ಅಮೆರಿಕದಲ್ಲಿ ಮಗಳ ಮುಂದೆಯೇ ಗುಜರಾತ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಹೊಸ ವ್ಯವಹಾರ ಆರಂಭಿಸಿದ ವಾರದಲ್ಲೇ ಭೀಕರ ಕೃತ್ಯ!

ಮೃತರನ್ನು ಸುರೇಶ್ ಪರ್ಸೋತ್ತಮದಾಸ್ ಪಟೇಲ್ ಎಂದು ಗುರುತಿಸಲಾಗಿದ್ದು, ಅವರು ಸುಮಾರು 30 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು.
Gujarati businessman gunned down in front of daughter in US
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ಅಮೆರಿಕದ ಟೆನ್ನೆಸ್ಸೀಯಲ್ಲಿರುವ ಜಾಕ್ಸನ್‌ನಲ್ಲಿರುವ ತಮ್ಮ ಅಂಗಡಿಯೊಳಗೆ ಗುಜರಾತ್ ಮೂಲದ 62 ವರ್ಷದ ಉದ್ಯಮಿಯೊಬ್ಬರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ದಾಳಿಯ ಸಮಯದಲ್ಲಿ ಅವರ 19 ವರ್ಷದ ಮಗಳು ಅಲ್ಲೇ ಇದ್ದರು ಎಂದು ಮೆಹ್ಸಾನಾ ಜಿಲ್ಲೆಯ ಆಖಾಜ್ ಗ್ರಾಮದ ಗ್ರಾಮದ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಸುರೇಶ್ ಪರ್ಸೋತ್ತಮದಾಸ್ ಪಟೇಲ್ ಎಂದು ಗುರುತಿಸಲಾಗಿದ್ದು, ಅವರು ಸುಮಾರು 30 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು ಮತ್ತು ಘಟನೆಗೆ ಕೇವಲ ಒಂದು ವಾರದ ಮೊದಲು ಜಾಕ್ಸನ್ ನಗರದಲ್ಲಿ ಹೊಸ ವ್ಯವಹಾರವನ್ನು ಆರಂಭಿಸಿದ್ದರು.

ಗುರುವಾರ ಮುಸುಕುಧಾರಿ ದುಷ್ಕರ್ಮಿಯೊಬ್ಬರು, ಅವರ ಅಂಗಡಿಯೊಳಗೆ ನುಗ್ಗಿ, ಡ್ರಾಯರ್‌ನಿಂದ ಹಣವನ್ನು ದೋಚಿದ್ದಾರೆ ಮತ್ತು ನಂತರ ಪಟೇಲ್ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

Gujarati businessman gunned down in front of daughter in US
ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ; ವರ್ಷಕ್ಕೆ 60 ಲಕ್ಷ ಪ್ಯಾಕೇಜ್‌ ಹೊಂದಿದ್ದ ಟೆಕ್ಕಿಗೆ ಹೊಡೆದು ಕೊಂದ ಪತ್ನಿ ಕುಟುಂಬಸ್ಥರು!

ಘಟನೆಯ ಕುರಿತು ಮಾತನಾಡಿದ ಆಖಾಜ್ ಗ್ರಾಮದ ನಿವಾಸಿ ದಿನೇಶ್ ಸುತಾರ್ ಅವರು, "ದುರಂತದ ಸುದ್ದಿ ತಿಳಿದ ನಂತರ ಮೆಹ್ಸಾನಾ ಜಿಲ್ಲೆಯ ಆಖಾಜ್ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com