ಬಹ್ರೇನ್ ನೆಲೆಯಲ್ಲಿ ಅಮೆರಿಕದ ರಾಡಾರ್ ವ್ಯವಸ್ಥೆಯ ಮೇಲೆ ಇರಾನ್‌ನ IRGC ದಾಳಿ

ಅಮೆರಿಕದ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿರುವ ಪ್ರಕಾರ, ಟೆಹ್ರಾನ್ ತನ್ನ ಶಸ್ತ್ರಾಗಾರದಲ್ಲಿ ಇನ್ನೂ 2,500 ಕ್ಷಿಪಣಿಗಳನ್ನು ಹೊಂದಿರಬಹುದು.
Iran's IRGC says it attacked US radar system at Bahrain base
ಅಮೆರಿಕದ ರಾಡಾರ್ ವ್ಯವಸ್ಥೆಯ ಮೇಲೆ ಇರಾನ್‌ನ IRGC ದಾಳಿ (ಸಂಗ್ರಹ ಚಿತ್ರ)online desk
Updated on: 

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬಹ್ರೈನ್‌ನಲ್ಲಿರುವ ಮಿಲಿಟರಿ ನೆಲೆ ಒಂದರಲ್ಲಿ ಅಮೆರಿಕದ ರಾಡಾರ್ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ತಮ್ಮ ಪಡೆಗಳು ಡ್ರೋನ್ ದಾಳಿ ನಡೆಸಿವೆ ಎಂದು ತಿಳಿಸಿದೆ. ಈ ಮಾಹಿತಿಯನ್ನು ಇರಾನ್‌ನ ಸರ್ಕಾರಿ ಮಾಧ್ಯಮವು ಅಧಿಕೃತ ಹೇಳಿಕೆಯ ಮೂಲಕ ಪ್ರಸಾರ ಮಾಡಿದೆ.

ಸರ್ಕಾರಿ ಪ್ರಸಾರ ಸಂಸ್ಥೆ ಟೆಲಿಗ್ರಾಮ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಈ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ವಿವರಿಸುತ್ತಾ, "ಬಹ್ರೈನ್‌ನ ಅಲ್-ರಿಫಾ ಹೆಲಿಕಾಪ್ಟರ್ ನೆಲೆಯಲ್ಲಿರುವ ಅಮೆರಿಕದ ವಾಯು ರಕ್ಷಣಾ ರಾಡಾರ್ ವ್ಯವಸ್ಥೆಯನ್ನು, IRGC ಏರೋಸ್ಪೇಸ್ ಫೋರ್ಸ್‌ಗೆ ಸೇರಿದ ಆರು ಡ್ರೋನ್‌ಗಳ ಮೂಲಕ ಗುರಿಯಾಗಿಸಲಾಗಿದೆ" ಎಂದು IRGC ತಿಳಿಸಿದೆ.

ಇದಕ್ಕೂ ಮುನ್ನ, ಬಹ್ರೈನ್‌ನ ಆಂತರಿಕ ಸಚಿವಾಲಯ 'X' (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಎರಡು ಪ್ರತ್ಯೇಕ ಎಚ್ಚರಿಕೆಗಳನ್ನು ನೀಡಿದ್ದು, ಸಂಭಾವ್ಯ ಭದ್ರತಾ ಅಪಾಯಗಳ ಬಗ್ಗೆ ಎಚ್ಚರಿಸಿತ್ತು. ಸೆಪ್ಟೆಂಬರ್ ನಂತರ ಈ ಗಲ್ಫ್ ರಾಷ್ಟ್ರವು ಇಂತಹ ಎಚ್ಚರಿಕೆಗಳನ್ನು ನೀಡಿರುವುದು ಇದೇ ಮೊದಲ ಬಾರಿಯಾಗಿದೆ.

Iran's IRGC says it attacked US radar system at Bahrain base
ಆರ್ಥಿಕ ನಿರ್ಬಂಧಗಳು ಪರಿಣಾಮಕಾರಿಯಾಗಿವೆ, ಇರಾನ್ ವಿರುದ್ಧ ಯುದ್ಧ ಕಾರ್ಯಾಚರಣೆ ಅಗತ್ಯವಿಲ್ಲ: US ವಿದೇಶಾಂಗ ಸಚಿವ ರೂಬಿಯೊ

ಅಮೆರಿಕದ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿರುವ ಪ್ರಕಾರ, ಟೆಹ್ರಾನ್ ತನ್ನ ಶಸ್ತ್ರಾಗಾರದಲ್ಲಿ ಇನ್ನೂ 2,500 ಕ್ಷಿಪಣಿಗಳನ್ನು ಹೊಂದಿರಬಹುದು.

ಅಮೆರಿಕದ ಮಿಲಿಟರಿ ಕ್ರಮಗಳಿಗೆ ಪ್ರತೀಕಾರವಾಗಿ, ಬಹ್ರೈನ್‌ನ ರಿಫಾ ವಾಯು ನೆಲೆಯಲ್ಲಿರುವ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಯ ರಾಡಾರ್ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೊಂಡ ಬೆನ್ನಲ್ಲೇ ಈ ಅಂದಾಜು ಹೊರಬಿದ್ದಿದೆ.

ತನ್ನ ಶಸ್ತ್ರಾಸ್ತ್ರ ಮೂಲಸೌಕರ್ಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ಇಸ್ರೇಲ್ ಕಳೆದ ಕೆಲವು ತಿಂಗಳುಗಳಿಂದ ನಿರಂತರ ದಾಳಿಗಳನ್ನು ನಡೆಸಿದ್ದರೂ, ಇರಾನ್ ಇನ್ನೂ 1,500 ರಿಂದ 2,500 ಕ್ಷಿಪಣಿಗಳನ್ನು ತನ್ನ ಬಳಿ ಉಳಿಸಿಕೊಂಡಿದೆ ಎಂದು ಗುಪ್ತಚರ ಅಧಿಕಾರಿಗಳು ಅಂದಾಜಿಸಿದ್ದಾರೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X