ಹರಿಯಾಣ: ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ 23 ವರ್ಷದ ಪತ್ನಿ ಆತ್ಮಹತ್ಯೆ, ಪೊಲೀಸರಿಂದ ತನಿಖೆ

ವರದಿಗಳ ಪ್ರಕಾರ, ಈ ನಿರ್ಧಾರವನ್ನು ತೆಗೆದುಕೊಳ್ಳುವ ಕೇವಲ ಒಂದು ದಿನ ಮೊದಲು ಮುಸ್ಕಾನ್ ಪಂಜಾಬಿ ಹಾಡೊಂದಕ್ಕೆ 'ರೀಲ್' ಮಾಡಿ ಪೋಸ್ಟ್ ಮಾಡಿದ್ದರು.
Sheelu Balhara - Muskan
ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರಾ- ಪತ್ನಿ ಮುಸ್ಕಾನ್
Updated on

ರೋಹ್ಟಕ್: ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ, ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರಾ ಅವರ 23 ವರ್ಷದ ಪತ್ನಿ ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರೋಹ್ಟಕ್‌ನ ಮೆಹಮ್ ಪ್ರದೇಶದ ನಿವಾಸಿಯಾಗಿದ್ದ ಮುಸ್ಕಾನ್ ಅವರು 2023ರ ಡಿಸೆಂಬರ್‌ನಲ್ಲಿ ಶೀಲು ಅವರನ್ನು ವಿವಾಹವಾಗಿದ್ದರು. ದಂಪತಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಹಾರ್ದಿಕ್ ಎಂಬ ಮಗ ಜನಿಸಿದ್ದನು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ತನಿಖೆಗಾಗಿ ವಿಧಿವಿಜ್ಞಾನ ತಂಡವನ್ನು (ಫೊರೆನ್ಸಿಕ್ ತಂಡ) ಕರೆಸಿ ಪರಿಶೀಲನೆ ನಡೆಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ವರದಿಗಳ ಪ್ರಕಾರ, ಈ ನಿರ್ಧಾರವನ್ನು ತೆಗೆದುಕೊಳ್ಳುವ ಕೇವಲ ಒಂದು ದಿನ ಮೊದಲು ಮುಸ್ಕಾನ್ ಪಂಜಾಬಿ ಹಾಡೊಂದಕ್ಕೆ 'ರೀಲ್' ಮಾಡಿ ಪೋಸ್ಟ್ ಮಾಡಿದ್ದರು.

ಡೆಹ್ರಾಡೂನ್‌ನಲ್ಲಿ ಸರ್ಕಾರಿ ಶಿಕ್ಷಕಿಯೊಬ್ಬರು ತಮ್ಮ ಪತಿ ಮತ್ತು ಅತ್ತೆ-ಮಾವನ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ.

Sheelu Balhara - Muskan
ಕೋಲಾರ: ಮನೆ ಕಟ್ಟಲು ಸಾಲ; ಹಣಕೊಟ್ಟವರ ಕಿರುಕುಳ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಸೃಷ್ಟಿ ಕಂಧಾರಿ ಎಂಬುವವರು ಕಳೆದ ವರ್ಷದ ನವೆಂಬರ್‌ನಲ್ಲಿ ಸರ್ಕಾರಿ ಉದ್ಯೋಗಿಯಾಗಿರುವ ಸೌರಭ್ ರತುರಿ ಅವರನ್ನು ವಿವಾಹವಾದರು. ಅವರು ಡೆಹ್ರಾಡೂನ್ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಡೋಯಿವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ವರದಕ್ಷಿಣೆಗಾಗಿ ತಮ್ಮ ಮಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು. ಆಕೆಯ ಪತಿ ಮತ್ತು ಅತ್ತೆ-ಮಾವಂದಿರು ಆಕೆಯನ್ನು 'ದುರದೃಷ್ಟವಂತೆ' ಮತ್ತು 'ಅಶುಭ' ಎಂದು ಕರೆಯುತ್ತಿದ್ದರು ಎಂದು ಕಂಧಾರಿ ಅವರ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಕಂಧಾರಿ ನೇಣು ಹಾಕಿಕೊಳ್ಳುವ ಮುನ್ನ ಒಂದು ವಿಡಿಯೋವನ್ನು ಚಿತ್ರೀಕರಿಸಿದ್ದರು; ಅದು ಈಗ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

'ಕ್ಷಮಿಸಿ ಅಮ್ಮ, ನಾನು ಹೀಗೆ ಹೊರಟುಹೋಗುತ್ತಿದ್ದೇನೆ' ಎಂದು ಆಕೆ ಅಳುತ್ತಲೇ ಹೇಳಿದ್ದಾರೆ. 'ಎಲ್ಲವೂ ಎಷ್ಟು ವಿಚಿತ್ರವಾಗಿಬಿಟ್ಟಿದೆ. ಕಳೆದ ಆರು ತಿಂಗಳಿಂದ ನಾನು ಇದನ್ನು ಸಹಿಸುತ್ತಿದ್ದೇನೆ... ಆದರೆ ಇನ್ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ಅವರ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ. ಮದುವೆಯ ನಂತರ ನಡೆದ ಘಟನೆಗಳಿಗೆಲ್ಲ ಅವರು ನನ್ನನ್ನೇ ದೂಷಿಸುತ್ತಾರೆ. ನನ್ನನ್ನು 'ಅಶುಭ' ಎಂದು ಕರೆಯುತ್ತಾರೆ' ಎಂದು ಕಂಧಾರಿ ಆ 90 ಸೆಕೆಂಡುಗಳ ವಿಡಿಯೋದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com