ಚೆನ್ನೈ: SBI ಬ್ರಾಂಚ್ ಮ್ಯಾನೇಜರ್ ಗೆ ಮಾಜಿ ಕೇಂದ್ರ ಸಚಿವ ಎಂಕೆ ಅಳಗಿರಿ ಪುತ್ರಿಯಿಂದ ಕಪಾಳಮೋಕ್ಷ! Video ವೈರಲ್

ವೈರಲ್ ವಿಡಿಯೋದಲ್ಲಿ ಕಚೇರಿಯಂತಿರುವ ಸ್ಥಳವೊಂದರಲ್ಲಿ ಕಯಲ್ವಿಳಿ, ವ್ಯಕ್ತಿಯೊಬ್ಬರೊಂದಿಗೆ ಕುಳಿತು ಎಸ್‌ಬಿಐ ಬ್ರಾಂಚ್ ಮ್ಯಾನೇಜರ್ ಜೊತೆಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ.
MK Alagiri's daughter Kayalvizhi
ಅಳಗಿರಿ ಅವರ ಪುತ್ರಿ ಕಯಲ್ವಿಳಿ
Updated on

ಚೆನ್ನೈ: ಚೆನ್ನೈನ SBI ಬ್ರಾಂಚ್ ಮ್ಯಾನೇಜರ್ ಗೆ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಕಯಲ್ವಿಳಿ ಕಪಾಳ ಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಕಯಲ್ವಿಳಿ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಕಚೇರಿಯಂತಿರುವ ಸ್ಥಳವೊಂದರಲ್ಲಿ ಕಯಲ್ವಿಳಿ, ವ್ಯಕ್ತಿಯೊಬ್ಬರೊಂದಿಗೆ ಕುಳಿತು ಎಸ್‌ಬಿಐ ಬ್ರಾಂಚ್ ಮ್ಯಾನೇಜರ್ ಜೊತೆಗೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಮಾತಿಗೆ ಮಾತು ಬೆಳೆದು ಕಯಲ್ವಿಳಿ ಅವರು ಇದ್ದಕ್ಕಿದ್ದಂತೆ ಎದ್ದು ನಿಂತು ಮ್ಯಾನೇಜರ್ ಗೆ ಕಪಾಳಮೋಕ್ಷ ಮಾಡುವುದು ದಾಖಲಾಗಿದೆ.

ಎಸ್‌ಬಿಐ ಶಾಖಾ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಯಲ್ವಿಳಿ ವಿರುದ್ಧ ದೂರು ದಾಖಲಿಸಲಾಗಿದೆ.

ಕಯಲ್ವಿಳಿ ಅವರಿಗೆ ಸೇರಿದ ವಾಣಿಜ್ಯ ಕಟ್ಟಡವೊಂದರ ಬ್ಯಾಂಕ್ ಇದ್ದು, ಕೆಟ್ಟುಹೋಗಿರುವ ಲಿಫ್ಟ್ ಅನ್ನು ದುರಸ್ತಿಗೊಳಿಸುವಂತೆ SBI ಅಡ್ಯಾರ್ ಶಾಖೆಯ ವ್ಯವಸ್ಥಾಪಕರು ಮನವಿ ಮಾಡಿದಾಗ ವಿವಾದ ಉಂಟಾಗಿದೆ. ಇದರಿಂದ ಅಸಮಾಧಾನಗೊಂಡ ಅವರು ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ.

MK Alagiri's daughter Kayalvizhi
ವಿಚಾರಣೆಗೆ ಕರೆದೊಯ್ದು ಪೊಲೀಸರಿಂದ ಹಲ್ಲೆ ಆರೋಪ: ಠಾಣೆಯಲ್ಲೇ ವೃದ್ಧ ಸಾವು

ಮ್ಯಾನೇಜರ್ ಅವರ ವರದಿಯ ಆಧಾರದ ಮೇಲೆ, ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ, ಕಾನೂನಿನ ನಾಲ್ಕು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com