
ಥಾಣೆ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 41 ವರ್ಷದ ನಟಿಯನ್ನು ಮಹಾರಾಷ್ಟ್ರದ ಥಾಣೆಯಲ್ಲಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಟಿಯನ್ನು ಅನುಷ್ಕಾ ಮೋನಿ ಮೋಹನ್ ದಾಸ್ ಎಂದು ಗುರುತಿಸಲಾಗಿದೆ. ಈಕೆ ನಟಿಯಾಗಬೇಕೆಂಬ ಆಸೆಯಿಂದ ಬರುತ್ತಿದ್ದ ನಟಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ರಹಸ್ಯವಾಗಿ ಇಬ್ಬರು ಗ್ರಾಹಕರನ್ನು ನಿಯೋಜಿಸುವ ಮೂಲಕ ಅನುಷ್ಕಾ ಮೋನಿ ಮೋಹನ್ ದಾಸ್ ಅವರನ್ನು ಸಂಪರ್ಕಿಸಿತ್ತು. ಬುಧವಾರ ಕಾಶಿಮಿರಾದ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿರುವ ಮಾಲ್‌ನಲ್ಲಿ ತನ್ನನ್ನು ಭೇಟಿಯಾಗುವಂತೆ ಗ್ರಾಹಕರಿಗೆ ಆಕೆ ಹೇಳಿದ್ದಳು.
ತದನಂತರ ಆಕೆ ಗ್ರಾಹಕರಿಂದ ಹಣ ಸ್ವೀಕರಿಸುತ್ತಿದ್ದ ಪೊಲೀಸರು ದಾಳಿ ನಡೆಸಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಟಿವಿ ಧಾರಾವಾಹಿಗಳು ಮತ್ತು ಬಾಂಗ್ಲಾ ಸಿನಿಮಾದಲ್ಲಿ ನಟಿಸುತ್ತಿದ್ದ ಇಬ್ಬರು ಮಹಿಳೆಯರನ್ನೂ ರಕ್ಷಿಸಿದ್ದೇವೆ ಎಂದು ಪೊಲೀಸ್ ಸಹಾಯಕ ಕಮಿಷನರ್ ಮದನ್ ವಬ್ಹಾಯನ್ ಹೇಳಿದ್ದಾರೆ.
ದಾಸ್ ವಿರುದ್ಧ ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 143(3) ಮತ್ತು ಅನೈತಿಕ ಚಟುವಟಿಕೆ ನಿಯಂತ್ರಣ ಕಾಯ್ದೆ ಪಿಐಟಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಕ್ಷಿಸಲ್ಪಟ್ಟ ಮಹಿಳೆಯರನ್ನು ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಈ ಅಪರಾಧದ ಸಂಪೂರ್ಣ ವ್ಯಾಪ್ತಿಯನ್ನು ಬಹಿರಂಗಪಡಿಸಲು ಮತ್ತು ಇತರ ಯಾರಾದರೂ ಸಹಚರರು ಇದ್ದಾರೆಯೇ ಎಂದು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಎಸಿಪಿ ಬಲ್ಲಾಳ್ ಹೇಳಿದರು.
Advertisement