

ಕೇರಳ: ಕೇರಳದ ಫರ್ಮಾನ್ ಜೊತೆ ವಿವಾಹವಾಗಿದ್ದ ಕುಂಭಮೇಳ ಖ್ಯಾತಿಯ ಮೋನಾಲಿಸಾ ಭೋಸ್ಲೆ ಈಗ ಗರ್ಭಿಣಿ ಎಂಬ ಮಾಹಿತಿ ಸ್ವತಃ ಆಕೆಯ ಪತಿಯಿಂದ ಬಹಿರಂಗವಾಗಿದೆ.
2026 ರ ಮಾ.11 ರಂದು ಮೊನಲಿಸಾ, ಫರ್ಮಾನ್ ಎಂಬಾತನನ್ನು ಕೇರಳದಲ್ಲಿ ವಿವಾಹವಾದರು. ಇವರ ವಿವಾಹಕ್ಕೆ ಕೇರಳದ ಹಲವು ರಾಜಕೀಯ ಮುಖಂಡರು ಬೆಂಬಲಿಸಿ ನೇತೃತ್ವ ವಹಿಸಿದ್ದರು.
ಈ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೋನಾಲಿಸಾ ಭೋಸ್ಲೆ ಕುಟುಂಬದವರು ಇದನ್ನು ಲವ್ ಜಿಹಾದ್ ಎಂದು ಮೊನಲಿಸಾ ಕುಟುಂಬದವರು ಆರೋಪಿಸಿದ್ದರು. ಅದಾದ ಬಳಿಕ ಮೊನಲಿಸಾ, ಅಪ್ರಾಪ್ತೆ ಎಂದು ಆರೋಪಿಸಿ ಪತಿ ಫರ್ಮಾನ್ ಮೇಲೆ ಪೋಕ್ಸೊ ಸಹ ದಾಖಲಾಗಿತ್ತು. ಈ ಘಟನೆಗಳ ಬಳಿಕ ಪತಿ ಫರ್ಮಾನ್ ಮೊನಾಲಿಸಾ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು. ಈಗ ಮೊನಲಿಸಾ ಗರ್ಭಿಣಿ ಎಂದು ಫರ್ಮಾನ್ ಪೊಲೀಸರ ಬಳಿ ಹೇಳಿದ್ದಾರೆ.
ಮೋನಾಲಿಸಾ ಮತ್ತು ಫರ್ಮನ್ ಖಾನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಈ ಕುರಿತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (NCST) ನಡೆಸಿದ ತನಿಖೆಯಲ್ಲಿ, ಮದುವೆಯ ಸಮಯದಲ್ಲಿ ಮೊನಾಲಿಸಾ ವಯಸ್ಸು 16 ವರ್ಷ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತನ್ನ ಕುಟುಂಬದವರು ತನ್ನನ್ನು ಅಣ್ಣನಂತಿರುವ ಸೋದರ ಸಂಬಂಧಿಯ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದರು ಎಂದು ಮೋನಾಲಿಸಾ ಈ ಹಿಂದೆ ಆರೋಪಿಸಿದ್ದರು. ಆ ಕಷ್ಟದ ಸಮಯದಲ್ಲಿ ಫರ್ಮನ್ ತನಗೆ ಬೆನ್ನೆಲುಬಾಗಿ ನಿಂತರು ಎಂದು ಆಕೆ ಹೇಳಿದ್ದರು. ಮೋನಾಲಿಸಾ ತಂದೆ ನೀಡಿದ ದೂರಿನ ಮೇರೆಗೆ ಮಧ್ಯಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಫರ್ಮನ್ ಖಾನ್ ಅವರ ಬಂಧನಕ್ಕೆ ಮೇ 20 ರವರೆಗೆ ತಡೆಯಾಜ್ಞೆ ನೀಡಿದೆ.
ಮೊನಲಿಸಾಗೆ ವಿಚಾರಣೆಗೆ ಹಾಜರಾಗಲು ಮಧ್ಯ ಪ್ರದೇಶ ಪೊಲೀಸರು ಸಮನ್ಸ್ ನೀಡಿದ್ದರು. ಮೊನಲಿಸಾ ಗರ್ಭಿಣಿ ಆಗಿರುವ ಕಾರಣ ಪ್ರಯಾಣ ಸಾಧ್ಯವಿಲ್ಲ ಎಂದು ಫರ್ಮಾನ್ ಹೇಳಿದ್ದಾರೆ. ಫರ್ಮಾನ್ ಖಾನ್ ನೀಡಿರುವ ‘ಗರ್ಭಿಣಿ’ ಎಂಬ ಮಾಹಿತಿಯನ್ನು ಪೊಲೀಸರು ಈಗ ವೈದ್ಯಕೀಯ ವರದಿಗಳ ಮೂಲಕ ಪರಿಶೀಲಿಸುತ್ತಿದ್ದಾರೆ. ವರದಿ ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Advertisement