INDIA ಸಭೆಯಲ್ಲಿ ಭಾಗವಹಿಸಿರುವ ಮಮತಾಗೆ ಬಿಗ್ ಶಾಕ್; NDAಗೆ ಬೆಂಬಲ ನೀಡಿದ 20 TMC ಸಂಸದರು!

ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ(INDIA)ದ ಮಹತ್ವದ ಸಭೆಯಲ್ಲಿ ಭಾಗವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ಟಿಎಂಸಿ ಸಂಸದರು ಬಿಗ್ ಶಾಕ್ ನೀಡಿದ್ದಾರೆ.
Mamata Banerjee
ಮಮತಾ ಬ್ಯಾನರ್ಜಿ
Updated on

ನವದೆಹಲಿ: ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಈಗ ಇಬ್ಭಾಗವಾಗುವ ಆತಂಕದಲ್ಲಿದ್ದು, ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ.

ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ(INDIA)ದ ಮಹತ್ವದ ಸಭೆಯಲ್ಲಿ ಭಾಗವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ಟಿಎಂಸಿ ಸಂಸದರು ಬಿಗ್ ಶಾಕ್ ನೀಡಿದ್ದು, ಟಿಎಂಸಿಯ ಸುಮಾರು 20 ಸಂಸದರು ಎನ್‌ಡಿಎಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಮ್ಮ ಈ ನಿಲುವನ್ನು ತಿಳಿಸಿದ್ದಾರೆ ಎಂದು ಪಕ್ಷದ ಹಿರಿಯ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರು ಸೋಮವಾರ ಹೇಳಿಕೊಂಡ ನಂತರ ಟಿಎಂಸಿಯಲ್ಲಿ ರಾಜಕೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.

ಟಿಎಂಸಿ ಪ್ರಸ್ತುತ 28 ಲೋಕಸಭಾ ಸಂಸದರು ಮತ್ತು 12 ರಾಜ್ಯಸಭಾ ಸಂಸದರನ್ನು ಹೊಂದಿದೆ. ಈ ಪೈಕಿ 20 ಟಿಎಂಸಿ ಸಂಸದರು ಎನ್ ಡಿಎಗೆ ಬೆಂಬಲ ನೀಡುತ್ತಿರುವ ಪತ್ರವನ್ನು ಈಗಾಗಲೇ ಸ್ಪೀಕರ್ ಸಲ್ಲಿಸಿದ್ದಾರೆ.

Mamata Banerjee
ಮಮತಾಗೆ ಬಿಗ್ ಶಾಕ್: TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

ಪಿಟಿಐ ಜೊತೆ ಮಾತನಾಡಿದ ಘೋಷ್ ದಸ್ತಿದಾರ್, ಕೇಂದ್ರದ ಆಡಳಿತರೂಢ ಮೈತ್ರಿಕೂಟಕ್ಕೆ ಟಿಎಂ ಸಂಸದರು ತಮ್ಮ ಬೆಂಬಲಿ ಸೂಚಿಸುವ ಪತ್ರವನ್ನು ಈಗಾಗಲೇ ಸ್ಪೀಕರ್‌ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

"ನಾನು ಸೇರಿದಂತೆ ಸುಮಾರು 20 ಟಿಎಂಸಿ ಸಂಸದರು ಎನ್‌ಡಿಎಗೆ ಬೆಂಬಲ ನೀಡುವ ನಮ್ಮ ನಿರ್ಧಾರದ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ತಾವು ಮುಂದುವರೆದಿರುವುದಾಗಿ ಹೇಳಿಕೊಂಡ ಘೋಷ್ ದಸ್ತಿದಾರ್, ಇತರ ಸಂಸದರೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಘೋಷ್ ದಸ್ತಿದಾರ್ ಅವರು, ಎನ್ ಡಿಎ ಜೊತೆ ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಇದು ಜನಪ್ರಿಯ ಜನಾದೇಶವನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದರು.

ತಾವು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಿಂದ ಹೊರಬಂದಿರುವುದರಿಂದ ನಮಗೆ ಸಂಸತ್ತಿನಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು ಮತ್ತು ಟಿಎಂಸಿ ಸಂಸದೀಯ ನಾಯಕರಾಗಿರುವ ಅಭಿಷೇಕ್ ಬ್ಯಾನರ್ಜಿ ಅವರ ನಾಯಕತ್ವವನ್ನು ನಾವು ಒಪ್ಪುವುದಿಲ್ಲ ಎಂದು ಈ ಬಂಡಾಯ ಸಂಸದರು ಮನವಿ ಮಾಡಿದ್ದಾರೆ.

ಈ ಬಂಡಾಯ ಬಣದ ನಾಯಕಿಯಾಗಿ ಕಾಕೋಲಿ ಘೋಷ್ ದಸ್ತಿದಾರ್ (Kakoli Ghosh Dastidar) ಅವರನ್ನು ಗುರುತಿಸಬೇಕೆಂದು ಸ್ಪೀಕರ್ ಅವರಿಗೆ ಕೋರಲಾಗಿದೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಅರೂಪ್ ಚಕ್ರವರ್ತಿ, ಪಾರ್ಥ ಭೌಮಿಕ್, ಶತಬ್ದಿ ರಾಯ್, ಜಗದೀಶ್ ವಸುನಿಯಾ, ಜೂನ್ ಮಾಲಿಯಾ ಸೇರಿದಂತೆ ಪ್ರಮುಖ ನಾಯಕರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com