ನಿರ್ಜಲೀಕರಣ, ಚಯಾಪಚಯ ವೈಪರೀತ್ಯಗಳ ಹೊರತಾಗಿಯೂ ಚಿಕಿತ್ಸೆ ನಿರಾಕರಿಸಿದ ಪ್ರತಿಭಟನಾ ನಿರತ ಸೋನಮ್ ವಾಂಗ್ಚುಕ್

ವೈದ್ಯರು ವಾಂಗ್‌ಚುಕ್ ಅವರ ಕುಟುಂಬಕ್ಕೆ ಮತ್ತಷ್ಟು ವಿಳಂಬವಿಲ್ಲದೆ ಚಿಕಿತ್ಸೆಯನ್ನು ಪ್ರಾರಂಭಿಸಲು ಅವಕಾಶ ನೀಡುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Sonam Wangchuk
ಸೋನಮ್ ವಾಂಗ್ಚುಕ್online desk
Updated on

ನವದೆಹಲಿ: 20 ದಿನಗಳ ಉಪವಾಸ ಸತ್ಯಾಗ್ರಹದ ನಂತರ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾದ ಸೋನಮ್ ವಾಂಗ್ಚುಕ್, ನಿರ್ಜಲೀಕರಣ ಮತ್ತು ಚಯಾಪಚಯ ಅಸ್ವಸ್ಥತೆಗಳ ಲಕ್ಷಣಗಳ ಹೊರತಾಗಿಯೂ, ದ್ರಾವಣ ಮತ್ತು ಇತರ ಔಷಧಿಗಳನ್ನು ನಿರಾಕರಿಸಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ವಾಂಗ್ಚುಕ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಅವರ ಆರೋಗ್ಯದ ಹಿತದೃಷ್ಟಿಯಿಂದ ಚಿಕಿತ್ಸೆಯನ್ನು ಸ್ವೀಕರಿಸಲು ಸಲಹೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸದ 21 ನೇ ದಿನದಂದು ಅವರ ಆರೋಗ್ಯ ಹದಗೆಟ್ಟ ನಂತರ 59 ವರ್ಷದ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ಕರೆತಂದು ಬೆಳಿಗ್ಗೆ 7.40 ಕ್ಕೆ ದಾಖಲಿಸಿದರು.

ವೈದ್ಯರ ಸಲಹೆಯ ಮೇರೆಗೆ ಮತ್ತು ದೆಹಲಿ ಹೈಕೋರ್ಟ್‌ನ ನಿರ್ದೇಶನಗಳ ಅನುಸಾರ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆ ನಡೆಸಲು ಅನುಮತಿ ಮುಗಿದ ನಂತರ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಆಸ್ಪತ್ರೆಯ ಆರೋಗ್ಯ ಬುಲೆಟಿನ್ ಪ್ರಕಾರ, ವಾಂಗ್ಚುಕ್ 20 ದಿನಗಳಿಂದ ಘನ ಆಹಾರ ಸೇವಿಸದೇ ಉಪವಾಸ ಮಾಡುತ್ತಿದ್ದರು ಮತ್ತು ಸಾಮಾನ್ಯ ಮೂರ್ಛೆ ಹೋಗಿರಲಿಲ್ಲ. ದಾಖಲಾತಿಯ ಸಮಯದಲ್ಲಿ, ಅವರು ಸ್ಥಿರವಾದ ನಾಡಿಮಿಡಿತ, ರಕ್ತದೊತ್ತಡ ಮತ್ತು Oxygen saturation ನೊಂದಿಗೆ ಪ್ರಜ್ಞೆ ಹೊಂದಿದ್ದರು, ಆದರೆ ನಿರ್ಜಲೀಕರಣದ ಲಕ್ಷಣಗಳನ್ನು ಹೊಂದಿದ್ದರು.

ರಕ್ತ ಅನಿಲ ವಿಶ್ಲೇಷಣೆಯು (Blood gas analysis) compensated acidosis, decreased serum potassium ಮತ್ತು blood sugar level of 78 mg/dl ಇರುವುದು ಕಂಡುಬಂದಿದೆ. ಪುನರಾವರ್ತಿತ ಸೀರಮ್ ಪೊಟ್ಯಾಸಿಯಮ್ ಪರೀಕ್ಷೆ ಇದೇ ರೀತಿಯ ಫಲಿತಾಂಶಗಳನ್ನು ತೋರಿಸಿದೆ. ಆದರೆ ಮೂತ್ರದ ಕೀಟೋನ್‌ಗಳು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ 1+ ರಿಂದ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 3+ ಕ್ಕೆ ಏರಿತು.

"ಇಂಟ್ರಾವೆನಸ್ ದ್ರವಗಳನ್ನು ಸೂಚಿಸಲಾಗಿದ್ದರೂ, ರೋಗಿಯು ಎಲ್ಲಾ ಇಂಟ್ರಾವೆನಸ್ ದ್ರವಗಳು ಹಾಗೂ ಯಾವುದೇ ಇತರ ಔಷಧಿಗಳನ್ನು ನಿರಾಕರಿಸಿದ್ದಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಚಿಕಿತ್ಸೆಗಾಗಿ ಸಲಹೆ ನೀಡಲಾಗುತ್ತಿದೆ" ಎಂದು ಆಸ್ಪತ್ರೆ ತಿಳಿಸಿದೆ.

ವೈದ್ಯರು ವಾಂಗ್‌ಚುಕ್ ಅವರ ಕುಟುಂಬಕ್ಕೆ ಮತ್ತಷ್ಟು ವಿಳಂಬವಿಲ್ಲದೆ ಚಿಕಿತ್ಸೆಯನ್ನು ಪ್ರಾರಂಭಿಸಲು ಅವಕಾಶ ನೀಡುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರು ದಾಖಲಾದ ಸ್ವಲ್ಪ ಸಮಯದ ನಂತರ, ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಆಸ್ಪತ್ರೆಯನ್ನು ತಮ್ಮ ಒಪ್ಪಿಗೆಯಿಲ್ಲದೆ ಯಾವುದೇ ಔಷಧಿಗಳು ಅಥವಾ ದ್ರವಗಳನ್ನು ನೀಡದಂತೆ ಕೇಳಿಕೊಂಡರು ಮತ್ತು ಅವರ ವೈದ್ಯಕೀಯ ಆರೈಕೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಆರೋಪಿಸಿ ಅವರನ್ನು ಬಿಡುಗಡೆ ಮಾಡಲು ಕೋರಿದರು.

ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಎರಡು ಪತ್ರಗಳಲ್ಲಿ, ಅವರು ತಮ್ಮ ಅನುಮೋದನೆಯಿಲ್ಲದೆ ಯಾವುದೇ ಚಿಕಿತ್ಸೆಯನ್ನು ನೀಡಬಾರದು ಎಂದು ನಿರ್ದೇಶಿಸಿದರು ಮತ್ತು ಎಲ್ಲಾ ವೈದ್ಯಕೀಯ ವರದಿಗಳ ಪ್ರತಿಗಳನ್ನು ಕೋರಿದರು. ಪ್ರತ್ಯೇಕ ಸಂವಹನದಲ್ಲಿ, ವಾಂಗ್‌ಚುಕ್ ಅವರನ್ನು ಕುಟುಂಬದ ಆಯ್ಕೆಯ ಆಸ್ಪತ್ರೆಗೆ ಸ್ಥಳಾಂತರಿಸಲು ಸಾಧ್ಯವಾಗುವಂತೆ ಅವರನ್ನು ಡಿಸ್ಚಾರ್ಜ್ ಮಾಡಬೇಕೆಂದು ಅವರು ವಿನಂತಿಸಿದರು, ಸೌಲಭ್ಯದ ಮೇಲಿನ ವಿಶ್ವಾಸ ನಷ್ಟವನ್ನು ಉಲ್ಲೇಖಿಸಿದರು.

ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ನಿರ್ಧಾರವನ್ನು ಆಂಗ್ಮೋ ಪ್ರಶ್ನಿಸಿದರು, ದೆಹಲಿ ಹೈಕೋರ್ಟ್ ಅವರಿಗೆ ವಿಶೇಷ ವೈದ್ಯಕೀಯ ಮೇಲ್ವಿಚಾರಣೆಯನ್ನು ಪಡೆಯುವಂತೆ ನಿರ್ದೇಶಿಸಿದೆ ಆದರೆ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಆದೇಶಿಸಿಲ್ಲ ಎಂದು ಹೇಳಿದರು. ಅವರನ್ನು ಸ್ಥಳಾಂತರಿಸುವ ಮೊದಲು ಕುಟುಂಬವನ್ನು ಸಂಪರ್ಕಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Sonam Wangchuk
ಆಸ್ಪತ್ರೆ ಸೇರಿದ್ದಾರೆ ಅಷ್ಟೇ, ಉಪವಾಸ ಮುಂದುವರಿದಿದೆ; ನನ್ನ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ: ಸೋನಮ್ ವಾಂಗ್ಚುಕ್ ಪತ್ನಿ

ವಾಂಗ್‌ಚುಕ್‌ ಅವರ ಪೊಟ್ಯಾಸಿಯಮ್ ಮಟ್ಟ 4.3 ರಿಂದ 2.9 ಕ್ಕೆ ಇಳಿದಿದೆ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ. ಇದು ಜೀವಕ್ಕೆ ಅಪಾಯಕಾರಿ ಎಂದು ವಿವರಿಸಿದರು, ಆದರೆ ಪದೇ ಪದೇ ವಿನಂತಿಸಿದರೂ ವೈದ್ಯಕೀಯ ವರದಿಗಳ ಪ್ರತಿಗಳನ್ನು ನೀಡಲು ನಿರಾಕರಿಸಿದರು. ವಾಂಗ್‌ಚುಕ್ "ಸಂಪೂರ್ಣವಾಗಿ ಚೆನ್ನಾಗಿದ್ದಾರೆ" ಎಂದು ಹೇಳಿಕೊಂಡ ಅವರು, ಯಾವುದೇ ಚಿಕಿತ್ಸೆಗೆ ಒಪ್ಪಿಗೆ ನೀಡುವ ಮೊದಲು ಕುಟುಂಬವು ಅವರನ್ನು ಸ್ವತಂತ್ರವಾಗಿ ಪರೀಕ್ಷಿಸುತ್ತದೆ ಎಂದು ಹೇಳಿದರು.

ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಸ್ಥಳಾಂತರಿಸಿದ ನಂತರ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರು ವಾಂಗ್ಚುಕ್ ಅವರನ್ನು "ಬಲವಂತವಾಗಿ ಕರೆದೊಯ್ದಿದ್ದಾರೆ" ಎಂದು ಆರೋಪಿಸಿದರು. ನಂತರ ದೀಪಕೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಘೋಷಿಸಿದರು ಮತ್ತು ಜುಲೈ 20 ರಂದು ಪಕ್ಷದ 'ಚಲೋ ಸಂಸದ್' ಮೆರವಣಿಗೆ ಯೋಜಿಸಿದಂತೆ ಮುಂದುವರಿಯಲಿದೆ ಎಂದು ಹೇಳಿದರು.

ನೀಟ್ ಮತ್ತು ಇತರ ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪದ ಮೇಲೆ ಸಿಜೆಪಿ ನೇತೃತ್ವದ ಪ್ರತಿಭಟನೆಯನ್ನು ಬೆಂಬಲಿಸಿ ವಾಂಗ್ಚುಕ್ ಜೂನ್ 28 ರಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

ಕಳೆದ ಮೂರು ವಾರಗಳಲ್ಲಿ ಅವರ ಆರೋಗ್ಯ ನಿರಂತರವಾಗಿ ಹದಗೆಟ್ಟಿತ್ತು. ಶುಕ್ರವಾರ, ವೈದ್ಯರು ಅವರು ಉಪವಾಸ ಸತ್ಯಾಗ್ರಹದ ಆರಂಭದಿಂದಲೂ ಸುಮಾರು 9.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು, ಆದರೆ ಅವರ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳು ನಿಕಟ ಮೇಲ್ವಿಚಾರಣೆಯಲ್ಲಿವೆ.

ಆಸ್ಪತ್ರೆಗೆ ಸ್ಥಳಾಂತರಿಸುವ ಮೊದಲು, ವಾಂಗ್ಚುಕ್ ಅವರ ಸ್ಥಿತಿ ಹದಗೆಟ್ಟಿದ್ದರೂ ಉಪವಾಸ ಮುಂದುವರಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com