

ಕೋಝಿಕೋಡ್: ಕಳೆದ ವರ್ಷ ಕೇರಳದಲ್ಲಿ ಭಾರಿ ಆತಂಕ ಮೂಡಿಸಿ ಬ್ರೇಕ್ ನೀಡಿದ್ದ ಮೆದುಳು ಜ್ವರ ಇದೀಗ ಮತ್ತೆ ವರ್ಷಾರಂಭದಲ್ಲೇ ಆರ್ಭಟಿಸಲು ಮುಂದಾಗಿದ್ದು, ಮೆದುಳು ಜ್ವರಕ್ಕೆ ಕೇರಳದಲ್ಲಿ ಹೊಸ ವರ್ಷ ಮೊದಲ ಬಲಿಯಾಗಿದೆ.
ಹೌದು... ಸ್ವಲ್ಪ ಸಮಯದ ವಿರಾಮದ ನಂತರ, ಕೇರಳದಲ್ಲಿ ಮತ್ತೆ ಮೆದುಳು ಜ್ವರ ಆರ್ಭಟಿಸಲು ಮುಂದಾಗಿದ್ದು, ಸೋಮವಾರ ಕೇರಳದಲ್ಲಿ ಮೆದುಳು ಜ್ವರದಿಂದ ಹೊಸ ಸಾವು ವರದಿಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಕೋಝಿಕ್ಕೋಡ್ ಜಿಲ್ಲೆಯ ಪುತಿಯಂಗಡಿಯ ಸಚ್ಚಿದಾನಂದನ್ (72) ಎಂದು ಗುರುತಿಸಲಾಗಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಚ್ಚಿದಾನಂದನ್ ಅವರನ್ನು ಕಳೆದ ವಾರ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಅಥವಾ ಸಾಮಾನ್ಯವಾಗಿ ಮೆದುಳು ಜ್ವರ ಎಂದು ಕರೆಯಲ್ಪಡುವ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರದ ಪರೀಕ್ಷೆಗಳಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವರ ಸ್ಥಿತಿ ಹದಗೆಟ್ಟಿತು ಮತ್ತು ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಮೃತರಿಗೆ ಸೋಂಕು ಹೇಗೆ ತಗುಲಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement