ಹಣಕಾಸಿನ ಸಮಸ್ಯೆ; ಸ್ಮಾರ್ಟ್ ಫೋನ್ ಕೊಡಿಸಲು ಒಪ್ಪದ ತಾಯಿ; 12 ವರ್ಷದ ಬಾಲಕ ಆತ್ಮಹತ್ಯೆ!

ಸೆರೈಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥಕೇಶೋ ಗ್ರಾಮದಲ್ಲಿ ಈ ಘಟನೆ ನಡೆದಿದೆ.
Representational image
ಸಾಂದರ್ಭಿಕ ಚಿತ್ರonline desk
Updated on

ಜಾರ್ಖಂಡ್‌: ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಗುರುವಾರ 12 ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೆರೈಯಾಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥಕೇಶೋ ಗ್ರಾಮದಲ್ಲಿ ಈ ಘಟನೆ ನಡೆದಿದೆ.

"ಆ ಬಾಲಕ ತನ್ನ ತಾಯಿಯೊಂದಿಗೆ ಸ್ಮಾರ್ಟ್‌ಫೋನ್‌ಗಾಗಿ ಆಗಾಗ್ಗೆ ಜಗಳವಾಡುತ್ತಿದ್ದ, ಯುವಕ ತನ್ನ ತಾಯಿ ಬದ್ರಿಕಾ ದೇವಿ ಬಳಿ ಸ್ಮಾರ್ಟ್‌ಫೋನ್‌ಗಾಗಿ ಬೇಡಿಕೆ ಇಡುತ್ತಿದ್ದ. ಆದರೆ, ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಆಕೆ ಅದನ್ನು ಖರೀದಿಸಲು ನಿರಾಕರಿಸಿದ್ದರು.

Representational image
ಅಂಗನವಾಡಿ ಮೊಬೈಲ್‌ಗಳಿಗೆ ಸಿಗದ ಕರೆನ್ಸಿ ಭಾಗ್ಯ: ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ ಸ್ಮಾರ್ಟ್ ಫೋನ್!

"ಗುರುವಾರ ಬೆಳಿಗ್ಗೆ, ಬಾಲಕ ಶಾಲೆಯಿಂದ ಹಿಂತಿರುಗಿದಾಗ ಈ ವಿಷಯವಾಗಿ ತನ್ನ ತಾಯಿಯೊಂದಿಗೆ ಮತ್ತೊಂದು ಸುತ್ತಿನ ಜಗಳವಾಡಿದ್ದ. ಮಧ್ಯಾಹ್ನ ಹತ್ತಿರದ ಹೊಲದಿಂದ ಹಿಂತಿರುಗಿದಾಗ, ಆತ ತನ್ನ ಹುಲ್ಲಿನ ಮನೆಯ ಛಾವಣಿಯಿಂದ ಬಟ್ಟೆಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ" ಎಂದು ಸೆರೈಯಾಹತ್ ಪೊಲೀಸ್ ಠಾಣಾಧಿಕಾರಿ ರಾಜೇಂದ್ರ ಯಾದವ್ ಪಿಟಿಐಗೆ ತಿಳಿಸಿದ್ದಾರೆ.

ಹುಡುಗನ ತಂದೆ ಬೆಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. "ನಾವು ಮೃತದೇಹವನ್ನು ಡುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ" ಎಂದು ಯಾದವ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com