ಅಮಿತ್ ಶಾ ವಿರುದ್ಧ ಸುಳ್ಳು ಆರೋಪ; ರಾಹುಲ್ ಗಾಂಧಿ ಕೂಡಲೇ ಕ್ಷಮೆ ಕೇಳಲೇಬೇಕು: Kangana Ranaut

ರಾಹುಲ್ ಗಾಂಧಿ ಕ್ಷಮೆ ಕೇಳಲೇಬೇಕು. ಸುಳ್ಳುಗಳನ್ನು ಹರಡುತ್ತಾ ಯಾರ ಮೇಲಾದರೂ ಇಷ್ಟು ಗಂಭೀರ ಆರೋಪ ಮಾಡುವುದು ಸರಿಯಲ್ಲ....
Kangana Ranaut-Rahul Gandhi
ಕಂಗನಾ ರನಾವತ್ ಮತ್ತು ರಾಹುಲ್ ಗಾಂಧಿ
Updated on

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಒತ್ತಾಯಿಸಿದ್ದಾರೆ.

ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದಿತ್ತೆನ್ನಲಾದ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಹೊಣೆಗಾರರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಕಂಗನಾ, 'ಯಾವುದೇ ಸಾಕ್ಷ್ಯವಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡುವುದು ಸರಿಯಲ್ಲ' ಎಂದು ಹೇಳಿದರು.

"ರಾಹುಲ್ ಗಾಂಧಿ ಕ್ಷಮೆ ಕೇಳಲೇಬೇಕು. ಸುಳ್ಳುಗಳನ್ನು ಹರಡುತ್ತಾ ಯಾರ ಮೇಲಾದರೂ ಇಷ್ಟು ಗಂಭೀರ ಆರೋಪ ಮಾಡುವುದು ಸರಿಯಲ್ಲ" ಎಂದು ಕಂಗನಾ ಹೇಳಿದರು.

Kangana Ranaut-Rahul Gandhi
"ನಿನ್ನ ವಯಸ್ಸಿಗೆ ನಾನು 2 ರಾಷ್ಟ್ರ ಪ್ರಶಸ್ತಿ ಗೆದ್ದಿದ್ದೆ.. ನೀನು ನಿಷ್ಪ್ರಯೋಜಕ, ನಿರುದ್ಯೋಗಿ": ಸಿಜೆಪಿ ನಾಯಕ Saurav Dasಗೆ ಕಂಗನಾ ತಿರುಗೇಟು

ರಾಹುಲ್ ಹೇಳಿಕೆಗೆ ವ್ಯಾಪಕ ವಿರೋಧ

ಜುಲೈ 20ರಂದು ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ನಡೆದಿತ್ತೆನ್ನಲಾದ ಪೊಲೀಸ್ ಕ್ರಮದ ಬಳಿಕ ಅಮಿತ್ ಶಾ ಅವರನ್ನು ಗುರಿಯಾಗಿಸಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಹುಲ್ ಪರ ಟಿಎಂಸಿ ಬ್ಯಾಟ್

ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, ರಾಹುಲ್ ಗಾಂಧಿ ಹೇಳಿಕೆಯನ್ನು ಬೆಂಬಲಿಸಿ, ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. "ನಾನು ರಾಹುಲ್ ಗಾಂಧಿಯನ್ನು ಬೆಂಬಲಿಸುತ್ತೇನೆ. ಅವರು ಹೇಳಿದ್ದು ಸರಿಯೇ ಇದೆ. ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ರಾಯ್ ಹೇಳಿದರು.

Kangana Ranaut-Rahul Gandhi
'ನಾಚಿಕೆಯಾಗಬೇಕು ನಿಮಗೆ'; ಯುವಕರಿಂದಲೇ ನಾವು ಸ್ಟಾರ್‌ ಆಗಿರೋದು: Gen-Z ವಿರುದ್ಧ ಕಂಗನಾ ಹೇಳಿಕೆಗೆ ಸೋನು ಸೂದ್ ಆಕ್ರೋಶ

ಆರೋಪಗಳ ಬದಲು ರಚನಾತ್ಮಕ ಚರ್ಚೆ ನಡೆಸಲಿ: ಬಿಜೆಪಿ

ಇದೇ ವೇಳೆ ಬಿಜೆಪಿ ಸಂಸದ ಶಶಾಂಕ್ ಮಣಿ ತ್ರಿಪಾಠಿ, ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

"ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಅವರು ಯಾವುದೇ ಗಂಭೀರ ವಿಚಾರಗಳನ್ನು ಅಥವಾ ವಿಶ್ಲೇಷಣೆಯನ್ನು ಮಂಡಿಸುವುದಿಲ್ಲ. ಕೇವಲ ಆರೋಪಗಳನ್ನು ಮಾಡುತ್ತಾರೆ. ಮಾತನಾಡುವ ಅವಕಾಶ ಬಂದಾಗಲೂ ವಿಷಯಾಧಾರಿತವಾಗಿ ಮಾತನಾಡುವುದಿಲ್ಲ" ಎಂದು ತ್ರಿಪಾಠಿ ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com