ರಾಜತಾಂತ್ರಿಕ ಮಾತುಕತೆಯ ಮೂಲಕವೇ ಗಡಿ ವಿವಾದ ಬಗೆಹರಿಸಿಕೊಳ್ಳುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

ಎರಡೂ ರಾಷ್ಟ್ರಗಳು ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿದರೆ, ಯಾವುದೇ ಸಮಸ್ಯೆ ದೊಡ್ಡದಲ್ಲ ಮತ್ತು ಯಾವುದೇ ಗಡಿ ವಿವಾದ ಸಂಕೀರ್ಣವಾಗಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
Shishir Khanal-S jaishanakar
ನೇಪಾಳ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಸಭೆ
Updated on

ನವದೆಹಲಿ: ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನೇಪಾಳ ಬಯಸಿದೆ ಎಂದು ಆ ದೇಶದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಭಾನುವಾರ ಹೇಳಿದ್ದಾರೆ.

ಎರಡೂ ರಾಷ್ಟ್ರಗಳು ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿದರೆ, ಯಾವುದೇ ಸಮಸ್ಯೆ ದೊಡ್ಡದಲ್ಲ ಮತ್ತು ಯಾವುದೇ ಗಡಿ ವಿವಾದ ಸಂಕೀರ್ಣವಾಗಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

21ನೇ ಶತಮಾನದ ಭೂರಾಜಕೀಯದ ವಿಕೃತ ಹಾಗೂ ಅತಿಸೂಕ್ಷ್ಮ ದೃಷ್ಟಿಕೋನದಿಂದ ಭಾರತವನ್ನು ನೋಡುವುದನ್ನು ಕಠ್ಮಂಡುವಿನ ಹೊಸ ಸರ್ಕಾರ ನಿರಾಕರಿಸಿದ್ದು, ಬದಲಾಗಿ ಉಭಯ ರಾಷ್ಟ್ರಗಳ ಸಮಗ್ರ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಪರಸ್ಪರ ಲಾಭದಾಯಕ ಸಂಬಂಧವನ್ನು ನಿರ್ಮಿಸಲು ಬಯಸುತ್ತಿದೆ ಎಂದು ಖನಾಲ್ ಹೇಳಿದರು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ವ್ಯಾಪಕ ಮಟ್ಟದ ಮಾತುಕತೆ ನಡೆಸಿದ ಒಂದು ದಿನದ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

Shishir Khanal-S jaishanakar
'ಯುವಕರು ರೀಲ್‌ಗಳನ್ನು ಮಾಡಬೇಕು, ಪಕೋಡಾ ಕರಿಯುವುದನ್ನು ಮುಂದುವರಿಸಬೇಕೆಂದು ಪ್ರಧಾನಿ ಬಯಸುತ್ತಾರೆ': ರಾಹುಲ್ ಗಾಂಧಿ

ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಶಿಶಿರ್ ಖನಾಲ್ ಶುಕ್ರವಾರ ಮೂರು ದಿನಗಳ ದೆಹಲಿ ಪ್ರವಾಸ ಆರಂಭಿಸಿದ್ದರು. ಆದರೆ, ಇತ್ತೀಚೆಗೆ ನೇಪಾಳದ ಪ್ರಧಾನಿ ಬಲೆಂದ್ರ ಶಾ ಅವರು ಭಾರತ-ನೇಪಾಳ ಗಡಿ ವಿವಾದದ ಕುರಿತು ನೀಡಿದ್ದ ಹೇಳಿಕೆಗಳಿಂದ ಉಂಟಾದ ರಾಜಕೀಯ ಚರ್ಚೆಯ ನಡುವೆಯೇ ಈ ಭೇಟಿ ನಡೆದಿತ್ತು.

"ನಾವು ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿದರೆ ಯಾವುದೇ ಸಮಸ್ಯೆ ದೊಡ್ಡದಲ್ಲ, ಯಾವುದೇ ಗಡಿ ವಿವಾದವೂ ಅಷ್ಟು ಸಂಕೀರ್ಣವಲ್ಲ. ನಾವು ಭಾರತವನ್ನು ಮುಕ್ತ ಮನಸ್ಸಿನಿಂದ, ಸ್ಪಷ್ಟ ದೃಷ್ಟಿಕೋನದಿಂದ ಮತ್ತು ಒಂದೇ ಪಾರದರ್ಶಕ ಉದ್ದೇಶದೊಂದಿಗೆ ನೋಡುತ್ತೇವೆ.

ನಮ್ಮ ಮುಖ್ಯ ಗುರಿ ನೇಪಾಳದ ಆರ್ಥಿಕ ಪರಿವರ್ತನೆಯಾಗಿದೆ. ಅತಿಯಾದ ರಾಷ್ಟ್ರವಾದಿ ಭಾವನೆಗಳನ್ನು ಪ್ರಚೋದಿಸುವ ಬದಲು, ಸಮಸ್ಯೆಗಳನ್ನು ಶಾಂತಿಯುತವಾಗಿ ಹಾಗೂ ಮಾಹಿತಿಯ ಆಧಾರದ ಮೇಲೆ ಪರಿಹರಿಸುವ ಮಾರ್ಗವನ್ನು ನಾವು ಅನುಸರಿಸುತ್ತಿದ್ದೇವೆ" ಎಂದು ಖನಾಲ್ ಹೇಳಿದರು.

ಇದೇ ವೇಳೆ, ಭಾರತದ ಆರ್ಥಿಕ ಬೆಳವಣಿಗೆಯನ್ನು ಅವರು ಶ್ಲಾಘಿಸಿದರು. "ಗಡಿಯಾಚೆ ನಾವು ಉದಯೋನ್ಮುಖ ಭಾರತವನ್ನು ನೋಡುತ್ತಿದ್ದೇವೆ. ಜಾಗತಿಕ ವೇದಿಕೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿಯಾಗಿ ಭಾರತ ತನ್ನನ್ನು ತಾನು ಯಶಸ್ವಿಯಾಗಿ ಮರುರೂಪಿಸಿಕೊಂಡಿದೆ," ಎಂದು ಅವರು ಹೇಳಿದರು.

"ಮಹತ್ವಾಕಾಂಕ್ಷೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಈ ಹೊಸ ಭಾರತದೊಂದಿಗೆ ಕೈಜೋಡಿಸಲು ನಾವು ಬಯಸುತ್ತೇವೆ. ಅದೇ ಸಮಯದಲ್ಲಿ, ನಾವು ಮಹತ್ವಾಕಾಂಕ್ಷೆಯ ನೇಪಾಳದ ಶಕ್ತಿ ಮತ್ತು ಉತ್ಸಾಹವನ್ನು ತರುತ್ತಿದ್ದೇವೆ," ಎಂದು ಶಿಶಿರ್ ಖನಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com