

ನವದೆಹಲಿ: ಯೋಗ ಗುರು ಬಾಬಾ ರಾಮದೇವ್ ನಟ ಆಮಿರ್ ಖಾನ್ ಅವರ ಮೂರನೇ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ಅವರ ಧರ್ಮವನ್ನು ಲೆಕ್ಕಿಸದೆ ಮೂರು ಅಥವಾ ನಾಲ್ಕು ಬಾರಿ ಮದುವೆಯಾಗುವ ಕಲ್ಪನೆಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಮಿರ್ ಖಾನ್ ಇತ್ತೀಚೆಗೆ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು 61 ನೇ ವಯಸ್ಸಿನಲ್ಲಿ ವಿವಾಹವಾದರು. ಅವರ ವೈಯಕ್ತಿಕ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವಾರು ಪ್ರಮುಖ ವ್ಯಕ್ತಿಗಳು ಇದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈಗ ಬಾಬಾ ರಾಮ್‌ದೇವ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಹು ವಿವಾಹಗಳ ಕಲ್ಪನೆಯನ್ನು ವಿರೋಧಿಸಿದ್ದು, ಕುಟುಂಬ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ.
"ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಬಾಬಾ ರಾಮದೇವ್, ಜನರು ಒಂದೇ ಮದುವೆ ಮತ್ತು ಸ್ಥಿರವಾದ ಕುಟುಂಬ ನಿರ್ಮಿಸುವತ್ತ ಗಮನಹರಿಸಬೇಕು ಎಂಬುದು ತಮ್ಮ ನಂಬಿಕೆ ಎಂದು ಹೇಳಿದ್ದಾರೆ.
"ಒಬ್ಬರು ಒಂದೇ ಮದುವೆಯಾಗಬೇಕು, ಮಕ್ಕಳನ್ನು ಹೊಂದಿರಬೇಕು ಮತ್ತು ಅವರನ್ನು ಸಮರ್ಥ ಮತ್ತು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡಬೇಕು ಎಂದು ನಾನು ನಂಬುತ್ತೇನೆ. ಹಿಂದೂ, ಮುಸ್ಲಿಂ ಅಥವಾ ಯಾವುದೇ ಇತರ ಸಮುದಾಯದವರಾಗಿರಲಿ, ಮೂರು ಅಥವಾ ನಾಲ್ಕು ವಿವಾಹಗಳನ್ನು ನಾನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
"ಈ ವಯಸ್ಸಿನಲ್ಲಿ ಹೊಸ ಸಮಸ್ಯೆಗಳು ಏಕೆ ಬೇಕು? ಹಿಂದಿನ ಪತ್ನಿಯರ ಬಗ್ಗೆ ಇನ್ನೂ ಪ್ರೀತಿ ಮತ್ತು ಗೌರವವಿದ್ದರೆ, ಆ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು ಎಂದು ರಾಮದೇವ್ ಹೇಳಿದರು.