Video: ಕೌಲಾಲಂಪುರ-ಕೊಚ್ಚಿ ವಿಮಾನದಲ್ಲಿ ಹೈಡ್ರಾಮಾ: ಆಗಸದಲ್ಲೇ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ! ಆತಂಕ ಸೃಷ್ಟಿ!

ಬುಧವಾರ ರಾತ್ರಿ ಬಾಟಿಕ್ ಏರ್‌ನ OD 231 ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ಕೊಚ್ಚಿಯತ್ತ ಹಾರಾಟ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲಿನ ಲಾಕ್ ತೆರೆಯಲು ಯತ್ನಿಸಿದ್ದಾನೆ.
Man tries to force open the emergency exit door
ಆಗಸದಲ್ಲೇ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ
Updated on

ಕೊಚ್ಚಿ: ಕೌಲಾಲಂಪುರದಿಂದ ಕೊಚ್ಚಿಗೆ ಬರುತ್ತಿದ್ದ ಬಾಟಿಕ್ ಏರ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ಆತಂಕಕಾರಿ ಘಟನೆ ಆತಂಕಕ್ಕೆ ಕಾರಣವಾಗಿದೆ.

ಬುಧವಾರ ರಾತ್ರಿ ಬಾಟಿಕ್ ಏರ್‌ನ OD 231 ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ಕೊಚ್ಚಿಯತ್ತ ಹಾರಾಟ ನಡೆಸುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲಿನ ಲಾಕ್ ತೆರೆಯಲು ಯತ್ನಿಸಿದ್ದಾನೆ.

ಅಲ್ಲದೆ, ಕಿಟಕಿಯ ಪ್ಯಾನೆಲ್‌ಗೂ ಹಾನಿ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ ಸಹ ಪ್ರಯಾಣಿಕರು ಹಾಗೂ ಕ್ಯಾಬಿನ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.

ಪ್ರಯಾಣಿಕನ ವರ್ತನೆಯಿಂದ ವಿಮಾನದಲ್ಲಿದ್ದವರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತ ಕ್ಯಾಬಿನ್ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಆತನನ್ನು ತಡೆಯುವಲ್ಲಿ ಯಶಸ್ವಿಯಾದರು. ಬಳಿಕ ವಿಮಾನ ಸುರಕ್ಷಿತವಾಗಿ ಗುರುವಾರ ಮುಂಜಾನೆ ಸುಮಾರು 2.40ಕ್ಕೆ ಕೊಚ್ಚಿಯ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

Man tries to force open the emergency exit door
18 ಅಡಿ ಬಾವಿಯಲ್ಲಿ ಸಮುದ್ರದ ರೀತಿ ಅಲೆ...! ಗುಜರಾತ್‌ನಲ್ಲಿ ಬೆರಗು ಮೂಡಿಸಿದ ವಿಚಿತ್ರ ವಿದ್ಯಮಾನ; ಭೂಮಿಯೊಳಗೆ ನಡೆಯುತ್ತಿರುವುದೇನು? Video

ವಿಮಾನ ಲ್ಯಾಂಡ್ ಆದ ಬಳಿಕ CISF ಸಿಬ್ಬಂದಿ ಪ್ರಯಾಣಿಕನನ್ನು ವಶಕ್ಕೆ ಪಡೆದು, ನಂತರ ಪೊಲೀಸರಿಗೆ ಹಸ್ತಾಂತರಿಸಿದರು. ವರದಿಗಳ ಪ್ರಕಾರ, ಆರೋಪಿಯನ್ನು ಪಾಲಕ್ಕಾಡ್ ಜಿಲ್ಲೆಯ ಕೂಟ್ಟನಾಡ್ ನಿವಾಸಿ 36 ವರ್ಷದ ಜಮ್ಶೀರ್ ಅಥನಿಕ್ಕಲ್ ಎಂದು ಗುರುತಿಸಲಾಗಿದೆ.

ಪ್ರಯಾಣಿಕ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯಾಕೆ ಯತ್ನಿಸಿದ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಮಾನದಲ್ಲಿನ ತುರ್ತು ನಿರ್ಗಮನ ದ್ವಾರಗಳನ್ನು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಲಾಗುತ್ತದೆ. ಹೀಗಾಗಿ ಹಾರಾಟದ ಮಧ್ಯೆ ಅದನ್ನು ತೆರೆಯಲು ಯತ್ನಿಸಿರುವ ಘಟನೆ ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ ಮೂಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com