Parliament special session: ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಮಂಡನೆ; ವಿರೋಧ ಪಕ್ಷಗಳ ತೀವ್ರ ವಿರೋಧ

ಈ ವಿವಾದದ ಕೇಂದ್ರಬಿಂದು ಕ್ಷೇತ್ರ ಮರುವಿಂಗಡಣೆ ಆಗಿದ್ದು, ಇದರಿಂದ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗಿ ಉತ್ತರ ರಾಜ್ಯಗಳಿಗೆ ಹೆಚ್ಚು ಲಾಭವಾಗುತ್ತದೆ ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.
Lok Sabha session
ಲೋಕಸಭೆ ಕಲಾಪ
Updated on

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಗುರುವಾರ ಆರಂಭದ ದಿನವೇ ತೀವ್ರ ರಾಜಕೀಯ ವಾಗ್ವಾದ, ಕೋಲಾಹಲ ಉಭಯ ಸದನಗಳಲ್ಲಿ ಕಂಡುಬಂದಿತು. ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘಾವಲ್ ಮತ್ತು ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಲು ಹಾಗೂ ಕ್ಷೇತ್ರ ಪುನರ್ವಿಂಗಡಣೆ ಆಯೋಗ ರಚನೆಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಮಂಡಿಸಿದರು. ಇದಕ್ಕೆ ವಿರೋಧ ಪಕ್ಷಗಳು “ಸಂವಿಧಾನ ವಿರೋಧಿ” ಎಂದು ಪ್ರತಿಭಟನೆ ನಡೆಸಿದವು.

ಈ ವಿವಾದದ ಕೇಂದ್ರಬಿಂದು ಕ್ಷೇತ್ರ ಮರುವಿಂಗಡಣೆ ಆಗಿದ್ದು, ಇದರಿಂದ ದಕ್ಷಿಣ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗಿ ಉತ್ತರ ರಾಜ್ಯಗಳಿಗೆ ಹೆಚ್ಚು ಲಾಭವಾಗುತ್ತದೆ ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಮಹಿಳಾ ಮೀಸಲಾತಿ ಜಾರಿಗೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಸಂಬಂಧ ಹಾಕಬಾರದು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರಡು ಸಂವಿಧಾನ ತಿದ್ದುಪಡಿ ಮಸೂದೆ ಪ್ರಕಾರ, 2011ರ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ಪ್ರಕ್ರಿಯೆ ನಡೆಸಿ, 2029ರ ಲೋಕಸಭಾ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶದಿಂದ ಲೋಕಸಭೆಯ ಸ್ಥಾನಗಳನ್ನು ಪ್ರಸ್ತುತ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ.

ಇದೇ ವೇಳೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳಲ್ಲಿಯೂ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಕಲ್ಪಿಸಲು ಸ್ಥಾನಗಳನ್ನು ಹೆಚ್ಚಿಸಲಾಗುತ್ತದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ವಿವಿಧ ಕ್ಷೇತ್ರಗಳಿಗೆ ರೋಟೇಶನ್ ಆಧಾರದ ಮೇಲೆ ಹಂಚಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

Lok Sabha session
Parliament special session: ಇಂದಿನಿಂದ ಸಂಸತ್ತು ವಿಶೇಷ ಕಲಾಪ; ಆಡಳಿತ-ವಿಪಕ್ಷಗಳ ಚರ್ಚೆ ಬಗ್ಗೆ ತೀವ್ರ ಕುತೂಹಲ; ಅಜೆಂಡಾ ಹೀಗಿದೆ...

ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

ಇನ್ನೊಂದೆಡೆ, ರಾಜ್ಯಸಭೆಯ ಹೊಸದಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಮತ್ತು ಸಂತಾಪ ಸೂಚನೆ ನಂತರ ಶುಕ್ರವಾರ ಬೆಳಗ್ಗೆಯವರೆಗೆ ಮುಂದೂಡಲಾಯಿತು.

ನಿತಿನ್ ನಬಿನ್ ಸೇರಿದಂತೆ ಹಲವು ಸದಸ್ಯರು ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಸ್ಸಾಂ, ಬಿಹಾರ, ಹರಿಯಾಣ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಅಸ್ಸಾಂನಿಂದ ತೆರಾಶ್ ಗೌವಾಲಾ, ಜೋಗೇನ್ ಮೋಹನ್ ಮತ್ತು ಪ್ರಮೋದ್ ಬೊರೋ ಇದ್ದರು. ಬಿಹಾರದಿಂದ ನಿತಿನ್ ನಬೀನ್, ಉಪೇಂದ್ರ ಕುಶ್ವಾಹಾ, ರಾಮನಾಥ್ ಠಾಕೂರ್ ಮತ್ತು ಶಿವೇಶ್ ಕುಮಾರ್ ಆಯ್ಕೆಯಾಗಿದ್ದಾರೆ.

ಛತ್ತೀಸ್‌ಗಢದಿಂದ ಲಕ್ಷ್ಮಿ ವರ್ಮಾ ಮತ್ತು ಫುಲೋ ದೇವಿ ನೆಟಮ್, ಹರಿಯಾಣದಿಂದ ಕರಂವೀರ್ ಸಿಂಗ್ ಬೌಧ್ ಮತ್ತು ಸಂಜಯ್ ಭಾಟಿಯಾ, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದಿಂದ ವಿನೋದ್ ಶ್ರೀಧರ್ ತಾವ್ಡೆ ಮತ್ತು ಒಡಿಶಾದಿಂದ ಸುಜೀತ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಮತ್ತು ವೆಂ ನರೇಂದ್ರ ರೆಡ್ಡಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com