ಅಮೆರಿಕ-ಇರಾನ್ ಒಪ್ಪಂದ "ಮುಗಿದಿದೆ": ಟ್ರಂಪ್ ಘೋಷಣೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ; ಸೆನ್ಸೆಕ್ಸ್ 1,650 ಅಂಕಗಳ ಕುಸಿತ

ಅಮೆರಿಕ ಮತ್ತು ಇರಾನ್ ನಡುವಿನ ಹೊಸ ಉದ್ವಿಗ್ನತೆಗಳ ಮಧ್ಯೆ ಭಾರತೀಯ ಷೇರು ಸೂಚ್ಯಂಕಗಳು ಕುಸಿತ ಕಂಡಿವೆ.
share market- Donald Trump
ಷೇರು ಮಾರುಕಟ್ಟೆ- ಡೊನಾಲ್ಡ್ ಟ್ರಂಪ್online desk
Updated on

ಮುಂಬೈ: ಅಮೆರಿಕ- ಇರಾನ್ ನಡುವಿನ ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಕಂಪಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಹೊಸ ಉದ್ವಿಗ್ನತೆಗಳ ಮಧ್ಯೆ ಭಾರತೀಯ ಷೇರು ಸೂಚ್ಯಂಕಗಳು ಕುಸಿತ ಕಂಡಿವೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 400 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದರೆ, ನಿಫ್ಟಿ 139 ಪಾಯಿಂಟ್‌ಗಳ ಕುಸಿತ ಕಂಡಿತು. "ಇರಾನ್ ಒಪ್ಪಂದ ಮುಗಿದಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರಿಂದ, ವಹಿವಾಟಿನ ಅವಧಿಯಲ್ಲಿ ಸೂಚ್ಯಂಕಗಳು ಕುಸಿತವನ್ನು ಮುಂದುವರೆಸಿದವು.

share market- Donald Trump
ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ 'ಮುಗಿದಿದೆ'; ನೀಚರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ: ಡೊನಾಲ್ಡ್ ಟ್ರಂಪ್

ವಹಿವಾಟಿನ ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 1,677 ಪಾಯಿಂಟ್‌ಗಳ ಕುಸಿತ ಕಂಡರೆ, ನಿಫ್ಟಿ 516 ಪಾಯಿಂಟ್‌ಗಳ ಕುಸಿತ ಕಂಡಿತು.

ಬ್ರಾಡರ್ ಮಾರುಕಟ್ಟೆಗಳು ಸಹ ಭಾರೀ ಮಾರಾಟದ ಒತ್ತಡಕ್ಕೆ ಒಳಗಾದವು, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್ ಕಳಪೆ ಪ್ರದರ್ಶನ ನೀಡಿದ ಸೂಚ್ಯಂಕಗಳಲ್ಲಿ ಸೇರಿವೆ. ಇಂಡಿಯಾ VIX ಶೇ. 28 ಕ್ಕಿಂತ ಹೆಚ್ಚು ಏರಿಕೆ ಕಂಡಿತು, ಇದು ಮಾರುಕಟ್ಟೆಯ ತೀವ್ರ ಏರಿಳಿತವನ್ನು ಪ್ರತಿಬಿಂಬಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com