ಪ್ರಧಾನಿ ಮೋದಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ; Indonesiaದ ಅತ್ಯುನ್ನತ ನಾಗರಿಕ 'Bintang Adipurna' ಪ್ರಶಸ್ತಿ ಪ್ರದಾನ..!

ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳಿಗೆ 'ಬಿಂಟಾಂಗ್ ರಿಪಬ್ಲಿಕ್ ಇಂಡೋನೇಷ್ಯಾ ಅದಿಪೂರ್ಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
PM Narendra Modi was conferred Indonesia's highest civilian honour -- 'Bintang Adipurna' by President Prabowo Subianto.
ಮೋದಿ ಅವರಿಗೆ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ ಪ್ರದಾನ ಮಾಡುತ್ತಿರುವ ಇಂಡೋನೇಷ್ಯಾ ಅಧ್ಯಕ್ಷ.
Updated on

ಜಕಾರ್ತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ಗೌರವ ಲಭಿಸಿದೆ. ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಮೋದಿ ಅವರಿಗೆ, ಅಲ್ಲಿನ ಅತ್ಯುನ್ನತ ನಾಗರಿಕ ಗೌರವವಾದ 'ಬಿಂಟಾಂಗ್ ಆದಿಪೂರ್ಣ' ಪ್ರಶಸ್ತಿ, ನೀಡಿ ಸನ್ಮಾನಿಸಲಾಗಿದೆ.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಅವರು ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ 'ಬಿಂಟಾಂಗ್ ಆದಿಪೂರ್ಣ' (Bintang Adipurna) ಪ್ರಶಸ್ತಿ ನೀಡಿ, ಸನ್ಮಾನಿಸಿದ್ದಾರೆ.

'ಬಿಂಟಾಂಗ್ ಆದಿಪೂರ್ಣ' ರಿಪಬ್ಲಿಕ್ ಇಂಡೋನೇಷ್ಯಾ' (Star of the Republic of Indonesia) ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ರಾಷ್ಟ್ರ ಹಾಗೂ ಜನರ ಹಿತಕ್ಕಾಗಿ ಅಸಾಧಾರಣ ಸೇವೆ ಸಲ್ಲಿಸಿದ ನಾಗರಿಕರು ಮತ್ತು ಸೇನಾ ಸಿಬ್ಬಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಗೌರವವನ್ನು 1959ರಲ್ಲಿ ಅಧಿಕೃತವಾಗಿ ಸ್ಥಾಪಿಸಲಾಯಿತು.

ರಾಷ್ಟ್ರದ ಏಕತೆ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳಿಗೆ 'ಬಿಂಟಾಂಗ್ ರಿಪಬ್ಲಿಕ್ ಇಂಡೋನೇಷ್ಯಾ ಅದಿಪೂರ್ಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಇದು ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವವೆಂದು ಪರಿಗಣಿಸಲಾಗಿದೆ.

ಇದಕ್ಕೂ ಮುನ್ನ ಜಕಾರ್ತಾದ ಇಸ್ತಾನಾ ಮೆರ್ಡೆಕಾ ಅಧ್ಯಕ್ಷೀಯ ಭವನದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಔಪಚಾರಿಕ ಸ್ವಾಗತ ನೀಡಲಾಯಿತು. ಬಳಿಕ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು.

PM Narendra Modi was conferred Indonesia's highest civilian honour -- 'Bintang Adipurna' by President Prabowo Subianto.
ಶಿಷ್ಟಾಚಾರ ಬದಿಗಿಟ್ಟ ಇಂಡೋನೇಷ್ಯಾ ಅಧ್ಯಕ್ಷ: ವಿಮಾನ ನಿಲ್ದಾಣಕ್ಕೆ ಖುದ್ದು ಬಂದು ಪ್ರಧಾನಿ ಮೋದಿ ಬರಮಾಡಿಕೊಂಡ ಸುಬಿಯಾಂತೊ, ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ..!

ಪ್ರಧಾನಿ ಮೋದಿ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಸೋಮವಾರ ಇಂಡೋನೇಷ್ಯಾಕ್ಕೆ ಆಗಮಿಸಿದ್ದರು.

ಈ ಭೇಟಿ ಭಾರತದ ಆ್ಯಕ್ಟ್ ಈಸ್ಟ್ ನೀತಿ, MAHASAGAR (Mutual and Holistic Advancement for Security Across the Regions) ದೃಷ್ಟಿಕೋನ ಹಾಗೂ ಮುಕ್ತ, ಮುಕ್ತಾಯಿತ ಮತ್ತು ಎಲ್ಲರನ್ನು ಒಳಗೊಂಡ ಇಂಡೋ-ಪೆಸಿಫಿಕ್ ಪ್ರದೇಶದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, "ಇಸ್ತಾನಾ ಮೆರ್ಡೆಕಾದಲ್ಲಿ ನೀಡಿದ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಂದೀರ್ ಜೈಸ್ವಾಲ್ ಅವರ ಪ್ರಕಾರ, ಈ ಭೇಟಿ ಭಾರತ–ಇಂಡೋನೇಷ್ಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದ್ದು, ವಿವಿಧ ಆದ್ಯತೆಯ ಕ್ಷೇತ್ರಗಳಲ್ಲಿ ಹೊಸ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com