-Changer': ಭಾರತದ ಬತ್ತಳಿಕೆ ಸೇರಲಿವೆ ಮತ್ತಷ್ಟು S-400 ಏರ್ ಡಿಫೆನ್ಸ್ ಸಿಸ್ಟಮ್ಸ್!

ಭಾರತಕ್ಕೆ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಅಭೇದ್ಯ ಗುರಾಣಿಯಾಗಿ ಹೊರಹೊಮ್ಮಿದ ಎಸ್ 400 ವಾಯು ರಕ್ಷಣಾ ವ್ಯವಸ್ಥೆ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಭಾರತಕ್ಕೆ ಮತ್ತಷ್ಟು ಎಸ್ 400 ವಾಯುರಕ್ಷಣಾ ವ್ಯವಸ್ಥೆಗಳನ್ನು ನೀಡುವುದಾಗಿ ರಷ್ಯಾ ಘೋಷಣೆ ಮಾಡಿದೆ.
S-400
ಎಸ್-400 ವಾಯು ರಕ್ಷಣಾ ವ್ಯವಸ್ಥೆ
Updated on

ನವದೆಹಲಿ: ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಹುಟ್ಟಡಗಿಸಿದ್ದ ರಷ್ಯಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಮ್ S-400 ನ ಮತ್ತಷ್ಟು ಘಟಕಗಳನ್ನು ಭಾರತಕ್ಕೆ ನೀಡುವುದಾಗಿ ರಷ್ಯಾ ಘೋಷಣೆ ಮಾಡಿದೆ.

ಹೌದು.. ಪಾಕಿಸ್ತಾನದ ವಿರುದ್ಧದ ಯುದ್ಧದ ತನ್ನ ಚೊಚ್ಚಲ ಯುದ್ಧ ಸಮಯದಲ್ಲಿ ಭಾರತಕ್ಕೆ ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಅಭೇದ್ಯ ಗುರಾಣಿಯಾಗಿ ಹೊರಹೊಮ್ಮಿದ ಎಸ್ 400 ವಾಯು ರಕ್ಷಣಾ ವ್ಯವಸ್ಥೆ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಭಾರತಕ್ಕೆ ಮತ್ತಷ್ಟು ಎಸ್ 400 ವಾಯುರಕ್ಷಣಾ ವ್ಯವಸ್ಥೆಗಳನ್ನು ನೀಡುವುದಾಗಿ ರಷ್ಯಾ ಘೋಷಣೆ ಮಾಡಿದೆ.

ಈಗಾಗಲೇ ಭಾರತ ನೀಡಿರುವ ಆರ್ಡರ್ ಅಲ್ಲದೇ ಹೆಚ್ಚುವರಿ ಘಟಕಗಳನ್ನು ಮಾರಾಟ ಮಾಡಲು ರಷ್ಯಾ ಉತ್ಸುಕತೆ ತೋರಿದೆ ಎಂದು ಹೇಳಲಾಗಿದೆ. ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಈ ಎಸ್ 400 ಕ್ಷಿಪಣಿ ವ್ಯವಸ್ಥೆಯ ವಿತರಣೆಯನ್ನು ತ್ವರಿತಗೊಳಿಸಲು ರಷ್ಯಾ ಮತ್ತು ಭಾರತದ ನಡುವೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಎಸ್ 400ನ ಒಂದು ಘಟಕವನ್ನುಮುಂಬರುವ 2026 ರ ವೇಳೆಗೆ ಮತ್ತು ಇನ್ನೊಂದು ಘಟಕವನ್ನು 2027 ರ ವೇಳೆಗೆ ತಲುಪಿಸುವ ನಿರೀಕ್ಷೆಯಿದೆ. 2018 ರಲ್ಲಿ ಭಾರತವು ಆರ್ಡರ್ ಮಾಡಿದ್ದ ಐದು ಘಟಕಗಳ ಪೈಕಿ ಈಗಾಗಲೇ ರಷ್ಯಾ 3 ಘಟಕಗಳನ್ನು ಭಾರತಕ್ಕೆ ನೀಡಿದ್ದು, ಬಾಕಿ ಇರುವ 2 ಘಟಕಗಳನ್ನು 2026 ಮತ್ತು 2027ರಲ್ಲಿ ನೀಡಲಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ ಭೇಟಿಯ ಸಮಯದಲ್ಲಿ ಮತ್ತು ಇತ್ತೀಚೆಗೆ ನಡೆದ ಭಾರತ-ರಷ್ಯಾ ದ್ವಿಪಕ್ಷೀಯ ಸಭೆಯಲ್ಲಿ ವಿತರಣೆಯಲ್ಲಿನ ವಿಳಂಬವನ್ನು ಚರ್ಚೆ ಮಾಡಿದ್ದರು.

S-400
'ಆರ್ಥಿಕ ಸ್ವಾರ್ಥ'ದಿಂದ ಸವಾಲುಗಳ ಹೊರತಾಗಿಯೂ ಶೇ.7.8ರಷ್ಟು ಪ್ರಗತಿ ಕಂಡಿದೆ, ಭಾರತದ ಸಣ್ಣ ಚಿಪ್ ಜಗತ್ತನ್ನೇ ಬದಲಿಸಲಿದೆ: ಪ್ರಧಾನಿ ಮೋದಿ

2 ಅಲ್ಲ.. ಮತ್ತಷ್ಟು ಘಟಕಗಳು ಬರಲಿವೆ!

ಇನ್ನು ರಷ್ಯಾ ಭಾರತಕ್ಕೆ ಬಾಕಿ ನೀಡಬೇಕಿರುವ 2 ಎಸ್ 400 ಘಟಕಗಳು ಮಾತ್ರವಲ್ಲದೇ ಇನ್ನಷ್ಟು ಘಟಕಗಳನ್ನು ಭಾರತಕ್ಕೆ ನೀಡಲು ಉತ್ಸುಕತೆ ತೋರಿದೆ. ಈ ಕುರಿತು ಮಾತನಾಡಿರುವ ರಷ್ಯಾದ ಫೆಡರಲ್ ಸರ್ವಿಸ್ ಫಾರ್ ಮಿಲಿಟರಿ-ಟೆಕ್ನಿಕಲ್ ಕೋಆಪರೇಷನ್‌ನ ಮುಖ್ಯಸ್ಥ ಡಿಮಿಟ್ರಿ ಶುಗಾಯೇವ್ ಅವರು ರಷ್ಯಾ ಮಾಧ್ಯಮ TASS ನಲ್ಲಿ ಮಾತನಾಡಿದ್ದಾರೆ.

'ಭಾರತವು ಈಗಾಗಲೇ ನಮ್ಮ S-400 ವ್ಯವಸ್ಥೆಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿಯೂ ನಮ್ಮ ಸಹಕಾರವನ್ನು ವಿಸ್ತರಿಸುವ ಸಾಮರ್ಥ್ಯವಿದೆ. ಅಂದರೆ ಹೊಸ ವಿತರಣೆಗಳು. ಈಗ, ನಾವು ಮಾತುಕತೆ ಹಂತದಲ್ಲಿದ್ದೇವೆ' ಎಂದು ಹೇಳಿದ್ದಾರೆ.

ಭಾರತಕ್ಕೆ ಸುದರ್ಶನ ಚಕ್ರ: ಮೋದಿ ಹೇಳಿದ್ದೇನು?

ಇನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ 'ಸುದರ್ಶನ ಚಕ್ರ' ಅಸ್ತ್ರದ ಕುರಿತು ಉಲ್ಲೇಖಿಸಿದ್ದರು. ದೇಶಕ್ಕೆ ಬಹುಪದರದ ಚೌಕಟ್ಟು, ದೇಶದ ಮೇಲೆ ರಕ್ಷಣಾತ್ಮಕ ಹೊದಿಕೆಯನ್ನು ಒದಗಿಸಲು ಸುಧಾರಿತ ಕಣ್ಗಾವಲು ಮತ್ತು ಸೈಬರ್ ರಕ್ಷಣೆಯನ್ನು ಈ ಸುದರ್ಶನ ಚಕ್ರ ಯೋಜನೆ ಸಂಯೋಜಿಸುತ್ತದೆ. ಇದು ಇಸ್ರೇಲ್‌ನ ಐರನ್ ಡೋಮ್‌ನಂತೆಯೇ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದರು. ಇದರ ಹೊರತಾಗಿಯೂ ಭಾರತ ರಷ್ಯಾದ ಮತ್ತಷ್ಟು S-400 ವ್ಯವಸ್ಥೆಗಳನ್ನು ಖರೀದಿಸಲು ಯೋಜಿಸುತ್ತಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ 'ಗೇಮ್ ಚೇಂಜರ್'

ಭಾರತದ ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಅವರು ಆಪರೇಷನ್ ಸಿಂಧೂರ್ ಸಮಯದಲ್ಲಿ ಇದೇ ಎಸ್ 400 ಏರ್ ಡಿಫೆನ್ಸ್ ವ್ಯವಸ್ಥೆಯನ್ನು "ಗೇಮ್-ಚೇಂಜರ್" ಎಂದು ಕರೆದಿದ್ದರು. ಅಂತೆಯೇ S-400 ಭಾರತೀಯ ಸೇನಾಪಡೆಗಳಿಗೆ ಅಮೂಲ್ಯವಾದ ಆಸ್ತಿಯಾಗಿದೆ.

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ನಂತರ ಮೇ ತಿಂಗಳ ಸಂಘರ್ಷದ ಸಮಯದಲ್ಲಿ ಭಾರತವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಹಲವಾರು ಕ್ಷಿಪಣಿಗಳನ್ನು ಹಾರಿಸಿದರೂ ಅವುಗಳು ಗುರಿ ತಲುಪದಂತೆ ಆಗಸದಲ್ಲೇ ಎಸ್ 400 ಹೊಡೆದುರುಳಿಸಿತ್ತು. ಎಸ್ 400 ಅಬೇಧ್ಯ ಕೋಟೆಯೆದುರು ಪಾಕಿಸ್ತಾನದ ಯಾವುದೇ ಕ್ಷಿಪಣಿ ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂದು ಎಪಿ ಸಿಂಗ್ ಹೇಳಿದ್ದರು.

S-400
ಪಾಕ್ ಕ್ಷಿಪಣಿ, ಡ್ರೋನ್ ದಾಳಿ ಉಡೀಸ್ ಮಾಡಿದ ಭಾರತದ 'ಸುದರ್ಶನ ಚಕ್ರ' S-400; ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಎಸ್ 400 ವಿಶೇಷತೆ

ಎಸ್ 400 ಕ್ಷಿಪಣಿ ವ್ಯವಸ್ಥೆಯು 600 ಕಿ.ಮೀ. ವರೆಗಿನ ಶತ್ರು ಚಟುವಟಿಕೆಯನ್ನು ಪತ್ತೆ ಮಾಡುತ್ತದೆ. ಏಕಕಾಲದಲ್ಲಿ 100 ಕ್ಕೂ ಹೆಚ್ಚು ಗುರಿಗಳನ್ನು ಟ್ರ್ಯಾಕ್ ಮಾಡುತ್ತದೆ. 400 ಕಿ.ಮೀ. ವರೆಗಿನ ಗುಂಡಿನ ವ್ಯಾಪ್ತಿಯೊಂದಿಗೆ, ಇದು ಬಾಂಬರ್‌ಗಳು, ಫೈಟರ್ ಜೆಟ್‌ಗಳು, ಡ್ರೋನ್‌ಗಳು, ಮುಂಚಿನ ಎಚ್ಚರಿಕೆ ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಹ ನಾಶಪಡಿಸುತ್ತದೆ. S-400 ವ್ಯವಸ್ಥೆಯ ಪ್ರತಿಯೊಂದು ರೆಜಿಮೆಂಟ್ ಅಥವಾ ಘಟಕವು ಎಂಟು ಉಡಾವಣಾ ವಾಹನಗಳನ್ನು ಹೊಂದಿದ್ದು, ಪ್ರತಿಯೊಂದೂ ನಾಲ್ಕು ಕ್ಷಿಪಣಿ ಕೊಳವೆಗಳನ್ನು ಹೊಂದಿರುತ್ತದೆ.

2018ರ ಒಪ್ಪಂದ

ಪಾಕಿಸ್ತಾನ ಮತ್ತು ಚೀನಾದ ಬೆದರಿಕೆಗಳನ್ನು ಎದುರಿಸಲು ಭಾರತವು 2018ರಲ್ಲಿ ರಷ್ಯಾದಿಂದ S-400 ಅನ್ನು ಖರೀದಿಸಿತು. ರೂ. 39,000 ಕೋಟಿ ಮೌಲ್ಯದ ಒಪ್ಪಂದವು ಐದು S-400 ಟ್ರಯಂಫ್ ಏರ್ ಡಿಫೆನ್ಸ್ ಘಟಕಗಳನ್ನು ಹೊಂದಿತ್ತು.

ಈ ಪೈಕಿ ಈಗಾಗಲೇ 3 ಘಟಕಗಳನ್ನು ರಷ್ಯಾ ವಿತರಣೆ ಮಾಡಿದ್ದು, 2021 ಮತ್ತು 2023 ರ ನಡುವೆ ಮೂರು S-400 ಘಟಕಗಳನ್ನು ಭಾರತ ಸ್ವೀಕರಿಸಿತ್ತು. ಈ ಮೂರು ಘಟಕಗಳನ್ನು ಆಡಂಪುರ (ಪಂಜಾಬ್), ಪೂರ್ವ ವಲಯ ಮತ್ತು ಪಶ್ಚಿಮ ವಲಯದಲ್ಲಿ ನಿಯೋಜಿಸಲಾಗಿದೆ. ಬಾಕಿ 2 ಘಟಕಗಳ ವಿತರಣೆ ಮಾತ್ರ ಬಾಕಿ ಇದೆ. 2026 ಮತ್ತು 2027ರಲ್ಲಿ ಬಾಕಿ ಇರುವ ಘಟಕಗಳ ವಿತರಣೆಯಾಗಲಿದೆ ಎಂದು ರಷ್ಯಾ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com