ನಾನು ಹೇಳಿದ್ರೂ ಕೇಳೋಲ್ವಾ, ಎಷ್ಟು ಧೈರ್ಯ ನಿನಗೆ? ಮಹಿಳಾ IPS ಅಧಿಕಾರಿ ಜೊತೆ ಅಜಿತ್ ಪವಾರ್ ವಾಗ್ವಾದ; Video

ಅಜಿತ್ ಪವಾರ್‌, ನಾನು ಉಪಮುಖ್ಯಮಂತ್ರಿ, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳು ಎಂದು ಸೂಚನೆ ನೀಡಿದ್ದಾರೆ. ಆದರೆ ಪವಾರ್‌ ಧ್ವನಿಯನ್ನು ಗುರುತಿಸದ ಅಧಿಕಾರಿ ಅಂಜನಾ ಕೃಷ್ಣ ನನ್ನ ಮೊಬೈಲ್‌ಗೆ ಕರೆ ಮಾಡಿ ಎಂದು ಹೇಳುತ್ತಾರೆ.
Ajit pawar and anjana krishna
ಅಜಿತ್ ಪವಾರ್ ಮತ್ತು ಅಂಜನಾ ಕೃಷ್ಣ
Updated on

ಮುಂಬೈ: ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಹಾಗೂ ಮಹಿಳಾ ಐಪಿಎಸ್‌ ಅಧಿಕಾರಿ ನಡುವೆ ಬಿಸಿ ಬಿಸಿ ವಾಗ್ವಾದ ನಡೆದಿದೆ.

ಫೋನ್‌ ಮೂಲಕ ನಡೆದ ಈ ವಾಗ್ವಾದದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದ ಐಪಿಎಸ್‌ ಅಧಿಕಾರಿಯೊಂದಿಗೆ ಫೋನ್‌ನಲ್ಲಿ ಅಜಿತ್ ಪವಾರ್ ಮಾತನಾಡಿದ್ದಾರೆ. ಅಜಿತ್ ಪವಾರ್‌, ನಾನು ಉಪಮುಖ್ಯಮಂತ್ರಿಯಾಗಿದ್ದು, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳು ಎಂದು ಸೂಚನೆ ನೀಡಿದ್ದಾರೆ. ಆದರೆ ಪವಾರ್‌ ಧ್ವನಿಯನ್ನು ಗುರುತಿಸದ ಅಧಿಕಾರಿ ಅಂಜನಾ ಕೃಷ್ಣ ನನ್ನ ಮೊಬೈಲ್‌ಗೆ ಕರೆ ಮಾಡಿ ಎಂದು ಹೇಳುತ್ತಾರೆ.

ರಸ್ತೆ ನಿರ್ಮಾಣಕ್ಕಾಗಿ ಅಕ್ರಮವಾಗಿ ಮಣ್ಣು ಅಗೆಯುವುದರ ವಿರುದ್ಧ ಕ್ರಮ ಕೈಗೊಳ್ಳಲು ಆಗಸ್ಟ್ 31 ರಂದು ಕುರ್ದು ಗ್ರಾಮದಲ್ಲಿದ್ದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣ ಅವರೊಂದಿಗೆ ಪವಾರ್ ಅವರು ಕರೆ ಮಾಡಿ ಮಾತನಾಡುತ್ತಿರುವ ಎರಡು ನಿಮಿಷಗಳ ವೀಡಿಯೊ ಇದಾಗಿದೆ.

ನಾನು ಹೇಳಿದರೂ ಕೇಳುತ್ತಿಲ್ಲವಲ್ಲ' ನಿನಗೆ ಎಷ್ಟು ಧೈರ್ಯ? ನಿನ್ನ ನಂಬರ್‌ ಕೊಡು, ವಿಡಿಯೊ ಕರೆ ಮಾಡುವೆ ಎಂದು ಹೇಳುತ್ತಾರೆ. ನಿನ್ನ ಮೇಲಿನ ಅಧಿಕಾರಿಗಳಿಗೆ ಹೇಳಿ ಕ್ರಮ ಕೈಗೊಳ್ಳಬೇಕಾ ಎಂದಿದ್ದಾರೆ. ನಂತರ ವಿಡಿಯೊ ಕರೆ ಮಾಡಿ ಅಲ್ಲಿಂದ ತೆರಳುವಂತೆ ಅಜಿತ್ ಪವಾರ್‌ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Ajit pawar and anjana krishna
'ಶಾಮನೂರು ಕುಟುಂಬದ ಪೊಮೆರಿಯನ್ ನಾಯಿಯಂತೆ': ದಾವಣಗೆರೆ SP ಅವಹೇಳನ; ಶಾಸಕ ಬಿ.ಪಿ ಹರೀಶ್ ವಿರುದ್ಧ FIR; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com