ಬಿಜೆಪಿ ತೊರೆಯುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ದೆಹಲಿಗೆ ಹಾರಿದ ಅಣ್ಣಾಮಲೈ; ಕುತೂಹಲ ಮೂಡಿಸಿದ ಸಿಂಗಂ ನಡೆ

ಸ್ವಲ್ಪ ಸಮಯದ ಹಿಂದೆ, ಅಣ್ಣಾಮಲೈ ಅವರು ರಾಷ್ಟ್ರ ರಾಜಧಾನಿಗೆ ತೆರಳಲು ವಿಮಾನ ಹತ್ತುವುದಕ್ಕಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
Annamalai
ಅಣ್ಣಾಮಲೈ
Updated on

ಚೆನ್ನೈ: ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಬಿಜೆಪಿ ತೊರೆದು ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ವರದಿಗಳ ಮಧ್ಯೆ, ಸೋಮವಾರ ಚೆನ್ನೈನಿಂದ ದೆಹಲಿಗೆ ಹಾರಿದ್ದಾರೆ.

ಸ್ವಲ್ಪ ಸಮಯದ ಹಿಂದೆ, ಅಣ್ಣಾಮಲೈ ಅವರು ರಾಷ್ಟ್ರ ರಾಜಧಾನಿಗೆ ತೆರಳಲು ವಿಮಾನ ಹತ್ತುವುದಕ್ಕಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಗಮನಾರ್ಹ ವಿಚಾರವೆಂದರೆ, ಅವರು ವಿಮಾನ ನಿಲ್ದಾಣಕ್ಕೆ ಬಂದ ಕಾರಿನಲ್ಲಿ ಬಿಜೆಪಿ ಧ್ವಜವನ್ನು ಪ್ರದರ್ಶಿಸಲಿಲ್ಲ. ಇದು ಕೇಸರಿ ಪಕ್ಷ ತೊರೆಯುತ್ತಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

Annamalai
ಕಾಯಿರಿ, ಇನ್ನೆರೆಡು ದಿನದಲ್ಲಿ ಹೇಳ್ತೀನಿ: ಹೊಸ ಪಕ್ಷ ಸ್ಥಾಪನೆಯ ಊಹಾಪೋಹಗಳ ಬಗ್ಗೆ BJP ನಾಯಕ ಅಣ್ಣಾಮಲೈ ಹೇಳಿಕೆ! Video

ಬಿಜೆಪಿ ತೊರೆದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಯೋಜಿಸುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರು, "ದಯವಿಟ್ಟು ಎರಡು ದಿನ ಕಾಯಿರಿ. ನಾವು ಎರಡು ದಿನಗಳಲ್ಲಿ ಕುಳಿತು ಮಾತನಾಡುತ್ತೇವೆ" ಎಂದಷ್ಟೇ ಹೇಳಿದರು.

ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಅಣ್ಣಾಮಲೈ, ತಮ್ಮ ಭವಿಷ್ಯದ ಕುರಿತ ವರದಿಗಳ ಬಗ್ಗೆ ಮೌನವಾಗಿದ್ದಾರೆ. ಅವುಗಳನ್ನು ದೃಢೀಕರಿಸುವುದಾಗಲಿ ಅಥವಾ ನಿರಾಕರಿಸುವುದಾಗಲಿ ಮಾಡುತ್ತಿಲ್ಲ. ಅವರ ಇತ್ತೀಚಿನ ಹೇಳಿಕೆಗಳು ಕುತೂಹಲವನ್ನು ಹೆಚ್ಚಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com