Video: ಕದನ ವಿರಾಮಕ್ಕೆ ಮಧ್ಯಸ್ಥಿಕೆ; ಪಾಕಿಸ್ತಾನ ನಂಬಿಕೆಗೆ ಅರ್ಹವಲ್ಲ- ಅಮೆರಿಕ ಒಪ್ಪಿಕೊಂಡಿದ್ದೇ ಆಶ್ಚರ್ಯ ಎಂದ ಇಸ್ರೇಲ್

ಭಾರತಕ್ಕೆ ಇಸ್ರೇಲ್ ರಾಯಭಾರಿಯಾಗಿರುವ ರೂವೆಲ್ ಅಜರ್ ಅವರು, ಇಸ್ರೇಲ್ ಯಾವತ್ತೂ ಪಾಕಿಸ್ತಾನವನ್ನು ಒಂದು ವಿಶ್ವಾಸಾರ್ಹ ದೇಶ ಎಂದು ನಂಬುವುದಿಲ್ಲ ಎಂದು ಹೇಳಿದ್ದಾರೆ.
Israel envoy slams Pakistan’s credibility in Iran ceasefire
ರೂವೆಲ್ ಅಜರ್ - ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್
Updated on

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಇಸ್ರೇಲ್ ರಾಯಭಾರಿ, ಅಮೆರಿಕದ ನಡೆ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಇಸ್ರೇಲ್ ರಾಯಭಾರಿಯಾಗಿರುವ ರೂವೆಲ್ ಅಜರ್ ಅವರು, ಇಸ್ರೇಲ್ ಯಾವತ್ತೂ ಪಾಕಿಸ್ತಾನವನ್ನು ಒಂದು ವಿಶ್ವಾಸಾರ್ಹ ದೇಶ ಎಂದು ನಂಬುವುದಿಲ್ಲ ಎಂದು ಹೇಳಿದ್ದಾರೆ.

"ನಾವು ಪಾಕಿಸ್ತಾನವನ್ನು ವಿಶ್ವಾಸಾರ್ಹ ದೇಶ ಎಂದು ನೋಡುವುದಿಲ್ಲ" ಎಂದು ಅಜರ್ ಅವರು ANI ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಮೆರಿಕ, ಪಾಕಿಸ್ತಾನದ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳಲು ತನ್ನದೇ ಆದ ಕಾರಣಗಳನ್ನು ಹೊಂದಿರಬಹುದು. ಆದರೆ, ಇಸ್ರೇಲ್ ಮಾತ್ರ, ಪಾಕಿಸ್ತಾನವನ್ನು ಯಾವತ್ತೂ ನಂಬಿಕೆಗೆ ಯೋಗ್ಯವಾದ ದೇಶ ಎಂದು ನಂಬುವುದಿಲ್ಲ ಎಂದು ರೂವೆಲ್ ಅಜರ್ ಹೇಳಿದ್ದಾರೆ.

ಈ ಹಿಂದೆಯೂ ಅಮೆರಿಕ, ಹಮಾಸ್ ಸಂಬಂಧಿತ ಗುರಿಗಳನ್ನು ಸಾಧಿಸಲು "ಕತಾರ್ ಮತ್ತು ಟರ್ಕಿಯಂತಹ ಸಮಸ್ಯಾತ್ಮಕ ದೇಶಗಳೊಂದಿಗೆ" ಹಿಂದೆ ಕೆಲಸ ಮಾಡಿದೆ ಎಂದು ಇಸ್ರೇಲ್ ರಾಯಭಾರಿ ಹೇಳಿದ್ದಾರೆ.

Israel envoy slams Pakistan’s credibility in Iran ceasefire
West-Asia war: ಲೆಬನಾನ್ ನಮ್ಮ ಒಪ್ಪಂದದಲ್ಲಿರಲಿಲ್ಲ- ಅಮೆರಿಕಾ ಸ್ಪಷ್ಟನೆ; ಅತಂತ್ರ ಸ್ಥಿತಿಯಲ್ಲಿ ಕದನ ವಿರಾಮ..!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com