ತಮಿಳುನಾಡಲ್ಲಿ ಹುಟ್ಟುವ ಮಕ್ಕಳಿಗೆ CM ವಿಜಯ್ ಭರ್ಜರಿ ಗಿಫ್ಟ್: 1.28 ಲಕ್ಷ ಗೋಲ್ಡ್‌ ರಿಂಗ್‌ಗಳಿಗೆ ವರ್ಕ್ ಆರ್ಡರ್

'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಅಥವಾ 'ಸೋದರಮಾವ ಚಿನ್ನದ ಉಂಗುರ ಯೋಜನೆ'ಯಡಿಯಲ್ಲಿ ತಮಿಳುನಾಡು ಸರ್ಕಾರವು ಸುಮಾರು 1.28 ಲಕ್ಷ ಚಿನ್ನದ ಉಂಗುರಗಳನ್ನು ಸಿದ್ಧಪಡಿಸಲು ಆದೇಶ ಹೊರಡಿಸಿದೆ.
Tamil Nadu government issues work orders for 1.28 lakh gold rings to newborns
CM ವಿಜಯ್
Updated on: 

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟುವ ಮಕ್ಕಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ನವಜಾತ ಶಿಶುಗಳಿಗೆ ‘ಸೋದರಮಾವ ಚಿನ್ನದ ಉಂಗುರ’ ಯೋಜನೆಯಡಿ ಚಿನ್ನದ ಉಂಗುರಗಳನ್ನು ಖರೀದಿಸಲು ತಮಿಳುನಾಡು ಸರ್ಕಾರ ಇಬ್ಬರು ಆಭರಣ ವ್ಯಾಪಾರಿಗಳಿಗೆ ಕೆಲಸದ ಆದೇಶ ನೀಡಿದೆ.

'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಅಥವಾ 'ಸೋದರಮಾವ ಚಿನ್ನದ ಉಂಗುರ ಯೋಜನೆ'ಯಡಿಯಲ್ಲಿ ತಮಿಳುನಾಡು ಸರ್ಕಾರವು ಸುಮಾರು 1.28 ಲಕ್ಷ ಚಿನ್ನದ ಉಂಗುರಗಳನ್ನು ಸಿದ್ಧಪಡಿಸಲು ಆದೇಶ ಹೊರಡಿಸಿದೆ. ಈ ಉಂಗುರುಗಳ ಒಟ್ಟಪ ಬೆಲೆ ಸುಮಾರು 220 ಕೋಟಿ ರೂ. ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿ.ಎನ್‌. ಅಣ್ಣಾದೊರೈ ಅವರ ಜನ್ಮದಿನವಾದ ಸೆ.15ರಂದು ಚಾಲನೆ ನೀಡಲು ನಿರ್ಧರಿಸಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಫಲಾನುಭವಿಗಳಿಗೆ ಅಗತ್ಯವಿರುವ 1,28,499 ಚಿನ್ನದ ಉಂಗುರಗಳನ್ನು ಪೂರೈಸಲು ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮವು ಜಾಯ್‌ ಅಲುಕ್ಕಾಸ್‌ ಮತ್ತು ಕಲ್ಯಾಣ್‌ ಜ್ಯುವೆಲ್ಲರ್ಸ್‌ಗೆ 70:30 ಅನುಪಾತದಲ್ಲಿ ಕೆಲಸದ ಆದೇಶ ನೀಡಿದೆ ಎಂದು ಸರ್ಕಾರ ತಿಳಿಸಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರ ಟಿವಿಕೆ ಘೋಷಿಸಿದ್ದ ಈ ಯೋಜನೆಯು, ಮಹಿಳೆಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.

Tamil Nadu government issues work orders for 1.28 lakh gold rings to newborns
ತಮಿಳುನಾಡು ಸರ್ಕಾರಿ ನೌಕರರಿಗೆ CM ವಿಜಯ್ ಬಂಪರ್‌ ಗಿಫ್ಟ್;‌ 3ನೇ ಮಗುವಿಗೂ 1 ವರ್ಷ ಮಾತೃತ್ವ ರಜೆ; ಆರೋಗ್ಯ ವಿಮೆ 25 ಲಕ್ಷ ರೂ ಗೆ ಹೆಚ್ಚಳ!

ಒಂದು ಗ್ರಾಂ ತೂಕದ 4,41,667 ಚಿನ್ನದ ಉಂಗುರಗಳನ್ನು ಪೂರೈಸಲು ಸರ್ಕಾರ ಟೆಂಡರ್‌ ಕರೆದಿತ್ತು. ಅದರಂತೆ ಜುಲೈ 14ರಂದು ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮದ ಟೆಂಡರ್‌ನಲ್ಲಿ 11 ಕಂಪನಿಗಳು ಭಾಗವಹಿಸಿ, ತಮ್ಮ ಬೆಲೆ ವಿವರಗಳನ್ನು ಟಿಎನ್‌ ಟೆಂಡರ್ಸ್‌ ಪೋರ್ಟಲ್‌ ಮೂಲಕ ಸಲ್ಲಿಸಿದ್ದವು ಎಂದು ಪ್ರಕಟಣೆ ತಿಳಿಸಿದೆ.

ಇದರಲ್ಲಿ ಜಾಯ್‌ ಅಲುಕ್ಕಾಸ್‌, ಒಂದು ಗ್ರಾಂ ಚಿನ್ನದ ಬೆಲೆಯನ್ನು ಹೊರತುಪಡಿಸಿ, ಸಂಸ್ಕರಣಾ ಶುಲ್ಕ, ವಿಮೆ, ಸಾರಿಗೆ ಹಾಗೂ ಬಿಐಎಸ್‌ ಸ್ಟ್ಯಾಂಪಿಂಗ್‌ ಸೇರಿದಂತೆ ಎಲ್ಲ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಂತೆ ಬರೀ 1 ಪೈಸೆ ಬಿಡ್‌ ಸಲ್ಲಿಸಿತ್ತು. ತಮಿಳುನಾಡು ಬಹಿರಂಗಪಡಿಸದಿರುವಿಕೆ ಒಪ್ಪಂದ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಕೂಡ ಕಡಿಮೆ ಬಿಡ್‌ ಸಲ್ಲಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನಿದು ಯೋಜನೆ?

ಟಿವಿಕೆ ಪಕ್ಷ ನೀಡಿದ ಆಶ್ವಾಸನೆಯಂತೆ, ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ (TNMSC) ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ 1 ಗ್ರಾಂ ತೂಕದ, 22 ಕ್ಯಾರಟ್‌ನ ಚಿನ್ನದ ಉಂಗುರವನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರತಿ ಉಂಗುರದ ಮೇಲೆ ತಮಿಳುನಾಡು ಸರ್ಕಾರದ ಅಧಿಕೃತ ಲಾಂಛನ ಮತ್ತು ಮುಖ್ಯಮಂತ್ರಿಗಳ ಚಿತ್ರವನ್ನು ಕಡ್ಡಾಯವಾಗಿ ಕೆತ್ತಿರಬೇಕು. ಒಟ್ಟು 4,41,667 ಉಂಗುರಗಳ ಪೂರೈಕೆಗಾಗಿ ಈ ಟೆಂಡರ್ ಕರೆಯಲಾಗಿತ್ತು. ಮೊದಲ ಹಂತದಲ್ಲಿ 4 ತಿಂಗಳ ಅವಧಿಗೆ ಅಗತ್ಯವಿರುವ 1,28,499 ಉಂಗುರಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com