ನಡು ರಸ್ತೆಯಲ್ಲಿ ಪತ್ನಿಗೆ ಗುಂಡು, ಮನೆಗೆ ಬಂದು ಸಹೋದರಿ ಕೊಲೆ, ಆತ್ಮಹತ್ಯೆ; ಹನುಮಾನ್ ಚಾಲೀಸಾ, ವಾಟ್ಸ್ ಆಪ್ ಸ್ಟೇಟಸ್!

ವ್ಯಕ್ತಿಯೋರ್ವ ಐಸಿಐಸಿಐ ಬ್ಯಾಂಕ್ ಹೊರಗೆ ಪತ್ನಿಗೆ ಗುಂಡು ಹಾರಿಸಿ, ಸಹೋದರಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಲಖನೌ ನಲ್ಲಿ ನಡೆದಿದೆ.
ನಡು ರಸ್ತೆಯಲ್ಲಿ ಪತ್ನಿಗೆ ಗುಂಡು, ಮನೆಗೆ ಬಂದು ಸಹೋದರಿ ಕೊಲೆ, ಆತ್ಮಹತ್ಯೆ; ಹನುಮಾನ್ ಚಾಲೀಸಾ, ವಾಟ್ಸ್ ಆಪ್ ಸ್ಟೇಟಸ್!
Updated on

ಲಖನೌ: ಲಕ್ನೋದ ಐಸಿಐಸಿಐ ಬ್ಯಾಂಕ್ ಹೊರಗೆ ಪತ್ನಿಗೆ ಗುಂಡು ಹಾರಿಸಿ, ಸಹೋದರಿಯನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಎಸ್‌ಬಿಐ ಉದ್ಯೋಗಿ

ವ್ಯಕ್ತಿಯೋರ್ವ ಐಸಿಐಸಿಐ ಬ್ಯಾಂಕ್ ಹೊರಗೆ ಪತ್ನಿಗೆ ಗುಂಡು ಹಾರಿಸಿ, ಸಹೋದರಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಲಖನೌ ನಲ್ಲಿ ನಡೆದಿದೆ.

ಪತ್ನಿಯ ಕಚೇರಿಗೆ ಹೋಗಿ ಆಕೆಗೆ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಮನೆಗೆ ಹಿಂದಿರುಗಿದ ಮಾನಸ್ ವಾಜಪೇಯಿ, ತನ್ನ ಸಹೋದರಿ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಮಾನಸ್ ವಾಜಪೇಯಿ ಗುರುವಾರ ಮಧ್ಯಾಹ್ನ ನಗರದ ಉನ್ನತ ದರ್ಜೆಯ ಗೋಮತಿ ನಗರ ಪ್ರದೇಶದ ಐಸಿಐಸಿಐ ಬ್ಯಾಂಕ್ ಶಾಖೆಯ ಹೊರಗೆ ತನ್ನ ಪತ್ನಿ ದಿವ್ಯಾ ಮಿಶ್ರಾ ಅವರನ್ನು ಗುಂಡು ಹಾರಿಸಿ ಕೊಂದಿದ್ದಾನೆ.

38 ವರ್ಷದ ಮಾನಸ್ ವಾಜಪೇಯಿ ತನ್ನ ಪತ್ನಿ ದಿವ್ಯಾ ಅವರನ್ನು ಅವರು ಕೆಲಸ ಮಾಡುತ್ತಿದ್ದ ಬ್ಯಾಂಕಿನ ಹೊರಗೆ ಕರೆ ಮಾಡಿ, ಗುಂಡು ಹಾರಿಸುವ ಮೊದಲು ಕೆಲವು ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ದಿವ್ಯಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿವ್ಯಾ ಮತ್ತು ಮಾನಸ್ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಾಹಿತಿಯ ಪ್ರಕಾರ, ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಮಾನಸ್, ದಿವ್ಯಾ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಾನಸ್, ತನ್ನ 28 ವರ್ಷದ ಸಹೋದರಿ ಶಿವ ವಾಜಪೇಯಿ ಅವರ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ವರದಿಯಾಗಿದೆ. ಪ್ರಕರಣದ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮಾನಸ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಹೆಂಡತಿ ಮತ್ತು ಸಹೋದರಿಯನ್ನು ಕೊಂದಿದ್ದೇನೆ ಎಂದು ಘೋಷಿಸುವ ವಾಟ್ಸಾಪ್ ಸ್ಟೇಟಸ್ ಹಾಕಿದ್ದ.

ನಡು ರಸ್ತೆಯಲ್ಲಿ ಪತ್ನಿಗೆ ಗುಂಡು, ಮನೆಗೆ ಬಂದು ಸಹೋದರಿ ಕೊಲೆ, ಆತ್ಮಹತ್ಯೆ; ಹನುಮಾನ್ ಚಾಲೀಸಾ, ವಾಟ್ಸ್ ಆಪ್ ಸ್ಟೇಟಸ್!
ಬೊಗಳಿದ್ದೇ ತಪ್ಪಾಯ್ತಾ..? ಮರಿ ಹಾಕಿದ ಕೆಲವೇ ಗಂಟೆಗಳಲ್ಲಿ ಕಬ್ಬಿಣದ ರಾಡ್‌ನಿಂದ ಹೊಡೆದು ನಾಯಿಯ ಹತ್ಯೆ: ಮನುಷ್ಯತ್ವ ಮರೆತ ಪಾಪಿಗಳು..!

"ಇಂದು ನಾನು ನನಗೆ ಮೋಸ ಮಾಡಿದ ನನ್ನ ಹೆಂಡತಿಯನ್ನು ಕೊಂದಿದ್ದೇನೆ. ಈಗ ನಾನು ನನ್ನನ್ನು ಮತ್ತು ನನ್ನ ಸಹೋದರಿಯನ್ನು, ಅವಳ ಸಹೋದರಿ ಪ್ರಜ್ಞಾ ಮತ್ತು ಎಲ್ಲರನ್ನೂ ಕೊಲ್ಲಬೇಕು" ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆಯಲಾಗಿತ್ತು.

ಮಾನಸ್ ವಾಜಪೇಯಿ ಅವರ ಮನೆಯ ಬಳಿಯ ಅಂಗಡಿಯೊಬ್ಬ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಧ್ಯಾಹ್ನ 12:30 ರ ಸುಮಾರಿಗೆ ತಮ್ಮ ಮನೆಗೆ ಮರಳಿದರು. "ಮಾನಸ್ ಆತುರದಲ್ಲಿದ್ದರು ಮತ್ತು ತುಂಬಾ ಬೆವರುತ್ತಿದ್ದರು. ಅವರು ಮನೆಯೊಳಗೆ ಹೋಗಿ ಹನುಮಾನ್ ಚಾಲೀಸಾ ಹಾಕಿದ್ದರು" ಎಂದು ಅವರು ಹೇಳಿದರು. ನಂತರ ನೆರೆಹೊರೆಯವರು ಅವರ ವಾಟ್ಸಾಪ್ ಸ್ಟೇಟಸ್ ನೋಡಿದಾಗ, ಅವರು ಮನೆಯೊಳಗೆ ಹೋದಾಗ ಮಾನಸ್ ಅವರ ಮನೆಯೊಳಗೆ ಮೃತಪಟ್ಟಿರುವುದು ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com