'ಪಿಕ್ ಪಾಕೆಟ್' ಬಗ್ಗೆ ಎಚ್ಚರದಿಂದಿರಿ; CBSE ಒಳಗೆ ಕುಳಿತಿದ್ದಾರೆ: ರಾಹುಲ್ ಗಾಂಧಿ ಲೇವಡಿ

ಡಿಜಿಟಲ್ ಸ್ಕ್ಯಾನಿಂಗ್ ಪ್ರಕ್ರಿಯೆಯಲ್ಲಿನ ದೋಷಗಳಿಂದ ಉಂಟಾದ ತಿದ್ದುಪಡಿಗಳಿಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿರುವುದನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.
Rahul Gandhi
ರಾಹುಲ್ ಗಾಂಧಿ
Updated on: 

ನವದೆಹಲಿ: ಸಿಬಿಎಸ್‌ಇ ಮರುಮೌಲ್ಯಮಾಪನ ಪ್ರಕ್ರಿಯೆ ಮತ್ತು ಸಂಬಂಧಿತ ವೆಚ್ಚಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕೇಂದ್ರ ಸರ್ಕರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ಕ್ಯಾನ್ ಮಾಡಿದ ಪ್ರತಿಗಳು, ಅಂಕಗಳ ಮರು ಎಣಿಕೆ ಮತ್ತು ಮರು-ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅಧಿಕ ಶುಲ್ಕ ವಿಧಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯವಸ್ಥೆಯ ವೈಫಲ್ಯಕ್ಕೆ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಡಿಜಿಟಲ್ ಸ್ಕ್ಯಾನಿಂಗ್ ಪ್ರಕ್ರಿಯೆಯಲ್ಲಿನ ದೋಷಗಳಿಂದ ಉಂಟಾದ ತಿದ್ದುಪಡಿಗಳಿಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿರುವುದನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪಿಕ್‌ಪಾಕೆಟ್ ಬಗ್ಗೆ ಎಚ್ಚರವಾಗಿರಿ. ಅವರು ಸಿಬಿಎಸ್‌ಇ ಕಚೇರಿಯ ಒಳಗೆ ಕುಳಿತಿದ್ದಾರೆ. ಸಿಬಿಎಸ್‌ಇ ತಪ್ಪಿನಿಂದ ಅಂಕಗಳು ತಪ್ಪಾಗಿ ಬಂದರೆ ನಿಮಗೆ ಬಿಲ್ ಬರುತ್ತದೆ. ಡಿಜಿಟಲ್ ಸ್ಕ್ಯಾನ್ ಕಾಪಿಗಳಿಗಾಗಿ ಪ್ರತಿ ವಿಷಯಕ್ಕೆ 100,ಮರು ಎಣಿಕೆಗೆ ಪ್ರತಿ ವಿಷಯಕ್ಕೆ 100 ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 100 ವಿಧಿಸಲಾಗುತ್ತಿದೆ.

ಒಂದು ಮಗು ತನ್ನ ಉತ್ತರ ಪತ್ರಿಕೆಯನ್ನು ಪರಿಶೀಲಿಸಲು 2000ವರೆಗೆ ಖರ್ಚು ಮಾಡಬೇಕಾಗಿದೆ. ಯೋಚಿಸಿ: 4 ಲಕ್ಷ ಮಕ್ಕಳು ಅಂತಹ ಅರ್ಜಿ ಸಲ್ಲಿಸಿದಾಗ ಸಿಬಿಎಸ್‌ಇ ಎಷ್ಟು ಹಣ ಸಂಗ್ರಹಿಸುತ್ತಿದೆ ಎಂದಿದ್ದಾರೆ,ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷಗಳನ್ನು ಉಲ್ಲೇಖಿಸಿದ ಗಾಂಧಿ, ಉತ್ತರ ಪತ್ರಿಕೆಗಳನ್ನು ಮೊಬೈಲ್ ಫೋನ್‌ಗಳನ್ನು ಬಳಸಿ ಸ್ಕ್ಯಾನ್ ಮಾಡಿದರೆ ದೋಷಗಳು ಅನಿವಾರ್ಯ ಎಂದು ಹೇಳಿದರು, ಮತ್ತು ವಿದ್ಯಾರ್ಥಿಗಳು ಅಂತಿಮವಾಗಿ ತಪ್ಪುಗಳನ್ನು ಸರಿಪಡಿಸಲು ಹಣ ಪಾವತಿಸುತ್ತಾರೆ. ತಪ್ಪು ಸಿಬಿಎಸ್‌ಇಗೆ ಸೇರಿದೆ. ಶಿಕ್ಷೆ ವಿದ್ಯಾರ್ಥಿಯ ಮೇಲೆ ಬೀಳುತ್ತದೆ. ಲಾಭ ಸರ್ಕಾರಕ್ಕೆ ಹೋಗುತ್ತದೆ" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.

Rahul Gandhi
'ವಿಶ್ವಗುರು' ಒಂದೇ ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಲು ಆಗ್ತಿಲ್ಲ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಕಿಡಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com