ಅಗ್ನಿಪರೀಕ್ಷೆಯಲ್ಲಿ ಸೋತ NDA: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು!

ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಮಸೂದೆಗಳ ಪರವಾಗಿ 278 ಸದಸ್ಯರು ಮತ ಚಲಾಯಿಸಿದ್ದರೆ, ಮಸೂದೆಗಳ ವಿರುದ್ಧವಾಗಿ 211 ಸದಸ್ಯರು ಮತ ಚಲಾಯಿಸಿದ್ದಾರೆ.
ಅಗ್ನಿಪರೀಕ್ಷೆಯಲ್ಲಿ ಸೋತ NDA: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು!
Updated on

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ. ಮಸೂದೆಗಳ ಪರವಾಗಿ 298 ಸದಸ್ಯರು ಮತ ಚಲಾಯಿಸಿದ್ದರೆ, ಮಸೂದೆಗಳ ವಿರುದ್ಧವಾಗಿ 230 ಸದಸ್ಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ 528 ಸದಸ್ಯರು ಮತ ಚಲಾಯಿಸಿದ್ದರು. ಮಸೂದೆಗಳು ಅಂಗೀಕಾರಗೊಳ್ಳಲು 352 ಸದಸ್ಯರ ಬೆಂಬಲ ಬೇಕಿತ್ತು. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳು ಸೇರಿದಂತೆ ಸಂಸತ್ತಿನಲ್ಲಿ ಗುರುವಾರ 3 ಪ್ರಮುಖ ಮಸೂದೆಗಳನ್ನು ಪರಿಚಯಿಸಲಾಯಿತು. ಮೊದಲಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ವಿಧೇಯಕವನ್ನು ಇಂಡಿ ಕೂಟ ಸೋಲಿಸಿದೆ.

2026ರ ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ 489 ಮತಗಳಲ್ಲಿ 278 ಮತಗಳು ಮಸೂದೆಯ ಪರವಾಗಿ ಚಲಾವಣೆಯಾಗಿದ್ದರೆ 211 ಮತಗಳು ವಿರುದ್ಧವಾಗಿ ಚಲಾವಣೆಯಾದವು. ಮಹಿಳಾ ಮೀಸಲಾತಿ ಮಸೂದೆಯು ಸಾಂವಿಧಾನಿಕ ತಿದ್ದುಪಡಿಗೆ ಅಗತ್ಯವಾದ 2/3 ಮೆಜಾರಿಟಿ ಪಡೆಯುವಲ್ಲಿ ಎನ್.ಡಿ. ಸರ್ಕಾರ ವಿಫಲವಾಗಿದೆ. ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದರಿಂದ ಮತ್ತೆರೆಡು ಮಸೂದೆಯನ್ನು ಮತಕ್ಕೆ ತೆಗೆದುಕೊಳ್ಳದೇ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ನಾಳೆ ಮುಂದೂಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com