'ಪ್ರಧಾನಿ ಬಳಿಕ ಅತ್ಯಂತ ಕಠಿಣ ಕೆಲಸವಿದು': ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಬಗ್ಗೆ ಶಶಿ ತರೂರ್ ಶ್ಲಾಘನೆ!

ಗೌತಮ್ ಗಂಭೀರ್ ಅವರು ಟೀಂ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಶಶಿ ತರೂರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
Shashi Tharoor and Gautam Gambhir
ಶಶಿ ತರೂರ್ ಮತ್ತು ಗೌತಮ್ ಗಂಭೀರ್
Updated on

ಕಾಂಗ್ರೆಸ್ ಸಂಸದ ಶಶಿ ತರೂರ್ ಬುಧವಾರ 'ಪ್ರಧಾನಿ ನಂತರ ಅತ್ಯಂತ ಕಠಿಣ ಕೆಲಸವನ್ನು ಹೊಂದಿರುವ ವ್ಯಕ್ತಿ' ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಶ್ಲಾಘಿಸಿದ್ದಾರೆ. ಅನೇಕರು ಇದು ಕೃತಜ್ಞತೆಯಿಲ್ಲದ ಕೆಲಸ ಎಂದು ಪರಿಗಣಿಸಿರುವ ಈ ಹೊತ್ತಿನಲ್ಲಿ ತಮ್ಮ ಶ್ಲಾಘನೆಯ ಮಾತುಗಳಿಗಾಗಿ ಧನ್ಯವಾದಗಳು ಎಂದು ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಬುಧವಾರ ನಾಗ್ಪುರದ ನ್ಯೂ ವಿಸಿಎ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟಿ20ಐಗೆ ಮುನ್ನ ಭಾರತದ ಮಾಜಿ ಬ್ಯಾಟರ್ ಅನ್ನು ಭೇಟಿಯಾದ ನಂತರ ತರೂರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಅವರ ಭೇಟಿಯ ಫೋಟೊ ಹಂಚಿಕೊಂಡ ತರೂರ್, 'ನಾಗ್ಪುರದಲ್ಲಿ, ನನ್ನ ಹಳೆಯ ಸ್ನೇಹಿತ ಗೌತಮ್ ಗಂಭೀರ್ ಅವರೊಂದಿಗೆ ನಾನು ಉತ್ತಮ ಮತ್ತು ಸ್ಪಷ್ಟವಾದ ಚರ್ಚೆಯನ್ನು ಆನಂದಿಸಿದೆ. ಪ್ರಧಾನ ಮಂತ್ರಿಯ ನಂತರ ಭಾರತದಲ್ಲಿರುವ ಅತ್ಯಂತ ಕಷ್ಟಕರವಾದ ಕೆಲಸವನ್ನು ಹೊಂದಿರುವ ವ್ಯಕ್ತಿ!' ತರೂರ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗೌತಮ್ ಗಂಭೀರ್ ಅವರು ಟೀಂ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಶಶಿ ತರೂರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

'ಪ್ರತಿದಿನ ಲಕ್ಷಾಂತರ ಜನರು ಗಂಭೀರ್ ಅವರ ನಿರ್ಧಾರಗಳನ್ನು ನಿರಂತರವಾಗಿ ಟೀಕಿಸುತ್ತಲೇ ಮತ್ತು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ, ಅವರು ಶಾಂತವಾಗಿ, ಆತ್ಮವಿಶ್ವಾಸದಿಂದ ಮತ್ತು ಒತ್ತಡದಿಂದ ಎದೆಗುಂದದೆ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಅವರ ಶಾಂತ ನಿರ್ಧಾರ ಮತ್ತು ಸಮರ್ಥ ನಾಯಕತ್ವಕ್ಕೆ ಮೆಚ್ಚುಗೆಯ ಮಾತು ಇರಲಿ. ಅವರಿಗೆ ಎಲ್ಲ ರೀತಿಯ ಯಶಸ್ಸನ್ನು ಬಯಸುತ್ತೇನೆ- ಇಂದಿನಿಂದ ಪ್ರಾರಂಭವಾಗಲಿ!' ಎಂದು ಹೇಳಿದ್ದಾರೆ.

Shashi Tharoor and Gautam Gambhir
'9 ರಲ್ಲಿ 5 ಏಕದಿನ ಪಂದ್ಯಗಳಲ್ಲಿ ಸೋಲು': ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಜಿಂಕ್ಯ ರಹಾನೆ ಕಿಡಿ

ಇದಕ್ಕೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, 'ತುಂಬಾ ಧನ್ಯವಾದಗಳು ಡಾ. ಶಶಿ ತರೂರ್! ವಿಷಯಗಳು ಶಾಂತವಾದ ನಂತರ, ತರಬೇತುದಾರನ 'ಅನಿಯಮಿತ ಅಧಿಕಾರ' ಹೊಂದಿರುವ ಕಲ್ಪನೆಯ ಬಗ್ಗೆ ಸತ್ಯ ಮತ್ತು ತರ್ಕವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಸದ್ಯಕ್ಕೆ, ನಾನು ನನ್ನ ಸ್ವಂತ ಜನರೊಂದಿಗೆ ಘರ್ಷಣೆಯಲ್ಲಿ ತೊಡಗಿರುವಂತೆ ಚಿತ್ರಿಸುತ್ತಿರುವುದು ತಮಾಷೆಯ ಸಂಗತಿಯಾಗಿದೆ. ಅದಕ್ಕಾಗಿ ನಾನು ಖುಷಿ ಪಡುತ್ತೇನೆ!' ಎಂದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ T20I ಸರಣಿಯು ಮುಂಬರುವ T20 ವಿಶ್ವಕಪ್ 2026ಕ್ಕೆ ಮುಂಚಿತವಾಗಿ ಟೀಂ ಇಂಡಿಯಾದ ತಯಾರಿಗೆ ನಿರ್ಣಾಯಕವಾಗಿದೆ. ವಿಶ್ವಕಪ್ ಪಂದ್ಯಾವಳಿಯು ಫೆಬ್ರುವರಿ 7 ರಂದು ಪ್ರಾರಂಭವಾಗಲಿದೆ. ಭಾರತವು ಬುಧವಾರ 48 ರನ್ ಗಳ ಜಯದೊಂದಿಗೆ ಸರಣಿಯನ್ನು ಪ್ರಾರಂಭಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com