370 ರೂ ಬಿರಿಯಾನಿ ಬದಲಾಗಿ ಆಕೆಯಿಂದ ಇನ್ನೇನೋ ಬಯಸಿದ್ದೆ: ಹಾಸ್ಯನಟ ಪ್ರಣೀತ್ ಮೋರ್ ಸೇರಿದಂತೆ ಮೂವರ ವಿರುದ್ಧ FIR ದಾಖಲು!

ಗುರುಗ್ರಾಮದಲ್ಲಿ ಸ್ಟ್ಯಾಂಡ್​-ಅಪ್ ಶೋ ಲೈವ್ ಕಾರ್ಯಕ್ರಮದ ವಿಡಿಯೋ ಇದಾಗಿದ್ದು, ಅಶ್ಲೀಲ ಹೇಳಿಕೆಯಿಂದಾಗಿ ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದಾರೆ.
 Pranit More
ಪ್ರಣೀತ್ ಮೋರ್ ಮತ್ತಿತರರು
Updated on

ಮುಂಬೈ: ಭಾರತದ ಪ್ರಸಿದ್ಧ ಸ್ಟ್ಯಾಂಡ್​-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಅವರ ಇತ್ತೀಚಿನ ಕಾಮಿಡಿ ಶೋನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಗುರಿಯಾಗಿದೆ.

ಗುರುಗ್ರಾಮದಲ್ಲಿ ಸ್ಟ್ಯಾಂಡ್​-ಅಪ್ ಶೋ ಲೈವ್ ಕಾರ್ಯಕ್ರಮದ ವಿಡಿಯೋ ಇದಾಗಿದ್ದು, ಅಶ್ಲೀಲ ಹೇಳಿಕೆಯಿಂದಾಗಿ ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಈ ಸಂಬಂಧ ಇಂದು ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಣೀತ್ ಮೋರ್ ಸೇರಿದಂತೆ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಮಹಿಳೆಯರ ಘನತೆಗೆ ಕುಂದು ಉಂಟಾಗುವ ರೀತಿಯಲ್ಲಿ ಅಶ್ಲೀಲ, ಅಸಭ್ಯ ಹೇಳಿಕೆ ನೀಡಿದ ಯುವಕ ಹಿಮಾಂಶು ಜಂಗ್ರಾ, ಡಾ. ಸೇಜಲ್ ಪವಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಹಾರಾಷ್ಟ್ರ ಸೈಬರ್‌ನ ನೋಡಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023 ರ ಸೆಕ್ಷನ್ 75(1)(iv), 75(3), 294, ಮತ್ತು 353(2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 67 ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಎಫ್‌ಐಆರ್‌ನಲ್ಲಿ ಪ್ರಣಿತ್ ಮೋರ್, ಹಿಮಾಂಶು ಜಂಗ್ರಾ, ಡಾ. ಸೇಜಲ್ ಪವಾರ್ ಮತ್ತಿತರ ಹೆಸರನ್ನು ಉಲ್ಲೇಖಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯ ಪ್ರಸಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ವಿವಾದ? ಹಾಸ್ಯನಟ ಪ್ರಣೀತ್ ಮೋರ್ ಅವರ ಲೈವ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವಾಗ ವೇಳೆ ಮೈಕ್ ಪಡೆದ ಗುರುಗ್ರಾಮದ ಯುವಕ ಹಿಮಾಂಶು ಜಂಗ್ರಾ, ತಾನು ಇತ್ತೀಚೆಗೆ ಒಬ್ಬ ಹುಡುಗಿಯೊಂದಿಗೆ ಡೇಟಿಂಗ್‌ಗೆ ಹೋಗಿದ್ದ ಕಥೆಯನ್ನು ವಿವರಿಸಿದ್ದಾನೆ. ಅಲ್ಲಿ ಚಿಕನ್ ಬಿರಿಯಾನಿಗೆ 370 ರೂ. ಖರ್ಚು ಮಾಡಿದ್ದಾಗಿ ಹೇಳಿದ ಆತ, ಅದಕ್ಕೆ ಪ್ರತಿಯಾಗಿ ಆ ಹುಡುಗಿಯಿಂದ ಲೈಂಗಿಕತೆಯನ್ನು ನಿರೀಕ್ಷಿಸಿದ್ದಾಗಿ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾನೆ.

ಅಲ್ಲಿದ್ದವರು ಇದನ್ನು ಕೇಳಿ ನಕ್ಕಿದ್ದಾರೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ ಇಡೀ ದೇಶಾದ್ಯಂತ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿತು.

ಸಾರ್ವಜನಿಕರು ಯುವಕನ ಉದ್ಯೋಗದ ಪ್ರೊಫೈಲ್ ಅನ್ನು ಪತ್ತೆಹಚ್ಚಿ ಆತ ಕೆಲಸ ಮಾಡುತ್ತಿದ್ದ ಗುರುಗ್ರಾಮದ ಡಿಸೈನಿಂಗ್ ಕಂಪನಿಯನ್ನು ಟ್ಯಾಗ್ ಮಾಡಲು ಆರಂಭಿಸಿದರು. ವಿಷಯದ ಗಂಭೀರತೆಯನ್ನು ಅರಿತ ಕಂಪನಿಯು ಆ ಯುವಕನನ್ನು ಉದ್ಯೋಗದಿಂದ ವಜಾ ಮಾಡಿತ್ತು. ಸಾರ್ವಜನಿಕ ಆಕ್ರೋಶ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಾಸ್ಯನಟ ಪ್ರಣೀತ್ ಮೋರ್ ಮತ್ತು ತಪ್ಪು ಮಾಡಿದ ಯುವಕ ಇಬ್ಬರೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

 Pranit More
ಹೋಗಿದ್ದು Kunal Kamra ಕಾಮಿಡಿ ಶೋ'ಗೆ, ಆಗಿದ್ದು ಟ್ರಾಜಿಡಿ!: ರಜೆಯ ಮಜದಲ್ಲಿದ್ದ ಬ್ಯಾಂಕರ್ ಗೆ ಶಾಕ್, ಪೊಲೀಸ್ ಕರೆ: ಕಾಮಿಡಿಯನ್ ಹೇಳಿದ್ದೇನು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com