ಪಾಕ್ ಕ್ಷಿಪಣಿ, ಡ್ರೋನ್ ದಾಳಿ ಉಡೀಸ್ ಮಾಡಿದ ಭಾರತದ 'ಸುದರ್ಶನ ಚಕ್ರ' S-400; ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಇದು 600 ಕಿಮೀ ವ್ಯಾಪ್ತಿಯವರೆಗಿನ ಕ್ಷಿಪಣಿಗಳು ಮತ್ತು ಡ್ರೋನ್‌ಗಳಂತಹ ಅನೇಕ ವೈಮಾನಿಕ ಟಾರ್ಗೆಟ್ ಗಳನ್ನು ಗುರುತಿಸಿ, ಗಾಳಿಯಲ್ಲಿ ಅವುಗಳನ್ನು ನಾಶಪಡಿಸುತ್ತದೆ.
S-400
ಎಸ್-400 ವಾಯು ರಕ್ಷಣಾ ವ್ಯವಸ್ಥೆ
Updated on

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನ ಪತರುಗುಟ್ಟುವಂತೆ ಮಾಡಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಯೂರಿದ ಉಗ್ರರ ಶಿಬಿರಗಳನ್ನು ಸ್ಫೋಟಿಸಿ ಸುಮಾರು 100ಕ್ಕೂ ಅಧಿಕ ಉಗ್ರರನ್ನು ನಿರ್ಮೂಲನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿ ಯತ್ನವನ್ನು ಭಾರತದ ಸುದರ್ಶನ ಚಕ್ರ ಯಶಸ್ವಿಯಾಗಿ ಹೊಡೆದುರುಳಿಸಿದೆ.

ರಷ್ಯಾದಿಂದ ಖರೀದಿಸಲಾದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ಭಾರತದ ರಕ್ಷಣಾ ಕೋಟೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ಇಲ್ಲಿ ನೋಡೋಣ ಬನ್ನಿ.

S-400 ಎಂದರೇನು?

ಇದು ರಷ್ಯಾದ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಇದು 600 ಕಿಮೀ ವ್ಯಾಪ್ತಿಯವರೆಗಿನ ಕ್ಷಿಪಣಿಗಳು ಮತ್ತು ಡ್ರೋನ್‌ಗಳಂತಹ ಅನೇಕ ವೈಮಾನಿಕ ಟಾರ್ಗೆಟ್ ಗಳನ್ನುಗುರುತಿಸಿ, ಗಾಳಿಯಲ್ಲಿ ಅವುಗಳನ್ನು ನಾಶಪಡಿಸುತ್ತದೆ. ಹೀಗಾಗಿ ಭೂಮಿಯಲ್ಲಿರುವ ಜನರನ್ನು ಸುರಕ್ಷಿತವಾಗಿರಿಸುತ್ತದೆ.

S-400 ಏನನ್ನು ಪ್ರತಿಬಂಧಿಸಬಹುದು ಮತ್ತು ನಾಶಪಡಿಸಬಹುದು? ಇದು ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಸ್ಟೆಲ್ತ್ ವಿಮಾನಗಳಂತಹ ವೈಮಾನಿಕ ಬೆದರಿಕೆಗಳನ್ನು ನಿಭಾಯಿಸಬಲ್ಲದು.

ಭಾರತದಲ್ಲಿ S-400 ಹೇಗೆ ಹೆಸರುವಾಸಿ?

ಭಾರತದಲ್ಲಿ ಇದನ್ನು ಸುದರ್ಶನ ಚಕ್ರ ಎಂದು ಕರೆಯಲಾಗುತ್ತದೆ. ಮಹಾಭಾರತದಲ್ಲಿ ಶತ್ರುಗಳನ್ನು ಸೋಲಿಸಲು ಭಗವಾನ್ ಕೃಷ್ಣನು ಪ್ರಯೋಗಿಸಿದ ಪ್ರಬಲ ಆಯುಧವಾಗಿದೆ.

S-400 ಅನ್ನು ಯಾರು ತಯಾರಿಸುತ್ತಾರೆ?

ಇದನ್ನು ರಷ್ಯಾದ ಕಂಪನಿ ಅಲ್ಮಾಜ್-ಆಂಟೆ ಉತ್ಪಾದಿಸುತ್ತದೆ. S-400 2007 ರಲ್ಲಿ ರಷ್ಯಾದ ರಕ್ಷಣಾ ಸೇವೆಯನ್ನು ಪ್ರವೇಶಿಸಿತು. S-300 ಬದಲಿಗೆ ಇದು ಬಂದಿತು. ಇದನ್ನು ಹಿಂದಿನ ಸೋವಿಯತ್ ಒಕ್ಕೂಟವ ಅಭಿವೃದ್ಧಿಪಡಿಸಿತು. 2020 ರ ಹೊತ್ತಿಗೆ S-400 ರಷ್ಯಾದ ಮೇಲ್ಮೈಯಿಂದ ವಾಯು ಕ್ಷಿಪಣಿ ಸಾಮರ್ಥ್ಯದ ಬೆನ್ನೆಲುಬಾಯಿತು.

ಭಾರತ S-400 ಅನ್ನು ಯಾವಾಗ ಖರೀದಿಸಿತು?

ಐದು S-400 ಸಿಸ್ಟಮ್‌ಗಳನ್ನು ಖರೀದಿಸಲು 2018 ರಲ್ಲಿ ಭಾರತವು ರಷ್ಯಾದೊಂದಿಗೆ ರೂ. 35,000 ಕೋಟಿ (350 ಶತಕೋಟಿ ರೂಪಾಯಿ) ಒಪ್ಪಂದಕ್ಕೆ ಸಹಿ ಹಾಕಿತು. ಅವುಗಳಲ್ಲಿ ಮೂರು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಮತ್ತು ಉಳಿದ ಎರಡು 2026 ರ ವೇಳೆಗೆ ತಲುಪಿಸುವ ನಿರೀಕ್ಷೆಯಿದೆ.

S-400
Operation Sindoor: ಕರಾಚಿ, ಲಾಹೋರ್ ನಲ್ಲಿ ಡ್ರೋನ್ ದಾಳಿ; 26 ಮಂದಿ ಸಾವು, ಪಾಕಿಗಳು ತತ್ತರ; Video

ರಕ್ಷಣಾ ಒಪ್ಪಂದದ ಬಗ್ಗೆ ಯುಎಸ್ ಗೆ ಇಷ್ಟ ಇತ್ತೇ?

ಇಲ್ಲ, ಮೋದಿ ಸರ್ಕಾರವು ರಷ್ಯಾದೊಂದಿಗೆ S-400 ಒಪ್ಪಂದವನ್ನು ಮುಂದುವರಿಸುವುದು ಯುಎಸ್ ಇಷ್ಟ ಇರಲಿಲ್ಲ. ಭಾರತವು ಪೇಟ್ರಿಯಾಟ್ ಮತ್ತು ಥಾಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪರ್ಯಾಯವಾಗಿ ಖರೀದಿಸಬೇಕೆಂದು ಯುಎಸ್ ಸರ್ಕಾರ ಬಯಸಿತು. ಅಮೆರಿಕ ವಿರೋಧಿಗಳ ವಿರುದ್ಧದ ನಿರ್ಬಂಧಗಳ ಕಾಯ್ದೆ (ಸಿಎಎಟಿಎಸ್‌ಎ) ಅಡಿಯಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಮೋದಿ ಸರ್ಕಾರಕ್ಕೆ ಬೆದರಿಕೆಯೊಡ್ಡಿತ್ತು. ಆದರೆ ಮೋದಿ ಸರ್ಕಾರ ಮಣಿಯಲಿಲ್ಲ.

ಎಷ್ಟು ದೇಶಗಳಲ್ಲಿ S-400 ಇದೆ?

ಕೇವಲ ಐದು ದೇಶಗಳು S-400 ಅನ್ನು ಹೊಂದಿವೆ. ಅವುಗಳೆಂದರೆ ರಷ್ಯಾ, ಚೀನಾ, ಭಾರತ, ಟರ್ಕಿ ಮತ್ತು ಬೆಲಾರಸ್.

ಪಾಕಿಸ್ತಾನದ ಬಾಂಬ್ ದಾಳಿಯ ಸಂದರ್ಭದಲ್ಲಿ ಗುರುವಾರ ರಾತ್ರಿ S-400 ಭಾರತಕ್ಕೆ ಹೇಗೆ ನೆರವಾಯಿತು?

ಪಾಕಿಸ್ತಾನದ ಯಾವುದೇ ಡ್ರೋನ್, ಕ್ಷಿಪಣಿ ದಾಳಿ ನಡೆಸಲು ಸಾಧ್ಯವಾಗಲಿಲ್ಲ. S-400 ನಿಂದ ಅವೆಲ್ಲವನ್ನೂ ಗಾಳಿಯಲ್ಲಿ ನಾಶಪಡಿಸಲಾಯಿತು. ಪಾಕಿಸ್ತಾನವು ಜಮ್ಮು, ಜೈಸಲ್ಮೇರ್ ಮತ್ತಿತರ ನಗರಗಳ ಮೇಲೆ ಅನೇಕ ಸ್ಪೋಟಕಗಳನ್ನು ಹಾರಿಸಿತು. ಆದರೆ ಅವುಗಳಲ್ಲಿ ಯಾವುದೂ ಸುದರ್ಶನ ಚಕ್ರವನ್ನು ದಾಟಲು ಸಾಧ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com