40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಉಳಿತಾಯ ಎನ್ನುವುದು ಇಲ್ಲದೇ ಹೋದರೆ ಎಂತಹ ದೊಡ್ಡ ಸಂಬಳ ಕೂಡ ಮನಷ್ಯನನ್ನು ಸಂಕಷ್ಟಗಳಿಂದ ರಕ್ಷಿಸಲಾರದು ಎಂಬುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ.
Techie earning Rs 40 Lacks per annuam turns Rapido driver
ಸಾಫ್ಟ್ ವೇರ್ ಎಂಜಿನಿಯರ್ ಸಂಕಷ್ಟ ವಿವರಿಸಿದ ಸ್ನೇಹಿತ
Updated on

ಗಾಜಿಯಾಬಾದ್: ಭರ್ಜರಿ ವೇತನ ಪಡೆಯುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಇದೀಗ ದಿಢೀರ್ ಕೆಲಸ ಕಳೆದುಕೊಂಡು ತನ್ನ ಮನೆ ಉಳಿಸಿಕೊಳ್ಳಲು ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಧಾರಣ ಕಥೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಸಾಫ್ಟ್ ವೇರ್ ಉದ್ಯೋಗ.. ಕೈ ತುಂಬ ಸಂಬಳ.. ಎಂದು ಮಿತಿ ಮೀರಿ ಖರ್ಚು ಮಾಡುವವರೇ ಹೆಚ್ಚು.. ಆದರೆ ಉಳಿತಾಯ ಎನ್ನುವುದು ಇಲ್ಲದೇ ಹೋದರೆ ಎಂತಹ ದೊಡ್ಡ ಸಂಬಳ ಕೂಡ ಮನಷ್ಯನನ್ನು ಸಂಕಷ್ಟಗಳಿಂದ ರಕ್ಷಿಸಲಾರದು ಎಂಬುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ.

ಹೌದು.. ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ದೇಶದ ಪ್ರತಿಷ್ಟಿತ ಸಂಸ್ಥೆಯಲ್ಲಿ ಟೆಕ್ಕಿಯಾಗಿ ಉದ್ಯೋಗ ಳಿಸಿದ್ದ. ವಾರ್ಷಿಕ 40 ಲಕ್ಷ ರೂ ಸಂಬಳ.. ಇನ್ನೇನು ತನ್ನ ಕಷ್ಟಗಳೆಲ್ಲಾ ದೂರಾಗಿ ಐಶಾರಾಮಿ ಜೀವನ ನಡೆಸಬಹುದು ಎಂದು ಭಾವಿಸಿದ್ದ.

ಅದರಂತೆ 2024ರಲ್ಲಿ ಇದೇ ಘಾಜಿಯಾಬಾದ್ ಪ್ರತೀಕ್ ಗ್ರ್ಯಾಂಡ್ ಸಿಟಿಯಲ್ಲಿ 1.4 ಕೋಟಿ ರೂ ಮೌಲ್ಯದ 3 BHK ಅಪಾರ್ಟ್ ಮೆಂಟ್ ಖರೀದಿಸಿದ್ದ. ಇದು ಆತನ ಕನಸು ಕೂಡ ಆಗಿತ್ತು. ಅದರಂತೆ ಮಾಸಿಕ 95 ಸಾವಿರ ರೂ ಇಎಂಐ ಪಾವತಿಸಬೇಕಿತ್ತು. ತನ್ನ ಉದ್ಯೋಗ ಮತ್ತು ಆದಾಯ ಹೀಗೆ ಸ್ಥಿರವಾಗಿರುತ್ತದೆ ಎಂದು ವಿಶ್ವಾಸದಲ್ಲಿದ್ದ.

Techie earning Rs 40 Lacks per annuam turns Rapido driver
Oracle layoffs: ಹೆಚ್ಚಿನ ವೇತನ, ಅಸ್ಥಿರತೆ, ಜೀವನಶೈಲಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ!

ಆದರೆ ದಿಢೀರ್ ಒಂದು ದಿನ ಆ ಪ್ರತಿಷ್ಠಿತ ಸಂಸ್ಥೆ ಸಾಮೂಹಿಕ ವಜಾ ಘೋಷಣೆ ಮಾಡಿತ್ತು. ಆ ಪಟ್ಟಿಯಲ್ಲಿ ಈ ಸಾಫ್ಟ್ ವೇರ್ ಎಂಜಿನಿಯರ್ ಕೂಡ ಇದ್ದ. ಈ ವೇಳೆ ಆ ಟೆಕ್ಕಿ ಮೇಲೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ಕೆಲಸ ಇಲ್ಲ.. ಆದಾಯವೂ ಇಲ್ಲ.. ಮನೆ ಸಾಲ, ದೈನಂದಿನ ವೆಚ್ಚಗಳ ಹೇಗೆ ಸರಿದೂಗಿಸುವುದು ಎಂದು ಚಿಂತಿಸತೊಡಗಿದೆ.

ಬೇರೆ ಸಂಸ್ಥೆಗಳಲ್ಲಿ ಕೆಲಸಕ್ಕೆ ಅರ್ಜಿ ಹಾಕಿದರೂ ಯಾವುದೇ ಸ್ಪಂದನೆ ಇಲ್ಲ. ಮೂರು ತಿಂಗಳಿನಿಂದ ಯಾವುದೇ ಆದಾಯವಿಲ್ಲ. ಒಂದು ಕಾಲದಲ್ಲಿ ದಿನಚರಿಯಂತೆ ಕಾಣುತ್ತಿದ್ದ ಅದೇ ಇಎಂಐ ಈಗ ಆತಂಕದ ನಿರಂತರ ಮೂಲವಾಗಿದೆ. ಸಾಲದ ಬಾಧ್ಯತೆಗಳು ನಿರಂತರವಾಗಿ ಮುಂದುವರೆದಿದೆ.

ಟೆಕ್ಕಿಯಾಗಿದ್ದವ ಈಗ ರ್ಯಾಪಿಡೋ ಚಾಲಕ

ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ನಿಭಾಯಿಸಲು, ಆತ ಈಗ ರ್ಯಾಪಿಡೋ ರೈಡರ್ ಆಗಿ ಕೆಲಸ ಮಾಡಲು ಆರಂಭಿಸಿದ್ದಾನೆ. ತನ್ನ ಮನೆ ಉಳಿಸಿಕೊಳ್ಳಲು ಆತ ಸಾಹಸಕ್ಕೆ ಕೈಹಾಕಿದ್ದಾನೆ. ಆತನ ಪ್ರತಿ ರೈಡ್ ತನ್ನ ದೊಡ್ಡ ಮಾಸಿಕ ಬಾಕಿಗಳನ್ನು ಪೂರೈಸಲು ಒಂದು ಸಣ್ಣ ಮೊತ್ತವನ್ನು ಕೊಡುಗೆ ನೀಡುತ್ತಿದೆ.

ಇತ್ತೀಚೆಗೆ ಅವರನ್ನು ಭೇಟಿಯಾದ ಸ್ನೇಹಿತನೊಬ್ಬ ಇವಿಷ್ಟೂ ಘಟನೆಯನ್ನು ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ನೇಹಿತನ ಭಾವನಾತ್ಮಕ ಒತ್ತಡದ ಗೋಚರ ಲಕ್ಷಣಗಳನ್ನು ಗಮನಿಸಿದ್ದಾನೆ. ಹೊಸ ಉದ್ಯೋಗವನ್ನು ಪಡೆಯುವ ಅನಿಶ್ಚಿತತೆಯು ಆತನ ಒತ್ತಡವನ್ನು ಹೆಚ್ಚಿಸಿದೆ. ಒಂದು ಕಾಲದಲ್ಲಿ ಕನಸಾಗಿದ್ದ ಮನೆ ಇದೀಗ ಆತನ ಚಿಂತೆಯ ಮೂಲವಾಗಿದೆ.

ಹೆಚ್ಚು ಸ್ಥಿರವಾದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರದ ಪರಿಣಾಮಗಳೊಂದಿಗೆ ಅವರು ಹೋರಾಡುತ್ತಿರುವಾಗ, ನಿದ್ದೆಯಿಲ್ಲದ ರಾತ್ರಿಗಳು ಮತ್ತು ವಿಷಾದವು ಈಗ ಆತನ ಆಲೋಚನೆಗಳಲ್ಲಿ ಪ್ರಾಬಲ್ಯ ಹೊಂದಿದೆ. ಐಟಿಯಂತಹ ವಲಯಗಳಲ್ಲಿ, ಹೆಚ್ಚಿನ ಸಂಬಳವು ದೀರ್ಘಕಾಲೀನ ಭದ್ರತೆಯ ಭ್ರಮೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ವ್ಯಾಪಕ ಚರ್ಚೆ

ಈ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕ ಬಳಕೆದಾರರು ಸಲಹೆಯನ್ನು ನೀಡುತ್ತಾರೆ.

"ನೀವು ಎದುರಿಸುತ್ತಿರುವ ಪರಿಸ್ಥಿತಿಗೆ ನನಗೆ ತುಂಬಾ ವಿಷಾದವಿದೆ. ನಾನು ವೈಯಕ್ತಿಕವಾಗಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಆದರೆ ಒಂದು ಸರಳವಾದ ಪ್ರಾಯೋಗಿಕ ಸಲಹೆಯೆಂದರೆ ಮನೆಯನ್ನು ಬಿಟ್ಟುಬಿಡುವುದು, ಏಕೆಂದರೆ ಅದು ಒತ್ತಡ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ಸುಲಭವಲ್ಲದಿರಬಹುದು, ಆದರೆ ಪರಿಸ್ಥಿತಿಗೆ ಅನುಗುಣವಾಗಿ ಪ್ರಾಯೋಗಿಕವಾಗಿದೆ" ಎಂದು ಒಬ್ಬ ಬಳಕೆದಾರರು ಹೇಳಿದರು.

"ತಿಂಗಳಿಗೆ 65-70 ಸಾವಿರಕ್ಕೆ ಬಾಡಿಗೆಗೆ ಪಡೆದು ಮುಂದಿನ 2 ವರ್ಷಗಳವರೆಗೆ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುವುದು ಉತ್ತಮ, ಹಾಗೆಯೇ ಅದನ್ನು ಮಾರಾಟ ಮಾಡಲು ಪ್ರಯತ್ನಿಸುವುದು. 15 ಲಕ್ಷ ನಷ್ಟವಾದರೂ ಅವನು ಅದನ್ನು ಮಾರಾಟ ಮಾಡಬೇಕು" ಎಂದು ಮತ್ತೊಬ್ಬರು ಹೇಳಿದರು.

"ಅವನಿಗೆ 1 ವರ್ಷದ ಉಳಿತಾಯವಿಲ್ಲದಿದ್ದರೆ ಮನೆಯನ್ನು ಮಾರಾಟ ಮಾಡಿ.. ಮತ್ತು ಬಾಡಿಗೆಗೆ ಹೋಗಿ.. ಅವನಿಗೆ ಕೆಲವು ಮೌಲ್ಯಗಳು ಸಿಗುತ್ತವೆ.. ಅವನು ಮೊದಲಿನಿಂದ ಪ್ರಾರಂಭಿಸಬೇಕು.. ಅವನಿಗೆ ಇನ್ನೊಂದು ಕೆಲಸ ಸಿಗುವವರೆಗೆ" ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.

Techie earning Rs 40 Lacks per annuam turns Rapido driver
ಕೆಲ್ಸ ಹೋದ್ರೆ ಏನು.. ವಿಂಟೇಜ್ ಪ್ಲಾನ್ ಮೂಲಕ ಮಾಸಿಕ 43 ಸಾವಿರ ರೂ ಆದಾಯ ಗಳಿಸುತ್ತಿರುವ Oracle ಮಾಜಿ ಸಿಬ್ಬಂದಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com