AI ಇಂಪ್ಯಾಕ್ಟ್ ಶೃಂಗಸಭೆ ಟಾರ್ಗೆಟ್: ವಿದೇಶಿಗರಿಂದ ದಾಳಿ ಸಾಧ್ಯತೆ, ಗುಪ್ತಚರ ವರದಿ ಬೆನ್ನಲ್ಲೇ G20 ಗ್ರೇಡ್ ಸೈಬರ್ ಭದ್ರತಾ ವ್ಯವಸ್ಥೆ!

ಫೆಬ್ರವರಿ 20 ರಂದು ಶೃಂಗಸಭೆಯ ಮುಕ್ತಾಯವಾಗುವವರೆಗೂ ಇದು ಜಾರಿಯಲ್ಲಿರುತ್ತದೆ ಎಂದು ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಹಿರಿಯ ಸೈಬರ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
India AI Impact Summit 2026
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ
Updated on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026 ವಿದೇಶಿ ದಾಳಿಕೋರರ ಟಾರ್ಗೆಟ್ ಆಗಿದೆ. ಸೈಬರ್ ಬೆದರಿಕೆ ಬಗ್ಗೆ ಗುಪ್ತಚರ ವರದಿ ಬೆನ್ನಲ್ಲೇ ಏಜೆನ್ಸಿಗಳಿಗೆ ಉನ್ನತ ಮಟ್ಟದ ಭದ್ರತೆಯ ಆಲರ್ಟ್ ನೀಡಲಾಗಿದ್ದು, G20-ಗ್ರೇಡ್ ನ ಬಹು-ಹಂತದ ಸೈಬರ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಫೆಬ್ರವರಿ 20 ರಂದು ಶೃಂಗಸಭೆಯ ಮುಕ್ತಾಯವಾಗುವವರೆಗೂ ಇದು ಜಾರಿಯಲ್ಲಿರುತ್ತದೆ ಎಂದು ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಹಿರಿಯ ಸೈಬರ್ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ಕಟ್ಟಡಗಳು ಮತ್ತು ಶೃಂಗಸಭೆ-ಸಂಬಂಧಿತ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಡಿಜಿಟಲ್ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಶೃಂಗಸಭೆಯಲ್ಲಿ ಭಾಗವಹಿಸುವ ಜಾಗತಿಕ ಮಟ್ಟದ ನಾಯಕರ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲು ತಂತ್ರಜ್ಞಾನ ಮತ್ತು ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆಯನ್ನುಂಟು ಮಾಡುವ ಆತಂಕವಿದೆ.

India AI Impact Summit 2026
AI ಬಳಕೆಯಲ್ಲಿ ಮುಂಚೂಣಿಯಲ್ಲಿ ಭಾರತ: ಜಗತ್ತಿಗೆ ಪರಿಹಾರ ರೂಪಿಸುತ್ತೇವೆ- ಪ್ರಧಾನಿ ಮೋದಿ

ಇಂತಹ ತಪ್ಪು ಮಾಹಿತಿಯು ರಾಜತಾಂತ್ರಿಕ ಸಂಪರ್ಕಗಳು ಮತ್ತು ಸಾರ್ವಜನಿಕ ಭಾಷಣಗಳಿಗೆ ಅಡ್ಡಿಪಡಿಸಬಹುದು ಎಂದು ಅಧಿಕಾರಿಗಳು ಹೇಳಿದರು.

ಶೃಂಗಸಭೆಗೆ ಸಂಬಂಧಿಸಿದ ಇಂತಹ ಸೈಬರ್ ದಾಳಿಗಳನ್ನು ಪತ್ತೆ ಹಚ್ಚಲು ಅಥವಾ ನಾಶಪಡಿಸಲು ಸೈಬರ್ ಮೇಲ್ವಿಚಾರಣಾ ತಂಡಗಳು 24 ಗಂಟೆಗಳ ಕಾಲ ಆನ್ ಲೈನ್ ವೇದಿಕೆಗಳ ಮೇಲೆ ನಿಗಾವಣೆ ವಹಿಸಿವೆ. ಸರ್ಕಾರಿ ವೆಬ್‌ಸೈಟ್‌ಗಳು ಕೂಡಾ ಸೈಬರ್ ದಾಳಿಗೆ ಟಾರ್ಗೆಟ್ ಆಗಿವೆ ಎಂದು ಭದ್ರತಾ ಏಜೆನ್ಸಿಗಳು ಎಚ್ಚರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಟಲ್ ಸಾರ್ವಜನಿಕ ವೇದಿಕೆಗಳನ್ನು ಮುಳುಗಿಸಲು ಮತ್ತು ಅಗತ್ಯ ಸೇವೆಗಳನ್ನು ಅಡ್ಡಿಪಡಿಸಲು ಉದ್ದೇಶಿಸಿರುವ ವಿತರಣೆ ನಿರಾಕರಣೆ-ಸೇವೆ (DDoS) ದಾಳಿಗಳ ಜೊತೆಗೆ ನಿರ್ಣಾಯಕ ಮೂಲಸೌಕರ್ಯಗಳ ವಿರುದ್ಧ ransomware ದಾಳಿಗಳನ್ನು ಸೈಬರ್ ಕ್ರಿಮಿನಲ್ ಗುಂಪುಗಳು ಸಿದ್ಧಪಡಿಸುತ್ತಿವೆ ಎಂದು ಗುಪ್ತಚರ ವರದಿಗಳಲ್ಲಿ ಹೇಳಲಾಗಿದೆ. G20 ಶೃಂಗಸಭೆಯನ್ನು ಆಯೋಜಿಸಿದ್ದ ವೇಳೆಯಲ್ಲಿ 1.6 ಮಿಲಿಯನ್ ಸೈಬರ್ ದಾಳಿಯ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com