ಹಾವನ್ನಾದ್ರೂ ನಂಬಬಹುದು ಆದ್ರೆ.. ಬಿಜೆಪಿ ಮಾತ್ರ ಬೇಡ: ಅಸ್ಸಾಂ ಎಲೆಕ್ಷನ್ ಗೆ 50,000 ಹೊರಗಿನ ಜನರು! ಇದೇನಿದು ಮಮತಾ ಆರೋಪ?

ಉತ್ತರ 24 ಪರಗಣ ಜಿಲ್ಲೆಯ ಟೆಂಟುಲಿಯಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಡಿ ದೇಶದ ಯಾವುದೇ ಸಂಸ್ಥೆ ತಟಸ್ಥವಾಗಿ ಉಳಿದಿಲ್ಲ. ಕೇಸರಿ ಪಕ್ಷವು ಎಲ್ಲವನ್ನೂ ಖರೀದಿಸಿದೆ" ಎಂದು ತೀವ್ರ ವಾಗ್ದಾಳಿ ನಡೆಸಿದರು.
West Bengal Chief Minister Mamata Banerjee
ಮಮತಾ ಬ್ಯಾನರ್ಜಿ
Updated on

ಟೆಂಟುಲಿಯಾ: ಈಶಾನ್ಯ ರಾಜ್ಯದ ನಿವಾಸಿಗಳಿಂದ ಮತ ಪಡೆಯುವ ನಂಬಿಕೆ ಇಲ್ಲದೆ ಬಿಜೆಪಿ ಅಸ್ಸಾಂ ಚುನಾವಣೆಗೆ ಹೊರಗಿನಿಂದ ಜನರನ್ನು ಕರೆತಂದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಟೆಂಟುಲಿಯಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಡಿ ದೇಶದ ಯಾವುದೇ ಸಂಸ್ಥೆ ತಟಸ್ಥವಾಗಿ ಉಳಿದಿಲ್ಲ. ಕೇಸರಿ ಪಕ್ಷವು ಎಲ್ಲವನ್ನೂ ಖರೀದಿಸಿದೆ" ಎಂದು ತೀವ್ರ ವಾಗ್ದಾಳಿ ನಡೆಸಿದರು.

ಅಸ್ಸಾಂ ಚುನಾವಣೆಗೆ ಉತ್ತರ ಪ್ರದೇಶದಿಂದ 50,000 ಜನರನ್ನು ಕರೆತಂದಿದ್ದರು ಎಂದು ಗಂಭೀರ ಆರೋಪ ಮಾಡಿದ ಮಮತಾ, ಹಾವನ್ನಾದ್ರೂ ನಂಬಬಹುದು ಆದ್ರೆ.. ಬಿಜೆಪಿ ಮಾತ್ರ ಬೇಡ ಎಂದು ಜನರಿಗೆ ಹೇಳಿದರು.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಗುರುವಾರ ಒಂದೇ ಹಂತದಲ್ಲಿ ಚುನಾವಣೆ ನಡೆಸಲಾಯಿತು. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ವಿಧಾನಸಭಾ ಚುನಾವಣೆಗೂ ಮುನ್ನಾ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ಮುಂದುವರೆದಿದೆ.

ಪಶ್ಚಿಮ ಬಂಗಾಳದಲ್ಲಿಯೂ ಹೊರಗಿನವರನ್ನು ಕರೆತರುವ ತಂತ್ರವನ್ನು ಬಿಜೆಪಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಹಲವಾರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ಚುನಾವಣಾ ಆಯೋಗವು ವರ್ಗಾವಣೆ ಮಾಡಿದ

"ಜನರು, ಹಣ ಮತ್ತು ಡ್ರಗ್ಸ್ ತರಲಾಗುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಅದನ್ನು ಹೋರಾಡಿ ಗೆಲ್ಲುತ್ತಾರೆ. ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆ ವೇಳೆ 90 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಪತ್ರಿಕೆಯೊಂದರ ವರದಿ ಪ್ರಕಾರ, ಡಿಲೀಟ್ ಆದ 90 ಲಕ್ಷ ಹೆಸರುಗಳಲ್ಲಿ 60 ಲಕ್ಷ ಹಿಂದೂಗಳು ಮತ್ತು 30 ಲಕ್ಷ ಮುಸ್ಲಿಮರಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

West Bengal Chief Minister Mamata Banerjee
ಪಶ್ಚಿಮ ಬಂಗಾಳ: ಮಹಿಳೆಯರಿಗೆ 3,000 ರೂ. ಆರ್ಥಿಕ ನೆರವು: 1 ಕೋಟಿ ಉದ್ಯೋಗ, ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಅಸ್ಸಾಂನಲ್ಲಿ NRC ಕಸರತ್ತಿನಲ್ಲಿ ಪಟ್ಟಿಯಿಂದ ಹೊರಗುಳಿದ 19 ಲಕ್ಷ ಹೆಸರುಗಳಲ್ಲಿ 13 ಲಕ್ಷ ಹಿಂದೂಗಳು ಮತ್ತು 6 ಲಕ್ಷ ಮುಸ್ಲಿಮರ ಹೆಸರನ್ನು ತೆಗೆದುಹಾಕಲಾಗಿದೆ. ಬಿಜೆಪಿಯನ್ನು ಎಂದಿಗೂ ನಂಬಬಾರದು ಎಂದು ಅವರು ಹೇಳಿದರು. ರಾಜ್ಯದ ಎಲ್ಲಾ 294 ಸ್ಥಾನಗಳಲ್ಲಿ ನನ್ನನ್ನೇ ಟಿಎಂಸಿ ಅಭ್ಯರ್ಥಿಯಾಗಿ ಪರಿಗಣಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ನಿಮಗೆ ತೃಣಮೂಲ ಸರ್ಕಾರ ಬೇಕಾದರೆ ಎಲ್ಲಾ ಸ್ಥಾನಗಳಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com