ಮುಂಬೈ ಮೇಯರ್‌ ಆಗಿ ರೀತು ತಾವ್ಡೆ ಅವಿರೋಧ ಆಯ್ಕೆ: 4 ದಶಕಗಳ ನಂತರ ಬಿಜೆಪಿಗೆ ಒಲಿದ ಪಟ್ಟ!

ಘಾಟ್ಕೋಪರ್ ಪಶ್ಚಿಮದಿಂದ ಮೂರು ಬಾರಿ ಕಾರ್ಪೊರೇಟರ್ ಆಗಿರುವ 53 ವರ್ಷದ ರೀತು ತಾವ್ಡೆ, ತಳಮಟ್ಟದ ರಾಜಕಾರಣ ಮತ್ತು ನಾಗರಿಕ ಆಡಳಿತ ಕ್ಷೇತ್ರದಲ್ಲಿ ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.
Ritu Tawde; Sanjay Ghad
ರೀತು ತಾವ್ಡೆ; ಸಂಜಯ್ ಘಾಡಿ
Updated on

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಮುಂಬೈ ಮೇಯರ್‌ ಪಟ್ಟ ಬಿಜೆಪಿಗೆ ಒಲಿದಿದೆ.

ಮುಂಬೈ ಮೇಯರ್‌ ಚುನಾವಣೆಗೆ ಶಿವಸೇನೆ ಯುಬಿಟಿ ಬಣ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾದರು. ದೇಶದ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲೆ ಠಾಕ್ರೆ ಕುಟುಂಬದ 25 ವರ್ಷಗಳ ನಿರಂತರ ಪ್ರಾಬಲ್ಯ ಕೊನೆಗೊಂಡಿರುವುದು ದೇಶದ ಗಮನ ಸೆಳೆದಿದೆ.

ಘಾಟ್ಕೋಪರ್ ಪಶ್ಚಿಮದಿಂದ ಮೂರು ಬಾರಿ ಕಾರ್ಪೊರೇಟರ್ ಆಗಿರುವ 53 ವರ್ಷದ ರೀತು ತಾವ್ಡೆ, ತಳಮಟ್ಟದ ರಾಜಕಾರಣ ಮತ್ತು ನಾಗರಿಕ ಆಡಳಿತ ಕ್ಷೇತ್ರದಲ್ಲಿ ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ರೀತು ತಾವ್ಡೆ ತಮ್ಮ ಪ್ರಾಯೋಗಿಕ ವಿಧಾನ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಗೆ ಹೆಸರುವಾಸಿಯಾಗಿದ್ದು, ಆಡಳಿತಾತ್ಮಕ ಸಾಮರ್ಥ್ಯವನ್ನು ಆಳವಾದ ಸ್ಥಳೀಯ ಸಂಪರ್ಕದೊಂದಿಗೆ ಸಂಯೋಜಿಸುವ ನಾಯಕಿಯಾಗಿ ಖ್ಯಾತಿ ಗಳಿಸಿದ್ದಾರೆ.

Ritu Tawde; Sanjay Ghad
ಪುಣೆ ಮೇಯರ್ ಆಗಿ ಬಿಜೆಪಿಯ ಮಂಜುಷಾ ನಾಗ್ಪುರ್ ಅವಿರೋಧವಾಗಿ ಆಯ್ಕೆ

ಶಿವಸೇನೆ ನಾಯಕ ಸಂಜಯ್ ಘಾಡಿ ಉಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 227 ಸದಸ್ಯ ಬಲದ ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳ ಅವಶ್ಯಕತೆ ಇತ್ತು. ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಗೆದ್ದಿದೆ, ಮಹಾಯುತಿ ಮೈತ್ರಿಕೂಟ 118 ವಾರ್ಡ್​ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com