ಉತ್ತರಪ್ರದೇಶ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 8 ಮಕ್ಕಳು ಸೇರಿದಂತೆ 11 ಮಂದಿ ಸುಟ್ಟು ಕರಕಲು!

ಉತ್ತರ ಪ್ರದೇಶದ ಪ್ರಯಾಗ್‌ರಾಜ್-ಕೌಶಂಬಿ ಗಡಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಕಾರ್ಖಾನೆಯ ಬಳಿಯ ಮನೆಗಳಲ್ಲಿ ವಾಸಿಸುತ್ತಿದ್ದ 8 ಮಕ್ಕಳು ಸೇರಿದಂತೆ ಹನ್ನೊಂದು ಜನರು ಸಾವನ್ನಪ್ಪಿದ್ದು ಐದು ಮಂದಿ ಗಾಯಗೊಂಡಿದ್ದಾರೆ.
firecracker factory blast
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ
Updated on

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್-ಕೌಶಂಬಿ ಗಡಿಯಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಕಾರ್ಖಾನೆಯ ಬಳಿಯ ಮನೆಗಳಲ್ಲಿ ವಾಸಿಸುತ್ತಿದ್ದ 8 ಮಕ್ಕಳು ಸೇರಿದಂತೆ ಹನ್ನೊಂದು ಜನರು ಸಾವನ್ನಪ್ಪಿದ್ದು ಐದು ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಸ್ಫೋಟವು ಎಷ್ಟು ತೀವ್ರವಾಗಿತ್ತೆಂದರೇ ಇಡೀ ಕಾರ್ಖಾನೆ ನೆಲಸಮವಾಗಿದೆ. 100 ಮೀಟರ್ ವ್ಯಾಪ್ತಿಯೊಳಗಿನ ಎಂಟು ಮನೆಗಳು ಹಾನಿಗೊಳಗಾಗಿವೆ.

ಸ್ಫೋಟದ ಪರಿಣಾಮವಾಗಿ ಸುಮಾರು 500 ಮೀಟರ್ ದೂರದಲ್ಲಿರುವ ಪ್ರಯಾಗ್‌ರಾಜ್-ಕಾನ್ಪುರ್ ರೈಲ್ವೆ ಮಾರ್ಗದಲ್ಲಿ OHE (ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್) ಮಾರ್ಗವು ಅಸ್ತವ್ಯಸ್ತಗೊಂಡಿದೆ. ಇದು ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ರೈಲು ಕಾರ್ಯಾಚರಣೆಯನ್ನು ಅಡ್ಡಿಪಡಿಸಿತು. ಎಂಜಿನಿಯರ್‌ಗಳು ಮಾರ್ಗವನ್ನು ದುರಸ್ತಿ ಮಾಡಿ ಪುನಃಸ್ಥಾಪಿಸಿದರು. ಸ್ಫೋಟದ ಶಬ್ದವು 2 ಕಿಲೋಮೀಟರ್ ದೂರದವರೆಗೆ ಕೇಳಿಬಂತು. ಸ್ವಲ್ಪ ಸಮಯದೊಳಗೆ ದಡ್ಡ ಹೊಗೆ ಪ್ರದೇಶವನ್ನು ಆವರಿಸಿತು. ಗ್ರಾಮಸ್ಥರು ಸುಟ್ಟ ಗಾಯಾಳುಗಳನ್ನು ಹಾಸಿಗೆಗಳ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

firecracker factory blast
'ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ!

ಕೌಶಾಂಬಿ ಜಿಲ್ಲೆಯ ಮೊಹಮ್ಮದ್‌ಪುರ ಗ್ರಾಮದಲ್ಲಿ ಬೆಳಿಗ್ಗೆ 11:30 ಕ್ಕೆ ಅಪಘಾತ ಸಂಭವಿಸಿದೆ. ಈ ಗ್ರಾಮ ಪ್ರಯಾಗ್‌ರಾಜ್ ಗಡಿಯಲ್ಲಿದೆ. ಮನುರಿಯಲ್ಲಿರುವ ವಾಯುಪಡೆಯ ನಿಲ್ದಾಣವು ಇಲ್ಲಿಂದ 2 ಕಿ.ಮೀ ದೂರದಲ್ಲಿದೆ. ಪೊಲೀಸ್, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ 200 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. 10 ಬುಲ್ಡೋಜರ್‌ಗಳು ಅವಶೇಷಗಳನ್ನು ತೆಗೆದುಹಾಕಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com