ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ತಗ್ಗಿರುವುದು ಹಾಗೂ ಕಚ್ಚಾ ತೈಲ ಪೂರೈಕೆ ಕುರಿತ ಆತಂಕ ಕಡಿಮೆಯಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಇಳಿಕೆಯಾಗಿದ್ದು, ಅದರ ಪರಿಣಾಮವಾಗಿ ATF ದರವನ್ನೂ ಇಳಿಕೆ ಮಾಡಲಾಗಿದೆ.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ಏರಿಕೆಯಾಗಿದ್ದ ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ, ವಿಮಾನ ಟರ್ಬೈನ್ ಇಂಧನ (Aviation Turbine Fuel - ATF) ದರವನ್ನು ಬುಧವಾರ ಪ್ರತಿ ಲೀಟರ್‌ಗೆ ರೂ.5ರಷ್ಟು ಇಳಿಕೆ ಮಾಡಲಾಗಿದೆ.

ಕಳೆದ ಕೆಲ ವಾರಗಳಿಂದ ಹೆಚ್ಚಿದ ಇಂಧನ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಸಂಸ್ಥೆಗಳಿಗೆ ಇದು ಬಿಗ್ ರಿಲೀಫ್ ನೀಡಿದೆ.

ಹೊಸ ದರದಂತೆ, ದೆಹಲಿಯಲ್ಲಿ ವಿಮಾನ ಇಂಧನದ ಬೆಲೆ ಪ್ರತಿ ಲೀಟರ್‌ಗೆ ರೂ.110 ಆಗಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ತಗ್ಗಿರುವುದು ಹಾಗೂ ಕಚ್ಚಾ ತೈಲ ಪೂರೈಕೆ ಕುರಿತ ಆತಂಕ ಕಡಿಮೆಯಾಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಇಳಿಕೆಯಾಗಿದ್ದು, ಅದರ ಪರಿಣಾಮವಾಗಿ ATF ದರವನ್ನೂ ಇಳಿಸಲಾಗಿದೆ.

File photo
ATF ದರ ಏರಿಕೆ ಎಫೆಕ್ಟ್; ದೇಶೀಯ ವಿಮಾನ ಸೇವೆ ಕಡಿತಕ್ಕೆ Air India, IndiGo ನಿರ್ಧಾರ..!

ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ನಂತರ ವಿಮಾನ ಇಂಧನದ ದರ ನಿರಂತರವಾಗಿ ಏರಿಕೆಯಾಗಿತ್ತು. ಇದರ ಪರಿಣಾಮ ವಿಮಾನ ಸಂಸ್ಥೆಗಳ ಕಾರ್ಯಾಚರಣಾ ವೆಚ್ಚ ಗಣನೀಯವಾಗಿ ಹೆಚ್ಚಳವಾಗಿತ್ತು. ಇದೀಗ ಮೊದಲ ಬಾರಿಗೆ ATF ದರ ಇಳಿಕೆಯಾಗಿರುವುದು ವಿಮಾನಯಾನ ಕ್ಷೇತ್ರಕ್ಕೆ ಸಕಾರಾತ್ಮಕ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ವಿಮಾನ ಇಂಧನದ ಪಾಲು ಸುಮಾರು 35ರಿಂದ 40 ಶೇಕಡಾ ಇರುತ್ತದೆ. ಹೀಗಾಗಿ ATF ದರದಲ್ಲಿನ ಏರಿಳಿತವು ವಿಮಾನ ಸಂಸ್ಥೆಗಳ ಲಾಭದಾಯಕತೆ ಹಾಗೂ ಪ್ರಯಾಣಿಕರ ವಿಮಾನ ದರಗಳ ಮೇಲೂ ನೇರ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳು ಎರಡು ಬಾರಿ ವಿಮಾನ ಇಂಧನದ ದರವನ್ನು ಪರಿಷ್ಕರಿಸುತ್ತವೆ. ಅಂತರರಾಷ್ಟ್ರೀಯ ಕಚ್ಚಾ ತೈಲದ ಮಾನದಂಡದ ಬೆಲೆ ಹಾಗೂ ರೂಪಾಯಿ-ಡಾಲರ್ ವಿನಿಮಯ ದರವನ್ನು ಆಧರಿಸಿ ಹೊಸ ದರವನ್ನು ನಿಗದಿಪಡಿಸಲಾಗುತ್ತದೆ.

ಇತ್ತೀಚಿನ ದರ ಇಳಿಕೆಯಿಂದ ವಿಮಾನ ಸಂಸ್ಥೆಗಳ ಇಂಧನ ವೆಚ್ಚದಲ್ಲಿ ಸ್ವಲ್ಪ ಮಟ್ಟಿನ ಕಡಿತವಾಗಲಿದ್ದು, ಮುಂದಿನ ದಿನಗಳಲ್ಲಿ ಇದರ ಲಾಭವು ವಿಮಾನ ಪ್ರಯಾಣ ದರಗಳಲ್ಲಿಯೂ ಪ್ರತಿಫಲಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com