ಭೀಕರ ಅಪಘಾತ: ಬಾಲಕನಿಗೆ ಡಿಕ್ಕಿ ಹೊಡೆದು ಒಂದೂವರೆ ಕಿ.ಮೀ ಎಳೆದೊಯ್ದ ಸ್ಕೂಲ್ ವ್ಯಾನ್!

ಈ ಸಂಬಂಧ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಶಾಲಾ ವ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕ ಪರಾರಿಯಾಗಿದ್ದಾನೆ ಎಂದು ಎಸ್‌ಎಚ್‌ಒ ಪ್ರವೀಣ್ ಪ್ರಭಾಕರ್ ಹೇಳಿದ್ದಾರೆ.
11-year-old boy hit, dragged 1.5 km by school van in Bihar
ಸಾಂದರ್ಭಿಕ ಚಿತ್ರ
Updated on

ಗೋಪಾಲ್‌ಗಂಜ್: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಬುಧವಾರ ಶಾಲಾ ವ್ಯಾನ್, 11 ವರ್ಷದ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ಸುಮಾರು 1.5 ಕಿ.ಮೀ. ಎಳೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಕರ ಅಪಘಾತದಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.

ಯಾದವ್‌ಪುರ ಮೋರ್ ಮತ್ತು ಬಂಜಾರಿ ಮೋರ್ ನಡುವೆ ಈ ಅಪಘಾತ ಸಂಭವಿಸಿದ್ದು, ಬಾಲಕ ರಸ್ತೆ ದಾಟುತ್ತಿದ್ದಾಗ ವ್ಯಾನ್ ಡಿಕ್ಕಿ ಹೊಡೆದು ಸುಮಾರು 1.5 ಕಿ.ಮೀ. ಎಳೆದೊಯ್ದಿದೆ. ಆರಂಭದಲ್ಲಿ ಆತನನ್ನು ಗೋಪಾಲ್‌ಗಂಜ್‌ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆತನ ಸ್ಥಿತಿ ಸ್ಥಿರವಾಗಿದೆ. ಆದರೆ ಉತ್ತಮ ಚಿಕಿತ್ಸೆಗಾಗಿ ಗೋರಖ್‌ಪುರದ ವೈದ್ಯಕೀಯ ಸೌಲಭ್ಯಕ್ಕೆ ಕಳುಹಿಸಲಾಗಿದೆ" ಎಂದು ಸದರ್ ಎಸ್‌ಡಿಪಿಒ ಪ್ರಾಂಜಲ್ ಅವರು ಪಿಟಿಐಗೆ ತಿಳಿಸಿದ್ದಾರೆ.

11-year-old boy hit, dragged 1.5 km by school van in Bihar
ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

ಈ ಸಂಬಂಧ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಶಾಲಾ ವ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕ ಪರಾರಿಯಾಗಿದ್ದಾನೆ ಎಂದು ಎಸ್‌ಎಚ್‌ಒ ಪ್ರವೀಣ್ ಪ್ರಭಾಕರ್ ಹೇಳಿದ್ದಾರೆ.

"ಘಟನೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಇದು ಅತಿವೇಗದ ಚಾಲನೆಯೇ ಅಥವಾ ನಿರ್ಲಕ್ಷ್ಯವೇ ಎಂಬುದು ನಮಗೆ ಇನ್ನೂ ಖಚಿತವಿಲ್ಲ" ಎಂದು ಅವರು ಹೇಳಿದ್ದಾರೆ.

ಕುಟುಂಬ ಸದಸ್ಯರು ಲಿಖಿತ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com