

ಲಖನೌ: ಕುಂಭಮೇಳದ ಸಮಯದಲ್ಲಿ ವೈರಲ್ ಆದ ಮೊನಾಲಿಸಾ ಭೋಸ್ಲೆ, ಉತ್ತರ ಪ್ರದೇಶ ಮೂಲದ ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಾಲಯದಲ್ಲಿ ಹಿಂದೂ ಆಚರಣೆಗಳನ್ನು ಅನುಸರಿಸಿ ವಿವಾಹವಾಗಿದ್ದರು.
ಮೊನಾಲಿಸಾ ಮದುವೆಯನ್ನು ಆಕೆಯ ಪೋಷಕರು ಮತ್ತು ಆಕೆ ನಟಿಸುತ್ತಿದ್ದ ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಲವ್ ಜಿಹಾದ್ ಆರೋಪ ಮಾಡಿದ್ದರು. ಇದಕ್ಕೆ ಇಂಬು ನೀಡುವಂತೆ ಕೋರ್ಟ್ ಕೂಡ ಮೊನಾಲಿಸಾ ಅಪ್ರಾಪ್ತೆ ಎಂದು ತೀರ್ಪು ನೀಡಿದ ಪರಿಣಾಮ ಫರ್ಮಾನ್ ಖಾನ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.
ಇನ್ನು ಕುಂಭಮೇಳದಲ್ಲಿ ಮೊನಾಲಿಸಾ ಫೇಮಸ್ ಆದ ಬಳಿಕ ಬಾಲಿವುಡ್ ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಮೊನಾಲಿಸಾ ಜೊತೆ ಚಿತ್ರ ಮಾಡಲು ಮುಂದಾಗಿದ್ದರು.
ಆದರೆ ಆ ಸೆಟ್ಟೇರಿದ ಸುದ್ದಿ ಬಿಟ್ಟರೆ ಬೇರಾವುದೇ ಅಪ್ ಡೇಟ್ ಗಳು ಸಿಗಲಿಲ್ಲ. ಇದಾದ ಕೆಲವೇ ತಿಂಗಳ ಅಂತರದಲ್ಲಿ ಮೊನಾಲಿಸಾ ಮನೆಯಿಂದ ಪರಾರಿಯಾಗಿ ಉತ್ತರ ಪ್ರದೇಶ ಮೂಲದ ನಟ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದರು.
ಸನೋಜ್ ಮಿಶ್ರಾ ಲೈಂಗಿಕ ಕಿರುಕುಳ
ಇನ್ನು ಈ ವಿವಾದ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿದ್ದ ಮೊನಾಲಿಸಾ, ನಿರ್ದೇಶಕ ಸನೋಜ್ ಮಿಶ್ರಾ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಚಿತ್ರೀಕರಣದ ಸಮಯದಲ್ಲಿ ತನ್ನೊಂದಿಗೆ ಕನಿಷ್ಠ 10 ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದಿದ್ದರು.
ಫರ್ಮಾನ್ ಖಾನ್ ಜೊತೆಗಿನ ವಿವಾಹದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಭಾಗಿಯಾಗಿದೆ ಎಂದು ಆರೋಪಿಸಿ ಮಿಶ್ರಾ ಪೊಲೀಸ್ ದೂರು ದಾಖಲಿಸಿದ ನಂತರ ಈ ಆರೋಪಗಳು ಬಂದಿದ್ದವು.
ಮೊನಾಲಿಸಾ ಅಪ್ರಾಪ್ತೆ ಎಂದಿದ್ದ ಸನೋಜ್ ಮಿಶ್ರಾ
ಇನ್ನು ಎರಡೂ ಕಡೆಯ ನಡುವಿನ ಪದೇ ಪದೇ ಆರೋಪಗಳ ನಡುವೆ, ಮೊನಾಲಿಸಾ ಭೋಸ್ಲೆ ಮತ್ತು ಫರ್ಮಾನ್ ಖಾನ್ ಅವರ ವಿವಾಹವ ಅನೂರ್ಜಿತ. ವು ದೀರ್ಘಕಾಲ ಉಳಿಯುವುದಿಲ್ಲ ಎಂದು ನಿರ್ದೇಶಕ ಸನೋಜ್ ಮಿಶ್ರಾ ಹೇಳಿದ್ದರು. ಅವರ ಪ್ರಕಾರ, ಇದು "ಲವ್ ಜಿಹಾದ್" ಹಕ್ಕುಗಳಿಂದಲ್ಲ, ಆದರೆ ಅವರ ವಯಸ್ಸಿನ ಕುರಿತು NHRC ತನಿಖೆಯಿಂದಾಗಿ ಮದುವೆ ಅನೂರ್ಜಿತಗೊಳ್ಳಬಹುದು. ಹುಡುಗಿಯ ವಯಸ್ಸು ಮದುವೆಗೆ ಕಾನೂನುಬದ್ಧ ವಯಸ್ಸಿಗಿಂತ ಕಡಿಮೆಯಿರಬಹುದು ಎಂದು ದೂರು ನೀಡಿದ್ದರು.
ಸನೋಜ್ ಮಿಶ್ರಾ Instagram ಪೋಸ್ಟ್
ಅತ್ತ ದೂರಿನ ವಿಚಾರಣೆ ನಡೆಸಿದ್ದ ಕೋರ್ಟ್ ಮೊನಾಲಿಸಾ ಅಪ್ರಾಪ್ತೆ ಎಂದು ಘೋಷಣೆ ಮಾಡಿತ್ತು. ಅಲ್ಲದೆ ಫರ್ಮಾನ್ ಖಾನ್ ವಿರುದ್ದ ಪೋಕ್ಸೋ ಅಡಿ ಪ್ರಕರಣವೂ ದಾಖಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸನೋಜ್ ಮಿಶ್ರಾ ಕುತೂಹಲಕಾರಿ ಪೋಸ್ಟ್ ಮಾಡಿದ್ದು, ಕೊನೆಗೂ ವನವಾಸ ಅಂತ್ಯ ಎಂದು ಬರೆದುಕೊಂಡಿದ್ದಾರೆ.
ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸನೋಜ್ ಮಿಶ್ರಾ, 'ಮಹಾದೇವ್ ಶೀಘ್ರ ನನ್ನ ವನವಾಸ ಅಂತ್ಯ ಮಾಡುತ್ತಾರೆ. ಕಾನೂನು ತನ್ನ ಕೆಲಸ ಆರಂಭಿಸಿದೆ. ಮೊನಾಲಿಸಾಳ ಲವ್ ಜಿಹಾದ್ ಆರೋಪದ ಕುರಿತು ನಾನು ನನ್ನ ಕೆಲಸ ಬಿಟ್ಟು ಆಕೆಯ ಸಂತ್ರಸ್ಥ ಕುಟುಂಬದ ಪರವಾಗಿ ನ್ಯಾಯಕೊಡಿಸಲು ನಿಂತಿದ್ದೆ.
ಅದು ಈಗ ಪರಿಣಾಮ ತೋರಿಸಲು ಆರಂಭಿಸಿದೆ. ನಾವು ಶೀಘ್ರದಲ್ಲೇ ಗೆಲುವು ಸಾಧಿಸಬಹುದು, ಮತ್ತು ಈ ಪಿತೂರಿ ನಡೆಸಿದ ಜಿಹಾದಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಬರೆದಿದ್ದಾರೆ.
ಈ ಹೋರಾಟದಿಂದ ನನ್ನ ಚಿತ್ರಕ್ಕೆ ನಷ್ಟ
ಅಂತೆಯೇ ಈ ನಿರಂತರ ಹೋರಾಟದಿಂದ ನನ್ನ 'ದಿ ಡೈರಿ ಆಫ್ ಮಣಿಪುರ' ಚಿತ್ರಕ್ಕೆ ತೀವ್ರ ನಷ್ಟವಾಯಿತು. ಒಂದೆಡೆ ಆರ್ಥಿಕ ನಷ್ಟದ ಜೊತೆ ಜೊತೆಗೆ ಆ ಜಿಹಾದಿ ಮೊನಾಲಿಸಾಳನ್ನು ನನ್ನ ವಿರುದ್ಧ ಛೂಬಿಟ್ಟು ಇಲ್ಲ ಸಲ್ಲದ ಆರೋಪಗಳನ್ನು ಮಾಡಿಸಿದ್ದ.
ಸಾಕಷ್ಟು ಧಮ್ಕಿಗಳು ಬಂದವು. ಆದರೂ ನಿಮ್ಮೆಲ್ಲರ ಬೆಂಬಲದಿಂದ ನಾನು ಈ ಧಾರ್ಮಿಕ ಹೋರಾಟ ನಿಲ್ಲಲು ಬಿಡುವುದಿಲ್ಲ ಎಂದು ಸನೋಜ್ ಮಿಶ್ರಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement