'ಶ್ರೇಷ್ಠ ದೇಶಗಳು ಮೌನದಿಂದ ನಿರ್ಮಾಣವಾಗುವುದಿಲ್ಲ': ಕೊಚ್ಚಿಯಲ್ಲಿ ರಾಹುಲ್ ಗಾಂಧಿ

'ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು' ಎಂದು ಕಾಂಗ್ರೆಸ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
"Great nations are not built in silence": Rahul Gandhi in Kochi
ರಾಹುಲ್ ಗಾಂಧಿ
Updated on

ಕೊಚ್ಚಿ: ಸಾರ್ವಜನಿಕರು ಮೌನವಾಗಿರಬಾರದು ಎಂದು ಒತ್ತಾಯಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಮೌನ ಸಂಸ್ಕೃತಿಯಲ್ಲಿ' 'ದುರಾಸೆಯ ಕಲ್ಪನೆ' ಅಡಗಿದೆ ಎಂದು ಸೋಮವಾರ ಹೇಳಿದರು.

ರಾಹುಲ್ ಗಾಂಧಿಯವರು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಕೊಡಲಾಗುವ ಪ್ರಿಯದರ್ಶಿನಿ ಸಾಹಿತ್ಯ ಪ್ರಶಸ್ತಿಯನ್ನು ಕಲಾಮಸ್ಸೇರಿಯಲ್ಲಿ ಎಂ ಲೀಲಾವತಿ ಅವರಿಗೆ ಪ್ರದಾನ ಮಾಡಿದರು.

ಕೊಚ್ಚಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, 'ದೇಶದಾದ್ಯಂತ, ಏನನ್ನಾದರೂ ನಂಬುವ ಆದರೆ, ಅದನ್ನು ಹೇಳಲು ಧೈರ್ಯವಿಲ್ಲದ ಜನರನ್ನು ನಾವು ನೋಡುತ್ತೇವೆ. ಆದರೆ, ದೊಡ್ಡ ರಾಷ್ಟ್ರಗಳು ಮೌನದ ಮೂಲಕ ನಿರ್ಮಾಣವಾಗುವುದಿಲ್ಲ. ದೊಡ್ಡ ರಾಷ್ಟ್ರಗಳು, ದೊಡ್ಡ ಮಟ್ಟದಲ್ಲಿ ಜನರು ತಮ್ಮ ದೃಷ್ಟಿಕೋನ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಮತ್ತು ಅವುಗಳಿಗಾಗಿ ಹೋರಾಡಿದಾಗ ನಿರ್ಮಾಣವಾಗುತ್ತವೆ' ಎಂದರು.

'ಮೌನದ ಸಂಸ್ಕೃತಿಯಲ್ಲಿ ದುರಾಸೆ ಎಂಬ ಕಲ್ಪನೆಯೂ ಹುದುಗಿದೆ: ನನಗೆ ಬೇಕಾದುದನ್ನು ನಾನು ಪಡೆಯುವವರೆಗೆ ಏನು ನಡೆಯುತ್ತಿದೆ ಎಂಬುದು ಮುಖ್ಯವಲ್ಲ. ನಾನು ಏನನ್ನೂ ಹೇಳಬೇಕಾಗಿಲ್ಲ. ಜನರು ಅವಮಾನಿಸಲ್ಪಡುವುದನ್ನು, ಜನರನ್ನು ಕೊಲ್ಲಲ್ಪಡುವುದನ್ನು, ಜನರನ್ನು ಕೊಲ್ಲಲ್ಪಡುವುದನ್ನು ನಾನು ನೋಡಬಹುದು. ನಾನು ಚೆನ್ನಾಗಿರುವವರೆಗೆ, ಎಲ್ಲವೂ ಚೆನ್ನಾಗಿರುತ್ತದೆ. ಅದುವೇ ದುರಾಸೆಯ ಸಂಸ್ಕೃತಿ' ಎಂದರು.

"Great nations are not built in silence": Rahul Gandhi in Kochi
'ವೋಟ್ ಚೋರಿ ದೇಶ ವಿರೋಧಿ ಕೃತ್ಯ': ಅಳಿಸಬಹುದಾದ ಶಾಯಿ ವಿವಾದದ ಬಗ್ಗೆ ರಾಹುಲ್ ಗಾಂಧಿ

ಕೊಚ್ಚಿಯ ಮರೀನ್ ಡ್ರೈವ್‌ನಲ್ಲಿ ಪಕ್ಷದ ಚುನಾಯಿತ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು ಭೇಟಿ ಮಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ, ಅವರೊಂದಿಗೆ ಸಭೆ ನಡೆಸಿದರು.

'ಕೇರಳದ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು' ಎಂದು ಕಾಂಗ್ರೆಸ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ಇತರ ಪಕ್ಷದ ನಾಯಕರು ಮಹಾಪಂಚಾಯತ್‌ನಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್ ನಾಯಕ ಶಫಿ ಪರಂಬಿಲ್ ಅವರ ಪ್ರಕಾರ, ಮಹಾಪಂಚಾಯತ್ 'ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಕ್ರಿಯೆಯ ಅನಧಿಕೃತ ಆರಂಭವಾಗಿದೆ'.

ಕೇರಳದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಇದರಲ್ಲಿ ಯುಡಿಎಫ್ ಮೈತ್ರಿಕೂಟವನ್ನು ಮುನ್ನಡೆಸುವ ಕಾಂಗ್ರೆಸ್, ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಲಿದೆ.

ಈಮಧ್ಯೆ, ಜನವರಿ 20 ರಂದು ರಾಹುಲ್ ಗಾಂಧಿ ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್‌ಬರೇಲಿಗೆ ಭೇಟಿ ನೀಡಲಿದ್ದು, ವಿಬಿ-ಜಿ ರಾಮ್ ಜಿ ಕಾಯ್ದೆ, 2025ರ ವಿರುದ್ಧ ಕಾಂಗ್ರೆಸ್‌ನ 'ಎಂಜಿಎನ್‌ಆರ್‌ಇಜಿಎ ಬಚಾವೋ' ಉಪಕ್ರಮದ ಅಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com