ಶಾಸಕರ ನಕಲಿ ಸಹಿ ಸಂಗ್ರಹದ ತನಿಖೆ: ಮಮತಾ ಬ್ಯಾನರ್ಜಿಯ ಕಾಲಿಘಾಟ್ ನಿವಾಸಕ್ಕೆ ಸಿಐಡಿ ತಂಡ!

ಕಾಲಿಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮಧ್ಯಾಹ್ನದ ಸುಮಾರಿಗೆ 30 ಬಿ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಪಕ್ಷದ ಕಚೇರಿಗೆ ತೆರಳಿದ್ದಾರೆ.
Mamata Banerjee
ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ತೃಣಮೂಲ ಶಾಸಕಾಂಗ ಪಕ್ಷದ ನಾಯಕರಾಗಿ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ಆಯ್ಕೆ ಮಾಡಿದ ವಿವಾದದಲ್ಲಿ ಶಾಸಕರ ನಕಲಿ ಸಹಿ ತನಿಖೆಯ ಭಾಗವಾಗಿ ಪಶ್ಚಿಮ ಬಂಗಾಳ ಪೊಲೀಸರ ಅಪರಾಧ ತನಿಖಾ ವಿಭಾಗದ (ಸಿಐಡಿ) 17 ಸದಸ್ಯರ ತಂಡ ಮಂಗಳವಾರ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸ ಮತ್ತು ಕಚೇರಿಗೆ ಭೇಟಿ ನೀಡಿದೆ.

ಕಾಲಿಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ರಾಜ್ಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮಧ್ಯಾಹ್ನದ ಸುಮಾರಿಗೆ 30 ಬಿ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಪಕ್ಷದ ಕಚೇರಿಗೆ ತೆರಳಿದ್ದಾರೆ.

ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಸಭೆಯಲ್ಲಿ ಭಾಗವಹಿಸಲು ದೆಹಲಿಯಲ್ಲಿದ್ದ ಮಮತಾ ಮಂಗಳವಾರ ಕೋಲ್ಕತ್ತಾಗೆ ಮರಳುವ ನಿರೀಕ್ಷೆಯಿತ್ತು. ಆದಾಗ್ಯೂ, ಅವರು ಹಿಂತಿರುಗಿದ್ದಾರೆಯೇ ಎಂಬುದು ತಕ್ಷಣ ತಿಳಿದುಬಂದಿಲ್ಲ.

ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಈ ಹಿಂದೆ ನೀಡಿದ ನೋಟಿಸ್ ಗೆ ಪ್ರತಿಕ್ರಿಯೆ ಪಡೆಯಲು ಈ ಭೇಟಿ ನೀಡಿರುವುದಾಗಿ ಸ್ಥಳದಲ್ಲಿದ್ದ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

30 ಬಿ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಶಾಸಕರ ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ. ಆ ಹೇಳಿಕೆಯ ಆಧಾರದ ಮೇಲೆ ತನಿಖೆಯ ಭಾಗವಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ತನಿಖಾ ತಂಡವನ್ನು ಮನೆ ಬಳಿ ಪ್ರವೇಶಿಸದಂತೆ ತಡೆಯಲಾಯಿತು. ಭದ್ರತಾ ಸಿಬ್ಬಂದಿಯೊಂದಿಗೆ ಸ್ವಲ್ಪ ಸಮಯದವರೆಗೆ ಘರ್ಷಣೆಗೆ ಕಾರಣವಾಯಿತು. ಅಭಿಷೇಕ್ ಬ್ಯಾನರ್ಜಿ ಇಲ್ಲದೆ ಶೋಧ ಕಾರ್ಯಾಚರಣೆಗೆ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಟಿಎಂಸಿ ನಾಯಕ ಮತ್ತು ಮಾಜಿ ಸಂಸದ ಸುಭಾಷಿಶ್ ಚಕ್ರವರ್ತಿ ಹೇಳಿದರು.

ಅಭಿಷೇಕ್ ಬ್ಯಾನರ್ಜಿ ಇಲ್ಲದೆ ಸಿಐಡಿ ಮನೆ ಆವರಣಕ್ಕೆ ಪ್ರವೇಶಿಸಲು ಅನುಮತಿಸಿಲ್ಲ. ಅವರು ಬಂದ ನಂತರ, ಸಿಐಡಿ ಬಂದು ಮನೆಯನ್ನು ಶೋಧಿಸಬಹುದು ಎಂದು ಚಕ್ರವರ್ತಿ ವರದಿಗಾರರಿಗೆ ತಿಳಿಸಿದರು.

Mamata Banerjee
TMC ಮೇಲೆ ಹಿಡಿತ ಕಳೆದುಕೊಂಡ ಮಮತಾ ಬ್ಯಾನರ್ಜಿ: ಕೈಕೊಟ್ಟ 17 Muslim ಶಾಸಕರು; ಮೇಯರ್ ಸ್ಥಾನಕ್ಕೆ ದೀದಿ ಆಪ್ತೆ ರಾಜೀನಾಮೆ

ಈ ಮಧ್ಯೆ ಕಳೆದ 10 ದಿನಗಳಿಂದ ಸಿಐಡಿಯಿಂದ ಹಲವು ಬಾರಿ ನೋಟಿಸ್‌ಗಳನ್ನು ಪಡೆದಿರುವ ಅಭಿಷೇಕ್ ಬ್ಯಾನರ್ಜಿ, ಮಂಗಳವಾರ ಕೋಲ್ಕತ್ತಾದ ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಭಬಾನಿ ಭವನದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕಿತ್ತು. ಆದರೆ ಇಂಡಿಯಾ ಬ್ಲಾಕ್ ಸಭೆಯಲ್ಲಿ ಭಾಗವಹಿಸಲು ಶನಿವಾರ ದೆಹಲಿಗೆ ತೆರಳಿದ್ದ ಅಭಿಷೇಕ್ ಇನ್ನೂ ಕೋಲ್ಕತ್ತಾಗೆ ಹಿಂತಿರುಗಿರಲಿಲ್ಲ. ಶಾಸಕರ ನಕಲಿ ಸಹಿ ಸಂಗ್ರಹ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಸಂಬಂಧವನ್ನು ಪರಿಶೀಲಿಸಲು ಸಿಐಡಿ ನೋಟಿಸ್‌ ನೀಡಿತ್ತು.

ವಿರೋಧ ಪಕ್ಷದ ನಾಯಕನ ಮಾನ್ಯತೆಗಾಗಿ ವಿಧಾನಸಭೆ ಸ್ಪೀಕರ್‌ಗೆ ಸಲ್ಲಿಸಲಾದ ಪ್ರಸ್ತಾವನೆಯ ಮೇಲೆ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದೆ.

ಪಕ್ಷದ 80 ಶಾಸಕರಲ್ಲಿ 58 ಮಂದಿ ನಾಯಕತ್ವದ ನಾಮನಿರ್ದೇಶಿತ ಸೋವಂದೇಬ್ ಚಟ್ಟೋಪಾಧ್ಯಾಯ ಬದಲಿಗೆ ಉಚ್ಚಾಟಿತ ಶಾಸಕಿ ರೀತಬ್ರತಾ ಬ್ಯಾನರ್ಜಿ ಅವರನ್ನು ಆ ಹುದ್ದೆಗೆ ಬೆಂಬಲಿಸಿದಾಗ ಬಿಕ್ಕಟ್ಟು ಉಲ್ಬಣಗೊಂಡಿತು. ಕಳೆದ ವಾರ, ಬಂಡಾಯ ಬಣವು ಶಾಸಕಾಂಗ ಪಕ್ಷದ ಮೇಲೆ ಹಿಡಿತ ಸಾಧಿಸಿತು. ರೀತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿತು ಮತ್ತು ವಿಧಾನಸಭಾ ಸ್ಪೀಕರ್‌ನಿಂದ ಮಾನ್ಯತೆ ಪಡೆಯಿತು. ಇದರ ಪರಿಣಾಮವಾಗಿ 1998 ರಲ್ಲಿ ರಚನೆಯಾದ ನಂತರ ಮೊದಲ ಬಾರಿಗೆ ಟಿಎಂಸಿ ವಿಭಜನೆಯಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com